ಚಿಕ್ಕನಾಯಕನಹಳ್ಳಿಜಿಲ್ಲೆತುಮಕೂರು
ಮರದ ದಿಮ್ಮಿಗಳ ಅಕ್ರಮ ಸಾಗಾಟ : ಟ್ರಾಕ್ಟರ್ ಸಹಿತ ಆರೋಪಿ ಸೆರೆ
ಚಿಕ್ಕನಾಯಕನಹಳ್ಳಿ : ಸಮೀಪದ ಕೇದಿಗೆಹಳ್ಳಿ ಗ್ರಾಮದ ಸರಕಾರಿ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳನ್ನು ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಆರೋಪಿಯನ್ನು ಟ್ರಾಕ್ಟರ್ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿ ದುಗುಡಿಹಳ್ಳಿ ಗ್ರಾಮದ ನಿವಾಸಿ ಚಾಲಕ ಚಿಕ್ಕನರಸಯ್ಯ ಬಿನ್ ಕೆಂಪಯ್ಯನನ್ನು ದಸ್ತಗಿರಿ ಮಾಡಿ ಆತ ಟ್ರಾಕ್ಟರ್ ನಲ್ಲಿ ಸಾಗಿಸುತ್ತಿದ್ದ 8 ತೇಗ, 3 ಹಲಸು, 7 ಮಾವಿನ ಜಾತಿಯ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮರದ ಮೌಲ್ಯ ಸುಮಾರು 1 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ವಲಯ ಅರಣ್ಯಾಧಿಕಾರಿ ಅರುಣ್ ನೇತೃತ್ವದಲ್ಲಿ ಜಪ್ತಿ ಮಾಡಿ ಇಲಾಖೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಪಡಿಕೊಂಡ ಮರದ ದಿಮ್ಮಿಗಳನ್ನು ಕಚೇರಿ ಆವರಣದಲ್ಲಿರುವ ಮರ ಸಂಗ್ರಹ ಸ್ಥಳಕ್ಕೆ ರವಾನಿಸಲಾಗಿದೆ. ಈ ಸಂಬAಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.