ಮುನಿಯೂರು ಗ್ರಾ.ಪಂ. ನೂತನ ಉಪಾಧ್ಯಕ್ಷರಾಗಿ ಕಾವ್ಯ ಮಂಜುನಾಥ್ ಆಯ್ಕೆ
ತುರುವೇಕೆರೆ : ತಾಲೂಕಿನ ಮುನಿಯೂರು ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಕಾವ್ಯಮಂಜುನಾಥ್ ಅವಿರೋಧವಾಗಿ ಆಯ್ಕೆಗೊಂಡರು.
ಮುನಿಯೂರು ಗ್ರಾ.ಪಂ.ನ ಹಿಂದಿನ ಉಪಾದ್ಯಕ್ಷ ಪಾಂಡುರಂಗಯ್ಯ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. 16 ಮಂದಿ ಸದಸ್ಯ ಬಲವುಳ್ಳ ಪಂಚಾಯಿತಿಯಲ್ಲಿ ಉಪಾದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಕಾವ್ಯಮಂಜುನಾಥ್ ನಾಮಪತ್ರ ಸಲ್ಲಿಸಿದರು. ಅಂತಿಮವಾಗಿ ಕಣದಲ್ಲಿ ಏಕೈಕರಾಗಿ ಉಳಿದ ಕಾವ್ಯಮಂಜುನಾಥ್ ನೂತನ ಉಪಾದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಶಿರಸ್ತೇದಾರ್ ಸುನಿಲ್‌ಕುಮಾರ್ ಘೋಷಣೆ ಮಾಡಿದರು.
ನೂತನ ಉಪಾದ್ಯಕ್ಷೆ ಕಾವ್ಯಮಂಜುನಾಥ್ ಮಾತನಾಡಿ ನಾನು ಅವಿರೋಧವಾಗಿ ಉಪಾದ್ಯಕ್ಷೆ ಸ್ಥಾನ ಅಲಂಕರಿಸಲು ಕಾರಣೀಭೂತರಾದ ಎಲ್ಲರಿಗೂ ಅನಂತ ಕೃತಜ್ಞತೆ ಸಮರ್ಪಿಸುತ್ತೇನೆ. ಸರ್ವ ಸದಸ್ಯರ ಸಲಹೆ ಸಹಕಾರದೊಂದಿಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲಸೌಕರ್ಯ ಒದಗಿಸಲು ಒತ್ತು ನೀಡುತ್ತೇನೆ ಎಂದರು.
ನೂತನ ಉಪಾದ್ಯಕ್ಷರನ್ನು ಅದ್ಯಕ್ಷರಾದ ವರಮಹಾಲಕ್ಷ್ಮೀ, ನಿಕಟಪೂರ್ವ ಉಪಾದ್ಯಕ್ಷ ಪಾಂಡುರಂಗಯ್ಯ,ಗೊಟ್ಟಿಕೆರೆಕಾಂತರಾಜ್,ಪಿ.ಎ.ಸಿ.ಬಿ. ಮಾಜಿ ಅದ್ಯಕ್ಷ ವೆಂಕಟೇಶ್, ಪಿ.ಡಿ.ಓ. ಚಂದ್ರಶೇಖರ್, ಸ್ಭೆರಿದಂತೆ ಸಹ ಸದಸ್ಯರುಗಳು ಅಭಿನಂದಿಸಿ ಶುಭ ಕೋರಿದರು.