ಕೋವಿಡ್ ಹೆಸರಿನಲ್ಲಿ ದಲಿತರು, ಮುಸ್ಲಿಂರ ಆಚರಣೆಗಳಿಗೆ ಅಡ್ಡಿ,ಸರಕಾರದ ವಿರುದ್ದ ಸಂಘಟನೆಗಳ ಆಕ್ರೋಶ
ತುಮಕೂರು : ದಲಿತರು ಮತ್ತು ಮುಸ್ಲಿಂ ಆಚರಿ ಸುವ ಹಬ್ಬಗಳಿಗೆ ಕೋವಿಡ್ ಹೆಸರಿನಲ್ಲಿ ಇಲ್ಲಸಲ್ಲದ ನಿಯ ಮಗಳನ್ನು ರೂಪಿಸಿ, ಹಬ್ಬ ಗಳನ್ನು ಸಂಪ್ರದಾಯ ಬದ್ದವಾಗಿ ನಡೆಸಲು ಅಡ್ಡಿಪಡಿಸುತ್ತಿರುವ ಸರಕಾರದ ಕ್ರಮವನ್ನು ತುಮಕೂರು ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಪ್ರತಿಭಟಿಸಿವೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಲ್ಲಿಂದು ಸಭೆ ಸೇರಿದ್ದ ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು, ಸರಕಾರದ ತಾರತಮ್ಯ ನೀತಿಯನ್ನು ಖಂಡಿಸಿರುವುದಲ್ಲದೆ, ಸರಕಾರ ಆಳುವ ವರ್ಗ ದೊಂದಿಗೆ ಸೇರಿ, ದಲಿತರು, ಅಲ್ಪಸಂಖ್ಯಾತರು ಹಬ್ಬಗಳನ್ನು ಆಚರಿಸದಂತೆ ತಡೆಯೊಡ್ಡಿದೆ. ಇದು ಖಂಡನೀಯ ಕೂಡಲೇ ವಾಲ್ಮೀಕಿ ಜಯಂತಿ ಆಚರಣೆಗೆ ಹೇರಿರುವ ನಿರ್ಭಂಧವನ್ನು ಸಡಿಲಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ,ರಾಜ್ಯದಲ್ಲಿ ಮೂರನೇ ಅಲೆ ಇಲ್ಲ ಎಂದು ಈಗಾಗಲೇ ಸರಕಾರವೇ ನೇಮಕ ಮಾಡಿದ ಸಮಿತಿ ವರದಿ ನೀಡಿದ್ದರೂ ಸಹ ಇದ್ ವಿಲಾದ್ ಆಚರಣೆಗೆ,ವಾಲ್ಮೀಕಿ ಜಯಂತಿ ಆಚರಣೆಗೆ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ, ಮೆರವಣಿಗೆ ಮಾಡದಂತೆ ತಡೆಯೊಡ್ಡಿರುವುದು ಸರಿಯಲ್ಲ.ಪ್ರಸ್ತುತ ಉತ್ತರ ಕರ್ನಾಟಕ ಭಾಗದಲ್ಲಿ ಎರಡು ವಿ ಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದೆ.ರಾಜ್ಯದ ಸಚಿವ ಸಂಪುಟದ ಜೊತೆಗೆ, ಕೇಂದ್ರದ ಹಲವು ಮಂತ್ರಿಗಳು ಸಾವಿರಾರು ಸಂಖ್ಯೆ ಯಲ್ಲಿದ್ದ ಸಾರ್ವಜನಿಕ ಸಮಾರಂಭಗಳನ್ನು ಉದ್ದೇ ಶಿಸಿ ಭಾಷಣ ಮಾಡುತ್ತಿದ್ದಾರೆ.ಆದರೆ ಬಿಜೆಪಿ ಪಕ್ಷದವರೇ ಆರಾಧಿಸುವ ಶ್ರೀರಾಮನ ಕಥೆ ಉದಯಕ್ಕೆ ಕಾರಣವಾದ ವಾಲ್ಮೀಕಿ ಮಹರ್ಷಿಗಳ ಜಯಂತಿಗೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ ಸರಕಾರ,ಜಿಲ್ಲಾಡಳಿತ ಕೂಡಲೇ ತಾವು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತ ನಾಡಿ,ಕಳೆದ ಐದು ದಿನಗಳ ಹಿಂದೆ ರಾಜ್ಯದಾದ್ಯಂತ ಲಕ್ಷಾಂತರ ಜನರು ಸೇರಿ ದಸರಾ ಆಚರಿಸಿದ್ದಾರೆ.ಉತ್ತರ ಕರ್ನಾಟಕದಲ್ಲಿ ಸಾವಿರಾರು ಜನರು ಸೇರಿದ ಚುನಾವಣೆ ರ‍್ಯಾಲಿಗಳು ನಡೆಯುತ್ತಿವೆ.ಅವುಗಳಿಗೆ ಇಲ್ಲದ ಕೋವಿಡ್ ನಿಯಮಗಳು ವಾಲ್ಮೀಕಿ ಮಹರ್ಷಿ ಜಯಂತಿಗಳಿಗೆ ಏಕೇ ಎಂದು ಪ್ರಶ್ನಿಸಿದರಲ್ಲದೆ,ಸರಕಾರ ದಲಿತರನ್ನು ಅಧಿಕಾರದಿಂದ ದೂರವಿಟ್ಟಿದಲ್ಲದೆ,ಸಾಂಸ್ಕೃತಿಕ ವಾಗಿಯೂ ಅವರನ್ನು ತುಳಿಯುವ ಪ್ರಯತ್ನ ನಡೆಸುತ್ತಿದೆ.ಇದನ್ನು ಎಲ್ಲಾ ದಲಿತ ಸಮುದಾಯದ ಮುಖಂಡರು ಖಂಡಿಸ ಬೇಕಾಗಿದೆ.ಧರ್ಮ,ಜಾತಿ ಹೆಸರಿನಲ್ಲಿ ಸಮುದಾಯಗಳನ್ನು ಒಡೆದು ಚೂರು ಮಾಡಿದಲ್ಲದೆ,ಈಗ ತನ್ನು ಹಿಡನ್ ಅಜೆಂಡಾವನ್ನು ಆಚರಣೆಗೆ ತರಲು ಹೊರಟಿದೆ.ಇದಕ್ಕೆ ದಲಿತ ಸಮುದಾಯ ಎಂದಿಗೂ ಅವಕಾಶ ನೀಡುವುದಿಲ್ಲ. ಅಕ್ಟೋಬರ್ 20 ರಂದು ನಾವು ವಾಲ್ಮೀಕಿ ಮಹರ್ಷಿಗಳ ಜಯಂತಿ ಆಚರಿಸಿಯೇ ಸಿದ್ದ. ಜಿಲ್ಲಾಡಳಿತಕ್ಕೆ ನಿಜಕ್ಕೂ ದಲಿತರ ಮೇಲೆ ಕಾಳಜಿ ಇದ್ದರೆ ನಮ್ಮ ಮೆರವಣಿಗೆಗೆ ಬೆಂಬಲ ನೀಡಲಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಅಧ್ಯಕ್ಷ ಕೆ.ಗೋವಿಂದರಾಜು ಮಾತನಾಡಿದರು.ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ವಕೀಲರಾದ ರಜಿನಿಕಾಂತ್,ಮುಖಂಡರಾದ ರಾಜೇಶ್ ಹೆಚ್.ಬಿ, ನಾರಾಯಣಪ್ಪ, ಮಾರುತಿ, ಸಿದ್ದಲಿಂಗಯ್ಯ ಇದ್ದರು.