ಗುಬ್ಬಿ : ತಾಲ್ಲೂಕಿನ ಶಿಂಷಾ ನದಿಯ ಒಡಲು ಬಗೆದು ಮರಳು ದಂಧೆ ನಡೆಸುವ ಕಲಬೆರಕೆ ಕೃಷ್ಣಪ್ಪ ನಿಂದ ಅಭಿವೃದ್ದಿಯ ಪಾಠ ನಾನು ಕಲಿಯಬೇಕಿಲ್ಲ ಎಂದು ಬಿಜೆಪಿ ಶಾಸಕ ಮಸಾಲೆ ಜಯರಾಂ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಹೋಬಳಿ ಹಿಂಡಸಿಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಶಾಸಕರು ನನ್ನ ಅವಧಿಯಲ್ಲಿನ ಅಭಿವೃದ್ದಿ ಕೆಲಸಗಳನ್ನು ಸಹಿಸಲಾಗದೆ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲಅವರು ಶಾಸಕರಾಗಿದ್ದ 10 ವರ್ಷದ ಅವಧಿಯಲ್ಲಿ ತಾಲೂಕಿನ ಒಂದು ಸಣ್ಣ ಕೆರೆಗೂ ಒಂದು ಹನಿ ನೀರು ಹರಿಸಲು ಸಾಧ್ಯವಾಗಿಲ್ಲ ಎಂದರು.
ಆದರೆ ನನ್ನ ಅವಧಿಯಲ್ಲಿ ತಾಲೂಕಿನ ಪ್ರತಿಯೊಂದು ಕೆರೆಗೂ ನೀರು ಹರಿಸಿದ ಸಂತೋಷ ನನಗಿದೆ ಹಾಗಾಗಿ ಜನತೆ ನನಗೆ ಹೇಮಾವತಿ ಹರಿಕಾರ ಎನ್ನುವುದು ಸಹಜ ಆದರೆ ಇವರಂತೆ ಮರುಳು ದಂದೆಯ ಹರಿಕಾರರಾಗಿಲ್ಲ ಶಿಂಷಾ ನದಿಯ ಒಡಲು ಬಗೆದು ಮರಳು ದಂಧೆ ನಡೆಸುವ ನೀಚ ರಾಜಕಾರಣವೂ ಕೂಡ ನನಗೆ ತಿಳಿದಿಲ್ಲ ನನಗೆ ಆದ ಸ್ವಂತ ವ್ಯವಹಾರವಿದೆ ಇಂತಹ ನೀಚ ರಾಜಕಾರಣ ಮಾಡಿದ ಹಿನ್ನೆಲೆಗೆ ಕ್ಷೇತ್ರದ ಜನತೆ ಇವರ ದುರಾಡಳಿತ ಸಹಿಸದೇ ನೊಂದು ಅಧಿಕಾರದಿಂದ ಹೊರಹಾಕಿ ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ತಾಲ್ಲೂಕಿನ ಜನತೆಗೆ ಇವರು ಶಾಸಕರಾಗಿ ಅಧಿಕಾರ ನಡೆಸುವ ವೇಳೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಗಳನ್ನು ಮಾಡದೇ ಮಾಡುವವರನ್ನು ನೋಡಿ ಸಹಿ ಸಲು ಆಗದೆ ಒದ್ದಾಡುವ ಬಗೆಯಿಂದ ನನ್ನ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ ನಾನು ಯಾವುದೇ ಗುತ್ತಿಗೆದಾರರಿಂದ ಬಿಡಿಗಾಸು ಪಡೆಯದೆ ಕೇವಲ ಅಭಿವೃದ್ದಿ ಕೆಲಸಗಳಿಗೆ ಮಾತ್ರ ಒತ್ತು ನೀಡಿದ್ದು ನನ್ನ ಅಧಿಕಾರಾವಧಿಯ ಕೆಲಸಗಳು ತೃಪ್ತಿ ತಂದಿದೆ ಎಂದರು.
ಮಾಜಿ ಶಾಸಕರು ನೀರು ಹರಿಸುವ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡುವ ಬದಲು ಇವರು 10 ವರ್ಷಗಳು ಶಾಸಕರಾಗಿದ್ದಾಗ ಸಿ.ಎಸ್.ಪುರ ಹೋಬಳಿಯ ಎಷ್ಟು ಕೆರೆಗಳಿಗೆ ನೀರು ತುಂಬಿಸಿದ್ದಾರೆ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ನೀರು ಹರಿಸುವ ಬದಲಾಗಿ ಮರಳು ದಂಧೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಈ ಭಾಗಕ್ಕೆ ನೀರು ಹರಿಸುವಲ್ಲಿ ವಿಫಲರಾಗಿದ್ದಾರೆ ನಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲಾ ಕೆರೆಗಳಿಗೂ ನೀರು ಹರಿಸಿ ರೈತರ ಬವಣೆ ನೀಗಿಸಿದ್ದು ಇನ್ನೂ ಹತ್ತು ವರ್ಷಗಳ ಕಾಲ ನೀರು ನಾಲೆಯಲ್ಲಿ ಉಳಿಯಲಿದ್ದು ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕಿದಂತಾಗಿದೆ ಇದನ್ನು ಅರಗಿಸಿಕೊಳ್ಳಲು ಆಗದ ಕಳ್ಳ ಕೃಷ್ಣಪ್ಪ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಹೇಶ್, ಮದುವೆ ಮನೆ ಕುಮಾರ್, ಸದಾಶಿವು,ಜೆ.ಪಿ.ಬಸವರಾಜು,ನಾಗಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.