ಶಿರಾ : ಜನ ಸಾಮಾನ್ಯರೊಂದಿಗೆ ಬೆರೆತು ಸೇವೆ ಮಾಡುವುದು ನನಗೆ ತೃಪ್ತಿ ನೀಡುತ್ತದೆ. ಶಿರಾ ಕ್ಷೇತ್ರದ ಆಭಿವೃದ್ಧಿಗೆ ಹೂಸ ಸ್ವರೂಪ ನೀಡಲು ಗ್ರಾಮ ವಾಸ್ತವ್ಯ ಸಹಕಾರಿಯಾಗಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ತಾಲ್ಲೂಕಿನ ಹೊಸೂರು ಗ್ರಾ.ಪಂ. ವ್ಯಾಪ್ತಿಯ ಮುದ್ದೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಸರಕಾರಿ ಶಾಲೆಯಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ರೈತರ ಜಾನುವಾರು, ಕುರಿ, ಮೇಕೆಗಳಿಗ ಔಷಧಿ ವಿತರಿಸಿ ಮಾತನಾಡಿದರು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಿದರೂ ಸಹ ಅದು ಜನರಿಗೆ ಅರಿವು ಇರುವುದಿಲ್ಲ. ಆದ್ದರಿಂದ ಜನರಿಗೆ ಸರಕಾರದ ಕಾರ್ಯಕ್ರಮಗಳ ಅರಿವು ಮೂಡಿಸಲು ಗ್ರಾಮ ವಾಸ್ತವ್ಯ ಸಹಕಾರಿಯಾಗಲಿದೆ. ಹಾಗೂ ಅವುಗಳನ್ನು ಅನುಷ್ಠಾನಗೊಳಿಸಲು ಗ್ರಾಮ ವಾಸ್ತವ್ಯ ನೆರವಾಗುತ್ತದೆ. ಹಾಗೂ ಸರಕಾರದ ಮೇಲೆ ವಿಶ್ವಾಸ ಮೂಡುತ್ತದೆ ಎಂಬ ಉದ್ದೇಶದಿಂದ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಅದ್ಧೂರಿ ಸ್ವಾಗತ: ಮುದ್ದೇನಹಳ್ಳಿ ಗೊಲ್ಲರಹಟ್ಟಿ ಗ್ರಾಮಕ್ಕೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರಿಗೆ ಗ್ರಾಮಸ್ಥರು ಪೂರ್ಣಕುಂಭದ ಜೊತೆಗೆ ಕುರಿ ಮರಿ ಹಾಗೂ ಕಂಬಳಿಯನ್ನು ನೀಡಿ ಅದ್ಧೂರಿ ಸ್ವಾಗತ ಕೋರಿದರು.
ಚಿನ್ನಮ್ಮ ಕುಟೀರ ಉದ್ಘಾಟನೆ: ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಮುದ್ದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ವಿಶೇಷವಾಗಿ ಮಹಿಳೆಯರ ಸಾಂಸ್ಕöÈತಿಕ ಕಾರ್ಯಕ್ರಮಗಳ ವೇದಿಕೆಯಾಗಿ ಸುಮಾರು 2.50 ಲಕ್ಷ ರೂ. ವೆಚ್ಚದ ಸ್ವಂತ ಖರ್ಚಿನಲ್ಲಿ ನಿರ್ಮಿಸಿರುವ “ಚಿನ್ನಮ್ಮ ಕುಟೀರ” ವನ್ನು ಉದ್ಘಾಟನೆ ಮಾಡಿದರು.
ಜನರ ಅಹವಾಲು ಸ್ವೀಕಾರ: ಮುದ್ದೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಶಾಸಕರು ತಡ ರಾತ್ರಿಯವರೆಗೂ ಜನರ ಸಮಸ್ಯೆ ಆಲಿಸಿ. ಜನರೊಂದಿಗೆ ಊಟ ಸವಿದರು.
ನಂತರ ಮಾತನಾಡಿ ದೇಶದಲ್ಲಿ ಗ್ರಾಮೀಣ ಪ್ರದೇಶಗಳು ಉದ್ಧಾರವಾಗಬೇಕು. ಗ್ರಾಮಗಳು ಅಭಿವೃದ್ಧಿಯಾದರೇ ದೇಶದ ಅಭಿವೃದ್ಧಿ ಸಾಧ್ಯ, ಮಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯ ಕಲ್ಪನೆ ಈಡೇರಿಸಬೇಕು ಎಂಬ ಉದ್ದೇಶದಿಂದ ಶಿರಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಾನುವಾರುಗಳಿಗೆ ಔಷಧಿ ವಿತರಣೆ: ಶಾಸಕ ರಾಜೇಶ್‌ಗೌಡ ಅವರು ಮುದ್ದೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ವಾಸ್ತವ್ಯ ನಡೆದ ಕಾರ್ಯಕ್ರಮದಲ್ಲಿ ಜಾನುವಾರುಗಳು, ಕುರಿ, ಮೇಕೆಗಳಿಗೆ ರೋಗರುಜಿನಗಳು ಉಂಟಾದಾಗ ಅಗತ್ಯವಾಗಿ ನೀಡುವ ಔಷಧಿಗಳನ್ನು ಉಚಿತವಾಗಿ ರೈತರಿಗೆ ವಿತರಣೆ ಮಾಡಿದರು. ನಂತರ ನೂತನ ಅಂಗನವಾಡಿ ಕೇಂದ್ರಕ್ಕೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಹೊಸೂರು ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ನಾಗರಾಜು, ಸದಸ್ಯ ಕೃಷ್ಣ ಮೂರ್ತಿ, ಜಯರಾಮ್, ನಾಗರಾಜ್, ಪುಟ್ಟಜುಂಜಯ್ಯ, ಕಾಡುಗೊಲ್ಲರ ಮುಖಂಡರಾದ ಚಂಗಾವರ ಮಾರಣ್ಣ, ಬುಡಕಟ್ಟು ಜಾನಪದ ಕಲಾವಿದ ಮೋಹನ್ ಕುಮಾರ್, ವಾಜರಹಳ್ಳಿ ನರಸಿಂಹೆ ಗೌಡ, ಕರಿಯಣ್ಣ, ಹೊಸೂರು ಪ್ರಕಾಶ್, ಕರಿಯಣ್ಣ, ಕಿಟ್ಟಪ್ಪ, ಜಯಣ್ಣ, ಕೃಷ್ಣಮೂತಿ ಸೇರಿದಂತೆ ಗ್ರಾಮಸ್ಥರು ಬಿಜೆಪಿ ಮುಖಂಡರು ಹಾಜರಿದ್ದರು.