ತಿಪಟೂರು
ಕಾಡಸಿದ್ದೇಶ್ವರ ಶ್ರೀಗಳ ಆಶೀರ್ವಾದದಿಂದ ರಾಜಕೀಯ ಅಧಿಕಾರ : ಸಚಿವ ಶ್ರೀರಾಮುಲು
ತಿಪಟೂರು: ಶ್ರೀಮಠದ ಸಾಮಾನ್ಯ ಭಕ್ತನಾಗಿ ಹತ್ತು ವರ್ಷಗಳ ಹಿಂದೆ ಭೇಟಿ ನೀಡಿ ಜನಸೇವೆ ಮಾಡಲು ಆಶೀರ್ವದಿಸಿ ಎಂದು ಬೇಡಿದೆ ಗುರುಗಳು ನನಗೆ ಜನಸೇವೆಯ ಜೊತೆಗೆ ಸಮಾಜಸೇವೆಯನ್ನು ಮಾಡುವಂತೆ ಆಶೀರ್ವಾದ ಮಾಡಿದ್ದರು, ರಾಜ್ಯ ಸಾರಿಗೆ ಸಚಿವ ಮತ್ತು ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದರು.
ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗುರುಗಳ ಆಶೀರ್ವಾದ ಪಡೆಯಲು ಬಂದ ಸಂದರ್ಭದಲ್ಲಿ ರಾಜಕೀಯದಲ್ಲಿ ಉನ್ನತ ಹುದ್ದೆ ನಿನ್ನದಾಗಲಿ ಎಂದು ಹತ್ತಾರು ವರ್ಷಗಳ ಹಿಂದೆ ಆಶೀರ್ವದಿಸಿದರು, ಶ್ರೀಮಠದಲ್ಲಿ ಬಡವ, ಶ್ರೀಮಂತ, ಜಾತಿ ಯಾವುದೇ ಭೇದಭಾವವಿಲ್ಲದೆ 12ನೇ ಶತಮಾನದ ಬಸವಣ್ಣನವರ ನುಡಿಯಂತೆ ,ಇವ ನಮ್ಮವ’ಎಂದು ಸಾಮಾನ್ಯ ಭಕ್ತನಿಗೂ ಆಶೀರ್ವಾದ ನೀಡುತ್ತಾರೆ, ಒಮ್ಮೆ ಒಂದು ಮಗು ದೇವರನ್ನು ಒಂದು ಹೂವನ್ನು ನೀಡು ಎಂದು ಬೇಡಿದಾಗ ಭಗವಂತನು ಹೂವಿನ ತೋಟವನ್ನು ನೀಡಿದರಂತೆ, ಶಿವನು ಎಲ್ಲಾ ಭಕ್ತರಿಗೂ ದರ್ಶನ ನೀಡಲಾಗದೆ ಗುರುವಿನ ರೂಪದಲ್ಲಿ ಭೂಲೋಕಕ್ಕೆ ಕಳುಹಿಸಿದ್ದಾನೆ ಹರನ ರೂಪದ ಗುರುವನ್ನು ಭಕ್ತಿಯಿಂದ ಬೇಡಿದಾಗ ಇಷ್ಟಾರ್ಥ ನೆರವೇರಿಸುತ್ತಾನೆ ಹರನ ರೂಪದ ನಾ ಕಂಡ ಗುರು ಡಾ, ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು, ಎಂದು ಮಾತನಾಡಿದರು,
ಗಂಜಿಗಟ್ಟಿ ಮಠದ ಸ್ವಾಮೀಜಿ ಮಾತನಾಡಿ ಸಾವಿರಾರು ವರ್ಷದ ಹಿಂದೆ ಕಾಡಸಿದ್ದೇಶ್ವರ ಸ್ವಾಮಿಗಳು ಕಾಡಿನಿಂದ ಕೂಡಿದ ಈ ಕ್ಷೇತ್ರದಲ್ಲಿ ತಪಸ್ಸು ಮಾಡುವಾಗ ಪಾಳೇಗಾರ ವಂಶದ ಮುದಿಯಪ್ಪ ನಾಯಕ ಬೇಟೆಗಾಗಿ ಬಂದು ಗುರುಗಳನ್ನು ಪ್ರಾಣಿ ಎಂದು ಭಾವಿಸಿ ತನ್ನ ಬಾಣ ಬಿಟ್ಟಾಗ, ಶ್ರೀಗಳು ಶಾಪ ನೀಡುವ ಬದಲು ಆಶೀರ್ವಾದ ನೀಡುತ್ತಾರೆ, ಶ್ರೀಮಠದಲ್ಲಿ ಅಂದಿನಿಂದ ಇಂದಿಗೂ ಯಾರಿಗೂ ಸಹ ಗುರುಗಳು ಶಾಪ ನೀಡಿಲ್ಲ ಎಂತಹ ತಪ್ಪು ಮಾಡಿದರು ಶ್ರೀಮಠದಲ್ಲಿ ಗುರುಗಳ ಆಶೀರ್ವಾದ ಪಡೆದವರು ಶಾಪ ವಿಮೋಚನೆಯಾಗಿ ಸನ್ಮಾರ್ಗದಲ್ಲಿ ನಡೆಯುತ್ತಾರೆ ಎಂದರು.
ಶ್ರೀ ಮಠದ ವ್ಯವಸ್ಥಾಪಕ ಶಂಭು,ಜಿ,ಮಠ್ ಮಾತನಾಡಿ ಮುಗಿಯುವ ಕೈಗಳಿಗಿಂತ ದುಡಿಯುವ ಕೈಗಳು ಲೇಸು ಎಂಬಂತೆ, 38 ವರ್ಷಗಳಿಂದ ತಮ್ಮ ತಪೋನಿಷ್ಠೆ ಹಾಗೂ ಸಂಕಲ್ಪದ ಬಲದಿಂದ ಶ್ರೀಮಠದ ಲಕ್ಷಾಂತರ ಭಕ್ತರ ಸಹಕಾರದೊಂದಿಗೆ ತಿಪಟೂರು ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹತ್ತಾರು ಶಾಲೆಗಳನ್ನು ತೆರೆದು ವಿದ್ಯಾಭ್ಯಾಸಕ್ಕೆ ಸಹಕಾರ, ಮಾಡಿಕೊಟ್ಟಿದ್ದಾರೆ ಭಕ್ತರ ಕಷ್ಟ ಸುಖಗಳಿಗೆ ಸ್ಪಂದಿಸಿ ಕ್ಷೇತ್ರದ ಹಿರಿಮೆಯನ್ನು ನಾಡಿನಾದ್ಯಂತ ಪ್ರಸಿದ್ಧಿ ಗೊಳಿಸಿದ್ದಾರೆ ಶ್ರೀ ಕ್ಷೇತ್ರದ ಇನ್ನು ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ, ಭಕ್ತರ ಸಹಕಾರ ಬೆಳೆದ ಮಠಕ್ಕೆ, ತಮ್ಮ ಶಕ್ತಾನುಸಾರ ತನು-ಮನ-ಧನ ಅವಶ್ಯಕತೆ ಇದೆ ಎಂದು ಮಾತನಾಡಿದರು, ಕಾರ್ಯಕ್ರಮದಲ್ಲಿ ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಅಂಗನ್ನು ತೊರೆದು ಸೇವೆ ಮಾಡಿದ ವೈದ್ಯರು, ದಾದಿಯರು,ಆಶಾ ಕಾರ್ಯಕರ್ತೆಯರು ಮುತ್ತು ಪತ್ರಕರ್ತರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿದರು,ನಂತರ ಸಾಂಸ್ಕೃತಿಕ ಕಾರ್ಯಕ್ರಮ ಕಿರುತೆರೆ ಕಲಾವಿದರಿಂದ ನಡೆಯಿತು , ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಸುಮಾರು 31 ತಂಡಗಳು ಭಾಗವಹಿಸಿದ್ದವು, ಫೈನಲ್ ಪಂದ್ಯದಲ್ಲಿ ಗುಡ್ಡದ ಹೊಸಳ್ಳಿ ಮೊದಲ ಸ್ಥಾನ ನೊಣವಿನಕೆರೆ ಎರಡನೇ ಸ್ಥಾನ ಸಂಕ್ಲಾಪುರ ಮೂರನೇ ಸ್ಥಾನ ನಂತರ ಕೆಂಕೆರೆ ಗ್ರಾಮದ ತಂಡಗಳು ನಾಲ್ಕನೇ ಸ್ಥಾನ ಹಂಚಿಕೊಂಡವು, ಕಬಡ್ಡಿ ಪಂದ್ಯದ ಆಯೋಜನೆಯನ್ನು ಬುರುಡೆ ಘಟ್ಟದ ನಾಗರಾಜ ಶಾಸ್ತ್ರಿ ಆಯೋಜಿಸಿದ್ದರು ಬಹುಮಾನ ವಿತರಣೆಯಲ್ಲಿ ತಿಪಟೂರಿನ ನಿವೃತ್ತ ಎ,ಸಿ,ಪಿ, ಲೋಕೇಶ್ವರ್ ಹಾಗೂ ಕಿರಿಯ ಶ್ರೀಗಳಾದ ಅಭಿನವ ಕಾಡ ಸಿದ್ದೇಶ್ವರ ಶ್ರೀಗಳು ವಿತರಿಸಿದರು ಉಚಿತ ಸಾಮೂಹಿಕ ವಿವಾಹ ನಡೆಯಿತು ಕಾರ್ಯಕ್ರಮದಲ್ಲಿ ಹೆಗ್ಗಡೆಹಳ್ಳಿ ಸ್ವಾಮೀಜಿ, ಕರ್ಜಗಿ ಶ್ರೀಗಳು ಗುಬ್ಬಿಯ ಗೋಸಲ ತೆವಡಿಹಳ್ಳಿ ಶ್ರೀಗಳು, ಭಾಗವಹಿಸಿ ಸುಮಾರು ಮೂರುದಿನಗಳಿಂದ 25 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.
|
|