ತುರುವೇಕೆರೆ ಬ್ಲಾಕ್ ಕಾಂಗ್ರೇಸ್ ನಿಂದ ಭವ್ಯ ಸ್ವಾಗತ : ಪಕ್ಷವನ್ನು ಸದೃಢವಾಗಿ ಸಂಘಟಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ: ಬೆಮೆಲ್ ಕಾಂತರಾಜ್
ತುರುವೇಕೆರೆ : ಕಾಂಗ್ರೇಸ್ ಪಕ್ಷದ ಸದೃಡ ಸಂಘಟನೆಗೆ ಸಾಮಾನ್ಯ ಕಾರ್ಯಕರ್ತರಂತೆ ಪ್ರಾಮಾಣಿಕತೆಯಿಂದ ದುಡಿಯುವುದಾಗಿ ಮಾಜಿ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ತಿಳಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಇದೇ ತಿಂಗಳ 21 ರಂದು ಕೆ.ಪಿ.ಸಿ,ಸಿ. ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ಸಮಾಜ ಸೇವೆ ಮಾಡಬೇಕೆಂಬ ನನ್ನ ಆಶಯಕ್ಕೆ ಕಾಂಗ್ರೇಸ್ ಪಕ್ಷ ಸೂಕ್ತವಾದುದಾಗಿದೆ. ಪಕ್ಷ ಸೇರ್ಪಡೆಗೊಂಡ ನಂತರ ಇದೇ ಮೊದಲ ಬಾರಿಗೆ ತುರುವೇಕೆರೆಗೆ ಆಗಮಿಸಿದ ನನಗೆ ಬ್ಲಾಕ್ ಕಾಂಗ್ರೇಸ್ ಭವ್ಯ ಸ್ವಾಗತ ನೀಡಿದೆ. ಕಚೇರಿಗೆ ನನ್ನನ್ನು ಪ್ರೀತಿಯಿಂದ ಬರ ಮಾಡಿಕೊಂಡಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ಬ್ಲಾಕ್ ಕಾಂಗ್ರೇಸ್ ಕಚೇರಿಗೂ ಆಗಮಿಸುವುದಕ್ಕೂ ಮುನ್ನ ಪಟ್ಟಣದ ಅಧಿದೈವ ಬೇಟೆರಾಯಸ್ವಾಮಿ ಹಾಗೂ ಅಧಿದೇವತೆ ಉಡುಸಲಮ್ಮ ದೇವಿಗೆ ಬೆಮೆಲ್ ಕಾಂತರಾಜ್ ವಿಶೇಷಪೂಜೆ ಸಲ್ಲಿಸಿದರು. ಆನಂತರ ಪಟ್ಟಣದ ಉಡುಸಲಮ್ಮ ದೇವಿಯವರ ದೇಗುಲದ ಆವರಣದಿಂದ ಮುಖಂಡರುಗಳು ಹಾಗೂ ಕಾರ್ಯಕರ್ತರೊಂದಿಗೆ ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿದರು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರುಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಪ್ರಸನ್ನಕುಮಾರ ಹಾಗೂ ಹೆಚ್.ಕೆ. ನಾಗೇಶ್ ರವರು ಬೆಮೆಲ್ ಕಾಂತರಾಜ್ ಗೆ ಪಕ್ಷದ ಬಾವುಟ ನೀಡುವ ಮೂಲಕ ಸ್ವಾಗತ ಕೋರಿದರು.
ಮುಖಂಡರ ಗೈರು:
ನೂತನವಾಗಿ ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡು ಮೊದಲ ಬಾರಿಗೆ ಪಕ್ಷದ ಕಚೇರಿಗೆ ಬೆಮೆಲ್ ಕಾಂತರಾಜ್ ಆಗಮಿಸಿದ್ದ ವೇಳೆ ತಾಲೂಕು ಕಾಂಗ್ರೇಸ್‌ನ ಹಿರಿಯ ಮುಖಂಡ ಹಾಗೂ ಪರಾಜಿತ ಅಭ್ಯರ್ಥಿ ಚೌದ್ರಿರಂಗಪ್ಪ, ಗೀತಾರಾಜಣ್ಣ, ಮಾಜಿ ಜಿ.ಪಂ. ಸದಸ್ಯ ಎನ್.ಆರ್. ಜಯರಾಮ್, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್,ಸುಬ್ರಹ್ಮಣ್ಯಶ್ರೀಕಂಠೇಗೌಡ, ಸೇರಿದಂತೆ ಅನೇಕರು ಗೈರಾಗಿದ್ದು ಕಂಡು ಬಂತು.
ಈ ಸಂದರ್ಭದಲ್ಲಿ ಮುಖಂಡರಾದ ದಾನಿಗೌಡ, ಕೊಳಾಲನಾಗರಾಜ್,ಗುಡ್ಡೇನಹಳ್ಳಿನಂಜುಂಡಪ್ಪ, ಜಿ.ಪಂ. ಮಾಜಿ ಅದ್ಯಕ್ಷ ಹನುಮಂತಯ್ಯ, ಎಸ್ಸಿಘಟಕದ ಶಿವರಾಜ್,ಪ.ಪಂ. ಮಾಜಿಆದ್ಯಕ್ಷರುಗಳಾದ ಟಿ.ಎನ್.ಶಶಿಶೇಖರ್, ಶ್ರೀನಿವಾಸ್, ಕಿಸಾನ್ ಘಟಕದ ಸ್ವರ್ಣಕುಮಾರ್,ಮುಖಂಡರುಗಳಾದ ಎಂ,ಡಿ. ಮೂರ್ತಿ, ಗೊಟ್ಟಿಕೆರೆಕಾಂತರಾಜ್, ಬುಗುಡುನಹಳ್ಳಿಕೃಷ್ಣಮೂರ್ತಿ,ಗೋಣಿತುಮಕೂರು ಲಕ್ಷ್ಮೀಕಾಂತ್,ಪ್ರಕಾಶ್‌ಯಾದವ್, ಕಾಳಂಜೀಹಳ್ಳಿಸುರೇಶ್ ಸೇರಿದಂತೆ ಅನೇಕರು ಇದ್ದರು.