ಮೌಲ್ಯಮಾಪಕರ ಮನಗೆದ್ದ ಶಿಕ್ಷಣ ಸಚಿವ ಬಿ.ಸಿ ನಾಗೇಶ್

ತಿಪಟೂರು : ರಾಜ್ಯದ ಕಳೆದ ಮೂವತ್ತು ವರ್ಷಗಳಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಹಲವಾರು ಸಣ್ಣಪುಟ್ಟ ಗಲಾಟೆಗಳು ಪ್ರತಿಭಟನೆಗಳ ಮೂಲಕ ಗಮನ ಸೆಳೆಯುತ್ತಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಈ ಬಾರಿ (2022) ಯಾವುದೇ ಗೊಂದಲವಿಲ್ಲದೆ ಮುಗಿದು ಸುಲಭವಾಗಿ ಪರೀಕ್ಷೆಯನ್ನು ನಿಭಾಯಿಸಿದ ಕೀರ್ತಿ ಸರಳ ಸಜ್ಜನಿಕೆಯ ಶಿಕ್ಷಣ ಮಂತ್ರಿ ಬಿ.ಸಿ ನಾಗೇಶ್‌ರವರ ದೂರದೃಷ್ಟಿ ಯೋಚನೆ-ಯೋಜನೆಯಾಗಿರುವುದು ಇದಕ್ಕೆ ಮೂಲ ಅಂಶವಾಗಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯು ಪ್ರಾರಂಭವಾಗುವ ಮುನ್ನವೇ ಬಿಸಿ ತುಪ್ಪವಾಗಿ ಕಂಡ ಹಿಜಾಬ್ ಸಮಸ್ಯೆಯನ್ನು ನ್ಯಾಯಲಾಯದ ಆದೇಶದಂತೆ ಸರ್ಕಾರ ಸೂಚನೆ-ಪಾಲನೆ ಮಾಡಿದ್ದು ಪರೀಕ್ಷಯನ್ನು ಯಶಸ್ವಿಗೊಳಿಸಿದ್ದು ಮುಂದಿನ ಹಂತವಾಗಿ ಪ್ರಶ್ನೆ ಪತ್ರಿಕೆಗಳನ್ನು ಮೌಲ್ಯಮಾಪನಕರ ಸಮಸ್ಯೆಯು ಉಲ್ಬಣಗೊಳ್ಳುತ್ತದೆ ಅಂದುಕೊಂಡಿದ್ದ ಸಾರ್ವಜನಿಕರಿಗೆ ಯಾವುದೇ ಗರಿಕೆಯಷ್ಟು ಸಮಸ್ಯೆಯು ಬರದಂತೆ ನಿಭಾಯಿಸಿದ ಕೀರ್ತಿ ಈ ಬಾರಿಯ ಬೊಮ್ಮಯಿ ಸರ್ಕಾರದ ಶಿಕ್ಷಣದ ಸಚಿವರ ಅತಿ ಶ್ರಮವೇ ಕಾರಣವಾಗಿದೆ.
ಪ್ರತಿ ಬಾರಿಯು ಶಿಕ್ಷಕರು ಅವರ ಸಮಸ್ಯೆಗಳನ್ನು ಮೌಲ್ಯಮಾಪನದ ಮುಂದಿಟ್ಟು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು, ಕಪ್ಪು ಬಾವುಟ ಪ್ರದರ್ಶನ, ಮೌಲ್ಯಮಾಪನಕ್ಕೆ ಶಿಕ್ಷಕರ ಪ್ರತಿಭಟನೆಯೇ ಹೆಚ್ಚಾಗಿ ವಿದ್ಯಾರ್ಥಿಗಳ ಪೋಷಕರಲ್ಲಿ ಆಂತಕ ಕಾಡುತ್ತಿತ್ತು ಆದರೆ ಈಬಾರಿ ಯಾವುದೇ ಆಂತಕ ಹಾಗೂ ಗೊಂದಲವಿಲ್ಲದೆ ಮುಗಿದು ಫಲಿತಾಂಶವನ್ನು ನೀಡಲು ಸಿದ್ದರಾದ ಶಿಕ್ಷಣ ಸಚಿವ ಬಿಸಿ ನಾಗೇಶ್‌ರವರ ಭವ್ಯ ಭಾರತದ ಮಕ್ಕಳ ವಿದ್ಯಾಬ್ಯಾಸದ ಯೋಜನೆಯ ಪರಿಕಲ್ಪನೆಯಾಗಿದೆ.
ವರದಿ: ಪ್ರಶಾಂತ್ ಕರೀಕೆರೆ