ಇಂಗ್ಲೀಷ್ ಭಾಷಾ ಶಿಕ್ಷಕರ ನೇಮಕಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಎಸ್.ಡಿ.ಎಂ.ಸಿ ಪ್ರತಿಭಟನೆ
ತುರುವೇಕೆರೆ : ತಾಲೂಕಿನ ಮುನಿಯೂರು ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶಾಶ್ವತವಾಗಿ ಇಂಗ್ಲೀಷ್ ಭಾಷಾ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಎಸ್.ಡಿ.ಎಂ.ಸಿ. ಅಧ್ಯಕ್ಷರು, ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.
ಈ ಕುರಿತು ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜು ಮಾತನಾಡಿ ಕಳೆದ ಕೆಲ ತಿಂಗಳುಗಳಿಂದ ಶಿಕ್ಷಕಿ ಸುಮಾ ನಮ್ಮ ಶಾಲೆಗ ಬರುತ್ತಿಲ್ಲ, ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷಾ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಇಂಗ್ಲೀಷ್ ಭಾಷಾ ಶಿಕ್ಷಕರನ್ನು ನೇಮಕ ಮಾಡುವಂತೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ, ನಮ್ಮೂರ ಶಾಲೆಯಲ್ಲಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಈ ಕೂಡಲೇ ಶಾಶ್ವತವಾಗಿ ಇಂಗ್ಲೀಷ್ ಭಾಷಾ ಶಿಕ್ಷಕರನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಇ.ಸಿ.ಓ. ಸಿದ್ದಪ್ಪ ಮಾತನಾಡಿ ಮುನಿಯೂರು ಶಾಲೆಯಲ್ಲಿ ಇಂಗ್ಲೀಷ್ ಭಾಷಾ ಶಿಕ್ಷಕರ ಕೊರತೆ ಇರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಎಂ.ಬೇವಿನಹಳ್ಳಿಯಿಂದ ಶೀಲಾ ಎಂಬ ಶಿಕ್ಷಕರನ್ನು ಮುನಿಯೂರು ಶಾಲೆಗ ನಿಯೋಜಿಸಲಾಗಿದೆ. ಸದರಿ ಶಿಕ್ಷಕರು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪೂರ್ಣಾವಧಿಯಾಗಿ ಇಂಗ್ಲೀಷ್ ಶಿಕ್ಷಕರಾಗಿ ಮುನಿಯೂರು ಶಾಲೆಗ ಬರಲಿದ್ದಾರೆ. ಇಲಾಖೆಯು ಶೈಕ್ಷಣಿಕ ವಾತಾವರಣಕ್ಕೆ ಪೂರಕ ವ್ಯವಸ್ಥೆಯನ್ನು ಮಾಡಲು ಸಿದ್ದವಿದೆ. ಪೋಷಕರುಗಳು ಪ್ರತಿಭಟನೆ ಕೈ ಬಡಿಬೇಕೆಂದು ಮನವಿ ಮಾಡಿದರು.
5 ನೇ ತರಗತಿ ವಿಧ್ಯಾರ್ಥಿನಿ ಗಗನ ಮಾತನಾಡಿ ನಮಗೆ ಇಂಗ್ಲೀಷ್ ಪಾಠ ಮಾಡುವ ಶಿಕ್ಷಕರಿಲ್ಲದೇ ಇಂಗ್ಲೀಷ್ ಕಲಿಕೆ ಸಾಧ್ಯವಾಗಿಲ್ಲ, ಪರೀಕ್ಷೆ ಹತ್ತಿರವಾಗುತ್ತಿದ್ದು ನಮಗೆ ಕೂಡಲೇ ಇಂಗ್ಲೀಷ್ ಶಿಕ್ಷಕರನ್ನು ನೇಮಿಸಿ ಇಂಗ್ಲೀಷ್ ಕಲಿಯಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.
ಇಂಗ್ಲೀಷ್ ಭಾಷಾ ಶಿಕ್ಷಕರನ್ನು ಪೂರ್ಣಾವಧಿ ನಿಯೋಜಿಸುವ ಬಗ್ಗೆ ಇ.ಸಿ.ಓ. ಸಿದ್ದಪ್ಪನವರ ಭರವಸೆಯ ಮೇರೆಗೆ ವಿದ್ಯಾರ್ತಿಗಳು ಹಾಗೂ ಎಸ್.ಡಿ.ಎಂ.ಸಿ ಯವರು ಪ್ರತಿಭಟನೆಗೆ ಅಂತ್ಯ ಹಾಡಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯ ಮೋಹನ್, ರೈತ ಸಂಘದ ಅಧ್ಯಕ್ಷ ಜಯರಾಮ್,ಪ್ರವೀಣ್,ರಮೆರ್ಶ, ರಾಮೇಗೌಡ, ಅರುಣ್, ಸಾಗರ್,ಪುರುಷೋತ್ತಮ್,ಚಂಧ್ರಮ್ಮ,ಮಂಗಳಮ್ಮ,ವರಲಕ್ಷ್ಮೀ,ರಮ್ಯಾ, ಸೌಮ್ಯಾ, ಸೇರಿದಂತೆ ವಿಧ್ಯಾರ್ಥಿಗಳು ಇದ್ದರು.