ತಿಪಟೂರು

ಹೂ ಬಿಟ್ಟು ಕೈ ಹಿಡಿಯಲು ಸಿದ್ಧರಾದ ಲೋಕೇಶ್ವರ…?

ತಿಪಟೂರು : ನಿವೃತ್ತ ಎಸಿಪಿ ಲೋಕೇಶ್ವರ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರುವ ಮುನ್ಸೂಚನೆ ನೀಡಿದ್ದು, ತಾಲ್ಲೂಕಿನ ಸ್ಥಳೀಯ ಆಡಳಿತ ಘಟಕಗಳಲಿ ಅಭಿವೃದ್ಧಿ ಕುಂಠಿತವಾಗಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ನಿವೃತ್ತ ಎಸಿಪಿ, ಬಿಜೆಪಿ ಮುಖಂಡ ಲೋಕೇಶ್ವರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತಾಲ್ಲೂಕಿನ ಅಭಿವೃದ್ಧಿಯ ಸಲುವಾಗಿ ಆಡಳಿತ ಪಕ್ಷದ ಬೆಂಬಲಕ್ಕೆ ನಿಂತು ನಗರಸಭೆ, ಎಪಿಎಂಸಿ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿದೆಡೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ. ಆದರೆ ಕಲೆದ ಹಲವಾರು ತಿಂಗಳುಗಳಿಂದಲೂ ಆಡಳಿತ ನಡೆ ಸಮಾಧಾನಕರವಾಗಿಲ್ಲದ ಕಾರಣದಿಂದ ಮುಂದಿನ ದಿನಗಳಲ್ಲಿ ಎಲ್ಲಾ ಬೆಂಬಲಗಳನ್ನು ಹಿಂಪಡೆಯಲು ಚಿಂತೆ ನಡೆಸಲಾಗುತ್ತಿದೆ. ಕೇಂದ್ರ, ರಾಜ್ಯ, ಜಿಲ್ಲೆ, ತಾಲ್ಲೂಕಿನಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಾಗ ಹೆಚ್ಚಿನ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂಬ ಉದ್ದೇಶಕ್ಕೆ ಬಿಜೆಪಿಗೆ ಸಂಪೂರ್ಣವಾದಂತಹ ಬೆಂಬಲವನ್ನು ಎಲ್ಲಾ ಕಡೆಗಳಲ್ಲಿಯೂ ನೀಡಲಾಗಿತ್ತು. ಆದರೆ ಇದೀಗ ಯಾವುದೇ ಅಭಿವೃದ್ಧಿಯನ್ನು ಕಾಣಲಾಗುತ್ತಿಲ್ಲ. ನಗರಸಭೆ, ಎಪಿಎಂಸಿಗಳಲ್ಲಿ ಆಡಳಿತ ಪಕ್ಷದ ನಿರ್ಲಕ್ಷ್ಯದ ನಡೆ ಮನಸ್ಸಿಗೆ ಬೇಸರ ಮೂಡಿಸಿದೆ. ನಗರದ ಹಾಗೂ ತಾಲ್ಲೂಕಿನ ಅಭಿವೃದ್ಧಿ, ಜನಪರ ಸೇವೆಗಾಗಿ ನಾನು ರಾಜಕೀಯ ಪ್ರವೇಶ ಮಾಡಿದ್ದು ಅಂತಹ ಕಾರ್ಯ ನಡೆಯದೇ ಇದ್ದಾಗ ಒಮದು ಬಗೆಯ ಬೇಸರಕ್ಕೆ ಕಾರಣವಾಗುತ್ತದೆ. ಜೊತೆಗೆ ತಾಲ್ಲೂಕಿನ ಶಾಸಕರು ಸಚಿವರಾದ ನಂತರದಲ್ಲಿ ಯಾವುದೇ ಅಭಿವೃಧ್ಧಿಯುತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದೇ, ಜನರ ನೋವನ್ನು ಆಲಿಸದಿರುವುದು ಬೇಸರವನ್ನು ಮೂಡಿಸಿದೆ.

ಎಪಿಎಂಸಿಯಲ್ಲಿ ಕೊಬ್ಬರಿ ಕಡೆದಂತೆ ಇರಲು ಶೀಥಲೀಕರಣ ಘಟಕ ಸ್ಥಾಪನೆಗೆ ಚಿಂತಿಸಿದ್ದದು ವರ್ಷಗಳು ಕಳೆದರೂ ಯಾವುದೇ ರೀತಿಯ ಸಹಕಾರ ದೊರೆತಿಲ್ಲ. ನಗರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ದಿನಗಳನ್ನು ಮುಂದೂಡುತ್ತಾ ಬಂದಿದ್ದು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಂತಹ ಸ್ತಿತಿ ನಿರ್ಮಾಣವಾಗಿದೆ. ನಗರಸಭೆಯಲ್ಲಿ ಯಾವುದೇ ನಿವೇಶನಗಳಿಗೂ ಖಾತೆಗಳನ್ನು ಮಾಡದೆ ಮಧ್ಯಮ ವರ್ಗದ ಜನರಿಗೆ ತೊಂದರೆ ಆಗುತ್ತಿದೆ. ಟೂಡಾಗೆ ಅಸ್ಥಿತ್ವವನ್ನು ನಿರ್ಜಿವಗೊಳಿಸಿದ್ದು 4 ವರ್ಷವಾದರೂ ಯಾರನ್ನು ನೇಮಕ ಮಾಡದೇ ನಗರದ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆ. ನಗರದ ಯುಜಿಡಿ ನೀರು ನಾಲೆಯನ್ನು ಸೇರುತ್ತಿದ್ದು ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಪತ್ರಿಕೆಯ ವರದಿಗಳು ಅಧಿಕಾರಿಗಳು, ಜನಪ್ರತಿನಿಧಿಗಳು ತಲೆಕಡೆಡಿಸಿಕೊಂಡಿಲ್ಲ. ಇಷ್ಟೇಲ್ಲಾ ಮುಖ್ಯವಾದಂತಹ ಕಾರ್ಯಗಳು ಬಾಕಿ ಇರುವಾಗ ಆಡಳಿತ ಪಕ್ಷಕ್ಕೆ ಬಂಬಲ ನೀಡಿ ಯಾವ ಪ್ರಯೋಜನವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ನಿರ್ದೇಶಕ ಬಸವರಾಜು, ನಗರಸಭೆಯ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರುಗಳಾದ ಭಾರತಿ ಮಂಜುನಾಥ್, ಆಶ್ರಿಫಾ ಬಾನು, ಯಮುನಾ ಧರಣೀಶ್ ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker