ಕುಣಿಗಲ್
ಮಾರ್ಕೋನಹಳ್ಳಿ ಜಲಾಶಯ ಕೋಡಿ : ರೈತರ ಮುಖದಲ್ಲಿ ಮಂದಹಾಸ

ಕುಣಿಗಲ್ : ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ರಾಜ್ಯದ ಪ್ರತಿಷ್ಠಿತ ಜಲಾಶಯಗಳಲ್ಲೊಂದಾದ ಮಾರ್ಕೋನಹಳ್ಳಿ ಜಲಾಶಯ ಕೋಡಿ ಬಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ತಾಲ್ಲೂಕಿನ ಅಮೃತೂರು ಹೋಬಳಿ ಮಾರ್ಕೋನಹಳ್ಳಿ ಜಲಾಶಯದಲ್ಲಿ ಸುಮಾರು ನೀರು ಖಾಲಿಯಾಗಿ ಮತ್ತೆ ಡ್ಯಾಂ ಭರ್ತಿಯಾಗಲು ಒಂದೂವರೆ ಅಡಿ ನೀರು ಬಾಕಿ ಇತ್ತು ಮಂಗಳವಾರ ರಾತ್ರಿ ಮಾರ್ಕೋನಹಳ್ಳಿ ಜಲಾಶಯದ ಮೇಲ್ಭಾಗದಲ್ಲಿ ಸುರಿದ ಭಾರಿ ಮಳೆಗೆ ಒಂದೇ ರಾತ್ರಿ ಸುಮಾರು ಒಂದೂವರೆ ಅಡಿಗೂ ಹೆಚ್ಚು ನೀರು ಬಂದು ಕೋಡಿಯಾಗಿ ನೀರು ನದಿಯಲ್ಲಿ ಹರಿಯುತ್ತಿದೆ ಈ ಸಂಬಂಧ ಜಲಾಶಯ ನಿರ್ವಹಣೆ ಮಾಡುತ್ತಿರುವ ಇಂಜಿನಿಯರ್ ಜಯರಾಜ್ ಪತ್ರಿಕೆಯೊಂದಿಗೆ ಮಾತನಾಡಿ ಜಲಾಶಯಕ್ಕೆ ಮೇಲಿಂದ ಇನ್ನೂ ಹೆಚ್ಚು ನೀರು ಹರಿದು ಬರುತ್ತಿದೆ ಆದ್ದರಿಂದ ನದಿಗೆ ಯಾವ ಕ್ಷಣದಲ್ಲಾದರೂ ಹೆಚ್ಚು ನೀರನ್ನು ಹರಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ಮಾರ್ಕೋನಹಳ್ಳಿ ಜಲಾಶಯದ ಹಿಂಬದಿಯಲ್ಲಿರುವ ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರು ಎಚ್ಚೆತ್ತುಕೊಂಡು ಜನ ಜಾನುವಾರುಗಳನ್ನು ನದಿಯ ದಂಡೆಗೆ ಕಳುಹಿಸದಂತೆ ನಿಗಾ ವಹಿಸಬೇಕೆಂದು ನದಿಪಾತ್ರದ ರೈತರಲ್ಲಿ ಮನವಿ ಮಾಡಿದ ಅವರು ಜಲಾಶಯವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಕೂಡ ಕೋಡಿಯ ಬಳಿ ಹಾಗೂ ನದಿಯ ಬಳಿ ನೋಡಲು ಹೋದಾಗ ಮಕ್ಕಳನ್ನು ಹರಿಯುತ್ತಿರುವ ಹಾಗೂ ಡ್ಯಾಂನ ನೀರಿಗೆ ಇಳಿಸದೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.