ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲಿ : ರಂಗಾಪುರ ಶ್ರೀಗಳು
ತಿಪಟೂರು : ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತಾಪಿ ಜನಗಳಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ರಂಗಾಪುರ ಕೆರಗೋಡಿ ಸುಕ್ಷೇತ್ರ ಅಧ್ಯಕ್ಷರಾದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿಎಚ್ ರಸ್ತೆಯಲ್ಲಿರುವ ತ್ರಿಮೂರ್ತಿ ಚಿತ್ರಮಂದಿರದ ಪಕ್ಕ ಪ್ರಜ್ಞಾ ಬಿಲ್ಡಿಂಗ್ ನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಶ್ರೀ ಗುರು ಪರದೇಶಿ ಕೇಂದ್ರ ಸೌಹಾರ್ದ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರು ಸಹಕಾರ ಸಂಘದಲ್ಲಿ ಷೇರುದಾರರಾಗಿ ಪರಸ್ಪರ ಹೊಂದಾಣಿಕೆಯಿಂದ ವ್ಯವಹಾರವನ್ನು ವ್ಯವರಿಸುತ್ತಾ, ಎಲ್ಲಾ ವರ್ಗದವರು ಆರ್ಥಿಕವಾಗಿ ಸ್ವಾವಲಂಬನೆ ಹೊಂದಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ ಷಡಕ್ಷರಿ. ಎಪಿಎಂಸಿ ಮಾಜಿ ನಿರ್ದೇಶಕ ಮಧುಸೂದನ್. ರಾಜ್ಯ ಹಾಲು ಒಕ್ಕೂಟದ ನಿರ್ದೇಶಕ ಎಂ ಕೆ ಪ್ರಕಾಶ್. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತ್ರಿಯಂಬಕ. ಎಪಿಎಂಸಿ ಮಾಜಿ ಉಪಾಧ್ಯಕ್ಷ ನಾಗರಾಜ್. ನಮೃತ ಆಯಿಲ್ ಮಿಲ್ ಮಾಲೀಕ ಶಿವಪ್ರಸಾದ್. ಹೋಗನ ಘಟ್ಟ. ಸಮಾಜ ಸೇವಕ ಕೆ. ಟಿ ಶಾಂತಕುಮಾರ್ . ಕೃಷಿಕ ಸಮಾಜದ ದೇವರಾಜ್. ಸಮಾಜದ ಮುಖಂಡ ಹೋಗನಘಟ್ಟ ಯೋಗಾನಂದ. ಗುರುಕುಲ ಮಠದ ಮೇಲ್ವಿಚಾರಕರಾದ ಸಿದ್ದರಾಮಣ್ಣ. ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್. ಸೇರಿದಂತೆ ಮತ್ತಿತರ ಗಣ್ಯರು ಹಾಜರಿದ್ದರು.