ಕುಣಿಗಲ್
ಗೊಂದಲದ ಗೂಡಾದ ಕುಣಿಗಲ್ ಪುರಸಭೆ ಸಾಮಾನ್ಯ ಸಭೆ : ಭ್ರಷ್ಟಾಚಾರದಲ್ಲಿ ಮುಳುಗಿರುವ ಆಡಳಿತ : ಸದಸ್ಯರ ಆರೋಪ
ಕುಣಿಗಲ್ : ಪುರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಕೆಲವು ಪುರಸಭಾ ಸದಸ್ಯರು ಆರೋಪಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ರಂಗಸ್ವಾಮಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರುಗಳಾದ ಅರುಣ್ ಕುಮಾರ್, ನಾಗೇಂದ್ರ, ಶಂಬು ರಾಮಣ್ಣ, ಹಾಗೂ ಬಿಜೆಪಿ ಸದಸ್ಯ ಕೃಷ್ಣ ಮಾತನಾಡಿ ಪುರಸಭೆ ಕಾರ್ಯಾಲಯ ಭ್ರಷ್ಟಾಚಾರದಲ್ಲಿ ಮುಳುಗಿದೆ ಯಾವುದೇ ಸಾರ್ವಜನಿಕರ ಕೆಲಸ ಕಾರ್ಯಗಳು ನಿಗದಿತ ವೇಳೆಗೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಚಿತ್ವ ಮರೆಯಾಗಿದೆ ಎಲ್ಲೆಂದರಲ್ಲಿ ಕಸದ ರಾಶಿಯೇ ಕಾಣುತ್ತಿದೆ, ರಸ್ತೆಯ ಇಕ್ಕೆಲೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ, ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ಕಸದ ರಾಶಿ ತುಂಬಿ ತುಳುಕುತ್ತಿದ್ದರು ಪರಿಸರ ಎಂಜಿನಿಯರ್ ಚಂದ್ರಶೇಖರ್ ನಿದ್ದೆ ಮಾಡುತ್ತಿದ್ದಾರೆ ಈ ಅಧಿಕಾರಿಗೆ ಎಷ್ಟು ಬಾರಿ ಎಚ್ಚರಿಸಿದರು ಕಾರ್ಯವೈಖರಿಯನ್ನು ಸರಿಪಡಿಸಿ ಕೊಳ್ಳುತ್ತಿಲ್ಲ ಇದಲ್ಲದೆ ಕೆಲವು ವಾರ್ಡ್ ಗಳಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಬರುತ್ತಿದೆ ಸಮರ್ಪಕವಾಗಿಪಟ್ಟಣದ ಜನತೆಗೆ ನೀರನ್ನು ಒದಗಿಸಲು ಪುರಸಭೆ ಆಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬೀದಿ ದೀಪಗಳು ಕೆಟ್ಟು ನಿಂತಿವೆ ಸರಿಯಾದ ವೇಳೆಗೆ ಲೈಟ್ ಹಾಕುತ್ತಿಲ್ಲ ಸಾರ್ವಜನಿಕರ ಈ ಖಾತೆ ಮಾಡುತ್ತಿಲ್ಲ ಅಧ್ಯಕ್ಷರು ಹೇಳಿದವರಿಗೆ ಕಚೇರಿಯಲ್ಲಿ ಈ ಖಾತೆಗಳು ಆಗುತ್ತಿವೆ ಪುರಸಭೆ ಸದಸ್ಯರುಗಳಿಗೆ ಬೆಲೆಯೇ ಇಲ್ಲವೆ ನಮ್ಮ ವಾರ್ಡ್ ಗಳ ಕೆಲಸ ಕಾರ್ಯಗಳು ಏನೂ ಆಗುತ್ತಿಲ್ಲ ಮತ ಹಾಕಿ ಪುರಸಭೆ ಸದಸ್ಯ ರನ್ನಾಗಿ ಆಯ್ಕೆ ಮಾಡಿದ ಜನರಿಗೆ ಉತ್ತರ ಹೇಳಲು ಆಗುತ್ತಿಲ್ಲ ಕೇವಲ ಅಧ್ಯಕ್ಷರು ಹೇಳಿದರೆ ಮಾತ್ರ ಕೆಲಸ ಆಗುತ್ತಿದೆ ಹೀಗಾದರೆ ನಾವು ಪುರಸಭಾ ಸದಸ್ಯರಲ್ಲವೇ ಎಂದು ಪ್ರಶ್ನಿಸಿ ಈಗಾದರೆ ಪುರಸಭೆ ಏಕೆ ಬೇಕು ? ಬಾಗಿಲು ಮುಚ್ಚಿ ಎಂದು ಹತ್ತು ಹಲವಾರು ಆರೋಪಗಳ ಸುರಿಮಳೆಗೈದರುಈ ಮಧ್ಯೆ ಕಾಂಗ್ರೆಸ್ ಪಕ್ಷದ ಪುರಸಭೆ ಅಧ್ಯಕ್ಷ ರಂಗಸ್ವಾಮಿ ಸದಸ್ಯರುಗಳಾದ ಅರುಣ್ ಕುಮಾರ್, ಶಂಭು ರಾಮಣ್ಣ, ನಾಗೇಂದ್ರ, ಕೃಷ್ಣರವರ ಮಧ್ಯೆ ಮಾತಿನ ಚಕಮಕಿ ನಡೆದು ಸಭೆ ಗೊಂದಲಮಯ ಗೂಡಾಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ತಬಸ್ಸುಮ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ , ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ,ಹಾಗೂ ಎಂಜಿನಿಯರ್ ಗಳಾದ ಚಂದ್ರಶೇಖರ್ ಸುಮಾ ಬಿಂದುಮಾಧವ್ ಪುರಸಭೆ ಸದಸ್ಯರುಗಳಾದ ಕೋಟೆ ನಾಗಣ್ಣ ಉದಯಕುಮಾರ್ ದೇವರಾಜ್ ಜಯಲಕ್ಷ್ಮಿ ಮಂಜುಳಾ ಗೋಪಿ ಹಾಗೂ ಪುರಸಭೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.