ಕುಣಿಗಲ್ಕ್ರೈಂ ನ್ಯೂಸ್
ಅಕ್ರಮ ಮದ್ಯ ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಅಬಕಾರಿ ಪೊಲೀಸರ ದಾಳಿ : ಇಬ್ಬರ ಬಂಧನ ಲಕ್ಷಾಂತರ ರೂ ಮೌಲ್ಯದ ಮದ್ಯ ವಶ
ಕುಣಿಗಲ್ : ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಮದ್ಯ ಸಾಗಾಣೆ ಮಾಡುತ್ತಿದ್ದ 2 ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ತುಮಕೂರು ಅಬಕಾರಿ ಉಪ ಆಯುಕ್ತೆ ಶೈಲಜಾ.ಎ.ಕೋಟೆ, ಮಾರ್ಗದರ್ಶನದಲ್ಲಿ ಅಬಕಾರಿ ಅಧೀಕ್ಷಕ ಕೆ.ಸಿ.ಸಿದ್ದಲಿಂಗಸ್ವಾಮಿ ನೇತೃತ್ವದಲ್ಲಿ ಕುಣಿಗಲ್ ಅಬಕಾರಿ ನೀರೀಕ್ಷಕ ಎ.ಕೆ.ನವೀನ್ ತಾಲೂಕಿನ ಎಡಿಯೂರು ಹೋಬಳಿ ರಾಷ್ಟ್ರೀಯ ಹೆದ್ದಾರಿ 75 ರ ಸಿಂಗೋನಹಳ್ಳಿ ಅಗ್ರಹಾರ ಗೇಟ್ ಮೇನಕಾ ಫ್ಯಾಮಿಲಿ ಡಾಬ ಬಳಿ ಗಸ್ತು ತಿರುಗುವ ವೇಳೆ ಟಾಟಾ ಸುಮಾ ವಾಹನದಲ್ಲಿ ಬಂದ ಮೈಸೂರು ನಗರದ ವಾಸಿ ಜನಾರ್ಧನ್ ಬಗ್ಗೆ ಅನುಮಾನ ಬಂದು ಅಬಕಾರಿ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದ್ದಾಗ, ಅಕ್ರಮವಾಗಿ172 ಲೀಟರ್ ನಕಲಿ ಮಧ್ಯವನ್ನು ಮೈಸೂರಿನಿಂದ ನಾಗಮಂಗಲ ಮಾರ್ಗವಾಗಿ ನೆಲಮಂಗಲಕ್ಕೆ ಸರಬರಾಜು ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಆರೋಪಿ ಜನಾರ್ಧನನ್ನು ವಿಚಾರಣೆಗೆ ಒಳಪಡಿಸಿ , ಮತ್ತೊಬ್ಬ ಆರೋಪಿ ಸುರೇಶ್ ಇದರಲ್ಲಿ ಪಾಲ್ಗೊಂಡಿದ್ದಾನೆ ಎಂಬ ಸುಳಿವಿನ ಮೇರೆಗೆ ಮೈಸೂರಿನ ಪಡಿಂತ್ ದೀನ್ ದಯಾಳ್ ಉಪಾಧ್ಯಾಯ ನಗರ, 5 ನೇ ಹಂತ ಮನೆ ನಂ 266 ರರಲ್ಲಿರುವ ಆರ್‌ಸಿಸಿ ಮನೆಯ ಮೇಲೆ ದಾಳಿ ನಡೆಸಲಾಗಿ ಸುರೇಶ್ ಅವರ ಮನೆಯಲ್ಲಿ 7000 ಓಲ್ಡ್ ಟವರಿನ್ ವಿಸ್ಕಿ, ನಕಲಿ ಖಾಲಿ ಟೆಟ್ರಾಪ್ಯಾಕ್‌ಗಳು, 7905 ನಕಲಿ ಅಡೆಸಿವ್ ಲೇಬರ್‌ಗಳು, 4.5 ಲೀಟರ್ ನಕಲಿ ಮದ್ಯ,650 ಲೀಟರ್ ಮಧ್ಯಸಾರ, 125 ಖಾಲಿ ರಟ್ಟಿನ ಪೆಟ್ಟಿಗೆ, 5 ಕಬ್ಬಿಣದ ಹೀಟ್, ಸೀಲಿಂಗ್ ಮಶಿನ್, 45 ಲೀಟರ್ ನಕಲಿ ಬ್ಲೆಂಡ್ ಮದ್ಯ, ನಕಲಿ ಮಧ್ಯ ತಯಾರಿಕೆಗೆ ಬಳಸುವ ಇತರೆ ಸಾಮಗ್ರಿಳು ಹಾಗೂ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಪ್ರಕರಣವನ್ನು ಭೇದಿಸಿದ ಅಬಕಾರಿ ಪೊಲೀಸರು ತಾಲೂಕಿನ ಎಡಿಯೂರು ಹೋಬಳಿ ಹೇಮಾವತಿ ಸರ್ಕಲ್‌ನ ಪಾಕಶಾಲ ಹೋಟೆಲ್ ಮುಂಭಾಗದ ರಸ್ತೆ ಪಕ್ಕದಲ್ಲಿ ಮೈಸೂರು ನಗರದ ಶ್ರೀನಿವಾಸ್ ಎಂಬುವನ್ನು ಆಟೋ ರಿಕ್ಷಾದಲ್ಲಿ 86 ಲೀಟರ್ ನಕಲಿ ಮಧ್ಯ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ವಾಹನ ಜಪ್ತಿ ಮಾಡಿಕೊಂಡು ಪ್ರತ್ಯೇಕವಾಗಿ 2ಪ್ರಕರಣಗಳನ್ನು ಅಬಕಾರಿ ಅಧಿಕಾರಿಗಳು ದಾಖಲಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಉಪ ನಿರೀಕ್ಷಕ ಕೆ.ಮಲ್ಲಿಕಾರ್ಜುನಯ್ಯ, ನಿರೀಕ್ಷಕರಾದ ಟಿ.ಜಿ.ದಿವ್ಯಶ್ರೀ, ಅರುಣ್‌ಕುಮಾರ್, ಮುಖ್ಯಪೇದೆಗಳಾದ ಕೆ.ಶಿವರಾಮ್, ಪ್ರಭಾಕರ್, ಲೀಲಾ, ಪೇದೆಗಳಾದ ಬಿ.ಎಂ.ಗಂಗಾಧರಯ್ಯ, ಜಿ.ವಿ.ತಿರುಮಲೇಗೌಡ ಒಳಗೊಂಡಂತೆ ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.