ಸೇವೆ ಮಾಡುವವರನ್ನು ಗೌರವಿಸುವ ಮೂಲಕ ಮತ್ತಷ್ಟು ಕಾರ್ಯಕ್ಕೆ ಪ್ರೇರಣೆ ನೀಡಿ: ಎಂ.ಟಿ.ಕೃಷ್ಣಪ್ಪ
ತುರುವೇಕೆರೆ : ಸೇವಾ ಕಾರ್ಯಗಳಲ್ಲಿ ಮುಂದಾಗುವವರನ್ನು ಅತ್ಯಂತ ಗೌರವ ಪೂರ್ವಕವಾಗಿ ಸ್ಮರಿಸುವ ಮೂಲಕ ಮತ್ತಷ್ಟು ಸೇವೆ ಮಾಡಲು ಪ್ರೇರಣೆ ನೀಡಬೇಕಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಪವರ್ ಒನ್ ಮೈಕ್ರೋ ಸಿಸ್ಟಮ್ ಪ್ರೈ.ಲಿ. ಬೆಂಗಳೂರು ರವರು ಸ್ಥಾಪಿಸಿದ್ದ ಸೋಲಾರ್ ಬೀದಿ ದೀಪ ಹಾಗೂ ಶುದ್ದ ಕುಡಿಯುವ ನೀರಿನ ಘಟಕವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದ ಅವರು ನಮ್ಮ ನಡುವೆ ಅನೇಕರು ಉಳ್ಳವರು ಇರುತ್ತಾರೆ. ಆದರೇ ಸಮಾಜ ಮುಖಿ ಸೇವಾ ಕಾರ್ಯ ಮಾಡುವ ಉದಾರ ಗುಣವುಳ್ಳ ಸಂಖ್ಯೆ ಅತ್ಯಂತ ವಿರಳ, ರಾಮಸಾಗರಕ್ಕೆ ಸೋಲಾರ್ ಬೀದಿ ದೀಪ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಉದಾರತೆ ಮೆರೆದಿರುವ ಪವರ್ ಒನ್ ಮೈಕ್ರೋ ಸಿಸ್ಟಮ್ ಪ್ರೈ.ಲಿ. ಎಂ.ಡಿ. ಎಂ.ಆರ್. ರಾಜೇಶ್ ರವರ ಕಾರ್ಯ ಶ್ಲಾಘನೀಯ ಎಂದರು.
ಪವರ್ ಒನ್ ಮೈಕ್ರೋ ಸಿಸ್ಟಮ್ ಪ್ರೈ.ಲಿ.ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ರಾಜೇಶ್ ಮಾತನಾಡಿ ರಾಮಸಾಗರಕ್ಕೆ ನನ್ನ ಮನೆದೇವರಾದ ವರದರಾಜಸ್ವಾಮಿಯವರ ದರ್ಶನಕ್ಕೆ ಬರುತ್ತಿದ್ದೆ. ಬೆಟ್ಟದ ತಪ್ಪಲಿನಲಿರುವ ಗ್ರಾಮದ ಜನತೆಗೆ ಏನಾದರೂ ಸೇವೆ ಮಾಡುವಂತೆ ನನ್ನ ಮನೆ ದೇವರು ಪ್ರೇರಣೆ ನೀಡಿದರು. ಅದರಂತೆ ರಾಮಸಾಗರಕ್ಕೆ ಸೋಲಾರ್ ದೀಪ ಹಾಗೂ ಸುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇನೆ. ಸೇವೆ ನನಗೆ ತೃಪ್ತಿ ತಂದಿದ್ದು ಸ್ಥಳಿಯ ಗ್ರಾ.ಪಂ. ಬೀದಿ ದೀಪ ಹಾಗೂ ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುವಂತೆ ಮನವಿ ಮಾಡಿದರು.
ಜಿ.ಪಂ. ಮಾಜಿ ಸದಸ್ಯ ಎನ್.ಆರ್. ಜಯರಾಮ್ ಮಾತನಾಡಿದ ಮೂಲ ಸೌಕರ್ಯಗಳಲ್ಲಿ ಅತ್ಯಂತ ಪ್ರಮುಖವಾದ ನೀರು ಮತ್ತು ಬೆಳಕನ್ನು ನೀಡಲು ಮುಂದಾಗಿರುವ ಎಂ.ಆರ್. ರಾಜೇಶ್‌ರವರಿಗೆ ಇಲ್ಲಿನ ನಿವಾಸಿಗಳ ಪರವಾಗಿ ಕೃತಜ್ಷತೆ ಸಮರ್ಪಿಸುತ್ತೇನೆ. ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಬೀದಿ ದೀಪಗಳನ್ನು ಅತ್ಯಂತ ಜವಾಬ್ದಾರಿಯಿಂದ ಬಳಸುವ ಮೂಲಕ ದಾನಿಗಳ ಆಶಯವನ್ನು ಈಡೇರಿಸುವಂತಾಗಲಿ ಎಂದು ಆಶಿಸಿದರು.
ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ, ಮಾಜಿ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಗ್ರಾ.ಪಂ.ಉಪಾಧ್ಯಕ್ಷ ಮಂಜುಳಾಶಿವಲಿಂಗ, ಮುಜರಾಯಿ ನಿರ್ದೇಶಕಿ, ಚೈತ್ರಮಂಜುನಾಥ್, ತಾ.ಪಂ. ಮಾಜಿ ಸದಸ್ಯ ಬೈರಪ್ಪ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಬಿ.ವಿ.ರಾಮಚಂದ್ರ, ಶಿವಲಿಂಗು, ಗ್ರಾ.ಪಂ. ಸದಸ್ಯ ಲಿಂಗಣ್ಣ, ದಾನಿಗಳಾದ ಶ್ರೀದರ್,ಮಧುಮತಿ, ರಾಜಯ್ಯಂಗಾರ್,ಆನಂದ್,ಸಚ್ಚಿದಾನಂದ್,ವಿಜಯಕೃಷ್ಣ,ವೇಣುಗೋಪಾಲ್, ಪಿ.ಡಿ.ಓ. ರಾಜಣ್ಣ ಹಾಗೂ ಗ್ರಾಮಸ್ಥರುಗಳು ಇದ್ದರು.