ಕುಣಿಗಲ್
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ : ಶಾಸಕ ಡಾ.ರಂಗನಾಥ್
ಕುಣಿಗಲ್ : ಮದ್ಯಪಾನ ಮಾಡಿ ವಾಹನ ಚಾಲನೆಯನ್ನಯಾವುದೇ ಕಾರಣಕ್ಕೂ ಮಾಡಬಾರದು, ಪ್ರಯಾಣಿಕರ ಸುರಕ್ಷತೆ ನಿಮ್ಮ ಕೈಯಲ್ಲಿರುತ್ತದೆ, ಅಲ್ಪ ಸ್ವಲ್ಪ ವ್ಯತ್ಯಾಸವಾದರೂ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯಬೇಕಾಗುತ್ತದೆ ಎಂದು ಆಟೋ ಚಾಲಕರಿಗೆ ಎಚ್ಚರಿಕೆ ನೀಡಿ ಈ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮಜರುಗಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಶಾಸಕ ಡಾ.ರಂಗನಾಥ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪೊಲೀಸ್ ಠಾಣೆಯಲ್ಲಿ ನಡೆದ ಆಟೋ ಚಾಲಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ ಆಟೋ ಚಾಲಕರು ಪೋನ್ ಮಾಡ ಸಮಸ್ಯೆಗಳನ್ನ ಹೇಳಿಕೊಂಡು ಪೊಲೀಸ್ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆಂದು ದೂರು ನೀಡಿದ ಹಿನ್ನೆಲೆಯಲ್ಲಿ ನಿಮ್ಮಗಳ ಸಮಸ್ಯೆಕೇಳಲೆಂದೆ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದೇನೆ ಆದರೆ ನಿಮ್ಮಗಳ ಸಮಸ್ಯೆ ಕೇಳಿದರೆ ನಿಮ್ಮದೇ ತಪ್ಪುಗಳಿವೆ, ಅದಕ್ಕೆ ನಾನು ನಿಮಗೆ ಸಹಕಾರ ನೀಡುವುದಿಲ್ಲ, ಮೊದಲು ಕುಡಿದು ವಾಹನ ಚಲಾಯಿಸುವುದನ್ನು ಬಿಡಿ, ಬೇಕಾಬಿಟ್ಟಿ ವಾಹನ ಓಡಿಸಬೇಡಿ. ವಾಹನ ಓಡಿಸುವಾಗ ವಾಹನಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳು ನಿಮ್ಮ ಬಳಿ ಕಡ್ಡಾಯವಾಗಿರಲಿ, ಮೊದಲು ನೀವು ಸರಿಹೋಗಿ ಎಂದು ಆಟೋಚಾಲಕರಿಗೆ ಶಾಸಕರು ಎಚ್ಚರಿಸಿದರು , ಬಲಾಢ್ಯರಿಗೆ, ದೌರ್ಜನ್ಯ, ದಬ್ಬಾಳಿಕೆ ಮಾಡುವವರಿಗೆ ಮಣೆ ಹಾಕಬೇಡಿ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಅವರು ಅಧಿಕಾರಿಗಳು ಕೆಟ್ಟದನ್ನ ಮಾಡೋಕೆ ಇಲ್ಲಿ ಬಂದಿಲ್ಲ, ಸಾರ್ವಜನಿಕರಿಗೆ ಒಳ್ಳೆಯದನ್ನೇ ಮಾಡೋಕೆ ಬಂದಿದ್ದಾರೆ, ಒಳ್ಳೆಯದು ಮಾಡುವಾಗ ಕೆಲವರಿಗೆ ತೊಂದರೆಯಾಗಬಹುದು, ಅದಕ್ಕಾಗಿ ಅಧಿಕಾರಿಗಳನ್ನ ಕೆಟ್ಟವರೆಂದುಹೇಳಬೇಡಿ ನಿಮ್ಮ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಿ ಕಡ್ಡಾಯವಾಗಿ ಕಾನೂನು ಪಾಲನೆ ಮಾಡಿಎಂದು ಬುದ್ಧಿ ಮಾತು ಹೇಳಿದರು.
ಇನ್ಸ್ಪೆಕ್ಟರ್ ಗುರುಪ್ರಸಾದ್ ಮಾತನಾಡಿ ದಾಖಲೆಗಳಿಲ್ಲದೆ ವಾಹನ ಚಲಾಯಿಸಬೇಡಿ, ಅಪ್ರಾಪ್ತರಿಗೆ, ದ್ವಿಚಕ್ರವಾಹನ ಕೊಡಬೇಡಿ,ಕೊಟ್ಟರೆ ಪಾಲಕರ ಮೇಲೆ ವಾಹನ ಓಡಿಸುವ ಬಾಲಕರ ಮೇಲೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಪಟ್ಟಣದಲ್ಲಿ ಪುಟ್‌ಪಾತ್‌ಗಳನ್ನ ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡಬೇಡಿ, ಪೊಲೀಸರು ನಿಮ್ಮ ವೈರಿಗಳಲ್ಲಾ, ನಿಮ್ಮ ಸೇವೆಗಾಗಿ ಪೊಲೀಸ್ ಇಲಾಖೆ ಸದಾಸಿದ್ದ, ಕಾನೂನು ಉಲ್ಲಂಘನೆಯಾದರೆ ನಾವು ಸುಮ್ಮನೆ ಕೂರುವುದಕ್ಕಾಗುವುದಿಲ್ಲ, ಕಾನೂನನ್ನ ಎಲ್ಲರೂ ಗೌರವಿಸಿ ಪಾಲಿಸೋಣ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಪಿಎಸ್‌ಐ ಜಮಾಲ್ ಅಹಮ್ಮದ್, ಆಟೋ ಚಾಲಕರು ಉಪಸ್ಥಿತರಿದ್ದರು.