ಧಾರ್ಮಿಕ ಕೇಂದ್ರಗಳಿಗೆ ಮೊಟ್ಟೆ ಎಸೆದ ಕಿಡಿಗೇಡಿಗಳು
ಚಿಕ್ಕನಾಯಕನಹಳ್ಳಿ : ದಬ್ಬೇಘಟ್ಟದ ಮರುಳ ಸಿದ್ದೇಶ್ವರ ದೇವಾಲಯ, ಈಶ್ವರ ದೇವಾಲಯ ಸಮೀಪದ ನಾಗರಕಲ್ಲಿಗೆ ಮತ್ತು ಗೋಡೆಕೆರೆ ಗ್ರಾಮದಲ್ಲಿರುವ ವೀರಭದ್ರೇಶ್ವರ ವಿಗ್ರಹ ಮತ್ತು ಹಿರಿಯ ಸ್ವಾಮಿಜಿ ಒಬ್ಬರ ಜೀವಂತ ಸಮಾಧಿಯ ಮೇಲೆ ಪ್ರತಿಷ್ಠಾಪಿಸಿದ್ದ ಲಿಂಗದ ಮೇಲೆ ಶುಕ್ರವಾರ ದುಷ್ಕರ್ಮಿಗಳು ಮೊಟ್ಟೆ ಬಳಿದು ಪರಾರಿಯಾಗಿದ್ದಾರೆ.
ಈ ಸಂಬಂಧ ಪಟ್ಟಣದ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲೀಸರು ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮಾರ ಕೆಲಸ ನಿರ್ವಹಿಸದಿರುವುದನ್ನು ತಿಳಿದುಕೊಂಡು ಬಂದಿದ್ದ ಕಿಡಿಗೇಡಿಗಳು ಗೋಡೆಕೆರೆ ಗ್ರಾಮದ ವೀರಭದ್ರೇಶ್ವರ ವಿಗ್ರಹಕ್ಕೆ ಮೊಟ್ಟೆ ಎಸೆದಿದ್ದಾರೆ. ಬಳಿಕ ಲಿಂಗದ ಮೇಲೆ ಮೊಟ್ಟೆ ಒಡೆದು ಚೆಲ್ಲಿದ್ದಾರೆ ಶುಕ್ರವಾರ ಸಂಜೆ ೭ ಗಂಟೆ ಸುಮಾರಿಗೆ ಪೂಜೆಗೆಂದು ಅರ್ಚಕರು ತೆರಳಿದಾಗ ಈ ಕೃತ್ಯ ಎಸಗಿರುವುದು ಕಂಡು ಬಂದಿತೆಂದು ಮುಖಂಡ ಗೋಡೆಕೆರೆ ಜಗದೀಶ್ ಮಾಧ್ಯಮಕ್ಕೆ ತಿಳಿಸಿದರು.
ಈ ಎಲ್ಲಾ ಪ್ರಕರಣಗಳು ಒಂದೇ ದಿನ ನಡೆದಿದ್ದು ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಮರುಳ ಸಿದ್ದೇಶ್ವರ ದೇವಾಲಯದ ಅರ್ಚಕ ಕುಮಾರಸ್ವಾಮಿ ತಿಳಿಸಿದ್ದಾರೆ.