ಕುಣಿಗಲ್
ಅಬಕಾರಿ ಪೋಲಿಸರ ದಾಳಿ 5ಲಕ್ಷ ಮೌಲ್ಯದ ಗಾಂಜಾ ವಶ
ಕುಣಿಗಲ್ : ಅಬಕಾರಿ ಇಲಾಖೆಯವರು ಮಿಂಚಿನ ಕಾರ್ಯಾಚರಣೆ ನಡೆಸಿ 5ಲಕ್ಷದ 36ಸಾವಿರದ 600 ರೂ ಬೆಲೆಬಾಳುವ 13,415 ಕೆ ಜಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ 4 ಮಂದಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆ ಅಬಕಾರಿ ಆಯುಕ್ತರಾದ ಶೈಲಜಾ ಎ ಕೋಟೆ ಹಾಗೂ ಅಬಕಾರಿ ಉಪನಿರೀಕ್ಷಕರಾದ ಸಿದ್ದಲಿಂಗಸ್ವಾಮಿ ಕೆ ಪಿ ಹಾಗೂಅಬಕಾರಿ ಇನ್ಸ್ ಪೆಕ್ಟರ್ ಗಳಾದ ದಿವ್ಯಶ್ರೀ ಟಿ,ಜೆ, ಏ,ಕೆ, ನವೀನ್ ಅರುಣ್ ಕುಮಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಅಜ್ಜಣ್ಣ ರವರ ಮಾರ್ಗದರ್ಶನದಲ್ಲಿ ಕುಣಿಗಲ್ ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಮಹಾವೀರ ನಗರ ಸಮೀಪವಿರುವ ಅಶ್ವತ್ಥಕಟ್ಟೆ ಬಳಿ ಒಬ್ಬ ವ್ಯಕ್ತಿಯನ್ನು ಹಾಗೂ ತುಮಕೂರಿನ ವಿವಿಧ 3 ಕಡೆ ಗಾಂಜಾ ಸಾಗಾಟ ಮಾಡುತ್ತಿದ್ದ 3ವ್ಯಕ್ತಿಗಳನ್ನು ಕುಣಿಗಲ್ ಮತ್ತು ತುಮಕೂರು ಅಬಕಾರಿ ಪೋಲಿಸರ ಖಚಿತ ಮಾಹಿತಿಯನ್ನು ಆಧರಿಸಿ ಗಾಂಜಾ ಸಾಗಾಟ ಮಾಡುತ್ತಿದ್ದ 4 ಮಂದಿಯನ್ನು ಬಂಧಿಸಿ ತಮ್ಮ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಪೊಲೀಸರುಗಳಾದ ರಾಜಕುಮಾರ್,ಯಂಜಾರಪ್ಪ, ಸಂತೋಷ್ ಕುಮಾರ್, ಪ್ರಕಾಶ್, ಯೋಗೇಶ್, ವೈಜನಾಥ್, ಮಲ್ಲಪ್ಪಣ್ಣ, ಮಸರಕಲ್, ಮಂಜುನಾಥ್ ಒಳಗೊಂಡಂತೆ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.