ಬಗ್ಗನಹಳ್ಳಿ ಗ್ರಾಮಗಳಲ್ಲಿ ಪಶು ಆರೋಗ್ಯ ಶಿಬಿರ
ಹುಳಿಯಾರು : ಚಿಕ್ಕನಾಯಕನಹಳ್ಳಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಶೆಟ್ಟಿಕೆರೆ ಹೋಬಳಿಯ ಬಗ್ಗನಹಳ್ಳಿ ಹಾಗೂ ಆಲದಕಟ್ಟೆ ತಾಂಡ್ಯದಲ್ಲಿ ಪಶು ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಶಿಬಿರಗಳಲ್ಲಿ 71 ಕರುಗಳಿಗೆ ಜಂತುನಾಶಕ ಔಷಧಿ ಕುಡಿಸಿ, ಬೆಳವಣಿಗೆಗೆ ಪೂರಕವಾದ ಚುಚ್ಚುಮದ್ದು ನೀಡಿ ಆರೋಗ್ಯ ವರ್ಧನೆಯ ಟಾನಿಕ್ ನೀಡಲಾಯಿತು. 15 ರಾಸುಗಳ ಗರ್ಭಪರೀಕ್ಷೆಯನ್ನು ನಡೆಸಲಾಯಿತು. ಈ ರಾಸುಗಳಿಗೆ ಖನಿಜ/ಲವಣ ಮಿಶ್ರಣಗಳನ್ನು ನೀಡಲಾಯಿತು.
21 ಬರಡು ರಾಸುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಮುಂದಿನ ದಿನಗಳಲ್ಲಿ ಇಲಾಖೆಯ ಸಂಪರ್ಕವನ್ನು ಮಾಡಿಕೊಂಡು ಪಾಲಿಸಬೇಕಾದ ಕ್ರಮಗಳನ್ನು ನಿರ್ವಹಿಸಲು ಸೂಚಿಸಲಾಯಿತು. 1131 ಕುರಿ ಮತ್ತು 846 ಮೇಕೆಗಳಿಗೆ ಜಂತುನಾಶಕ ಔಷಧಿಯನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ 210 ರಾಸುಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಲಾಯಿತು. 38 ರಾಸುಗಳಿಗೆ ಸಾಮಾನ್ಯ ತೊಂದರೆಗೆ ಹಾಗು 14 ರಾಸುಗಳಿಗೆ ಚರ್ಮಗಂಟು ರೋಗದ ಸಮಗ್ರ ಚಿಕಿತ್ಸೆಯನ್ನು ಮಾಡಲಾಯಿತು.
ಈ ಶಿಬಿರದಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ.ರೆ.ಮ.ನಾಗಭೂಷಣ, ಪಶುವೈದ್ಯಕೀಯ ಪರೀಕ್ಷಕರಾದ ಕೆ.ಪಿ.ಶಿವಕುಮಾರ, ಕಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಚಂದ್ರಶೇಖರ ಹೆಚ್.ಎಸ್,ಸಿಬ್ಬಂದಿಗಳಾದ ಅತಾವುಲ್ಲಾ, ದಯಾನಂದ, ಅಭಿಷೇಕ, ಕುಮಾರಸ್ವಾಮಿ, ಸಿದ್ದೇಶ, ವಹೀದ, ಗ್ರಾಪಂನ ನೇತ್ರಾವತಿ, ಆಶಾ, ಪುಷ್ಪ ಮತ್ತು ಗ್ರಾಮ ಪಂಚಾಯತಿ ಸದಸ್ಯರುಗಳಾದ ಎನ್.ಎಸ್.ವಿವೇಕಾನಂದ, ಬಿ.ಆರ್.ಕೃಷ್ಣಪ್ಪ, ತಾಲ್ಲೂಕು ಸಾವಯವ ಕೃಷಿ ಸಂಯೋಜಕರುಗಳಾದ ಶರತ್‌ಕುಮಾರ ಮತ್ತು ಜಯಸುಧಾ ಮುಂತಾದವರು ಉಪಸ್ಥಿತರಿದ್ದರು.