
ಗುಬ್ಬಿ : ಭಾರಿ ಸಂಚಲನ ಮೂಡಿಸುತ್ತಿರುವ ೨೫ ರಂದು ನಡೆಯಲಿರುವ ಜೆ.ಡಿ.ಎಸ್.ಪಕ್ಷದ ಬೃಹತ್ ಸಮಾವೇಶ ಮತ್ತು ಪ್ರಬಲ ವ್ಯಕ್ತಿ ಬಿ.ಎಸ್.ನಾಗರಾಜು ರವರ ಪಕ್ಷ ಸೇರ್ಪಡೆ ಕಾರ್ಯಕ್ರಮದ ಜೊತೆಗೆ ಹಾಲಿ ಶಾಸಕರಿಗೆ ಜೆ.ಡಿ.ಎಸ್.ಪಕ್ಷದಿಂದ ತಿಲಾಂಜಲೀ ಇಡಲು ರಣತಂತ್ರ ರೂಪಿಸಲು ಮುಂದಾದರೇ ಜೆ.ಡಿ.ಎಸ್.ವರಿಷ್ಠ ಎಚ್.ಡಿ.ಕುಮಾರಸ್ವಾಮಿ.??
ಗುಬ್ಬಿ ಪಟ್ಟಣದಲ್ಲಿ ಹಲವು ತಿಂಗಳುಗಳಿಂದ ಪಕ್ಷಾಂತರ ಪರ್ವದ ಹೊಗೆಯಾಡುತ್ತಿದ್ದು ಹಲವಾರು ವಿಚಾರಗಳಿಗೆ ಗುಬ್ಬಿ ಕ್ಷೇತ್ರದ ಹಾಲಿ ಶಾಸಕ ಶ್ರೀನಿವಾಸ್ ಮತ್ತು ಜೆ.ಡಿ.ಎಸ್.ವರಿಷ್ಠರ ನಡುವಿನ ಮಾತುಕತೆ ಮತ್ತು ಸ್ವಪಕ್ಷದಲ್ಲಿ ಇದ್ದುಕೊಂಡು ಕಾಂಗ್ರೆಸ್ ಪಕ್ಷದ ಓಲೈಕೆಗೆ ಮುಂದಾಗುತ್ತಿದ್ದ ಸ್ಥಳೀಯ ಶಾಸಕರ ಹೇಳಿಕೆಗೆ ರಣತಂತ್ರ ರೂಪಿಸಲು ಜೊತೆಗೆ ಪಕ್ಷ ಸಂಘಟನೆಗೆ ಒತ್ತು ನೀಡಲು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠರ ಆಗಮನದ ಸಮಾವೇಶ ತಾಲೋಕಿನಾದ್ಯಂತ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಗುಬ್ಬಿ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆ.ಡಿ.ಎಸ್. ಪಕ್ಷದ ವರಿಷ್ಠರಾದ ಎಚ್.ಡಿ ಕುಮಾರಸ್ವಾಮಿ ಅವರ ನಡುವಿನ ಆರೋಪ ಪ್ರತ್ಯಾರೋಪ ಮತ್ತು ಆಂತರಿಕ ಭಿನ್ನಮತ ಸ್ಫೋಟಕ ಹೇಳಿಕೆಗಳು ಹಾಗ್ಗಾಗೆ ಸುಮಾರು ತಿಂಗಳುಗಳಿಂದ ಕೇಳಿ ಬರುತ್ತಿದ್ದು ಜೊತೆಗೆ ಹಾಲಿ ಶಾಸಕರು ಕೆಲ ಮುಖಂಡರನ್ನು ಸಂಪರ್ಕ ಮಾಡುತ್ತಿದ್ದಾರೆ ಜೊತೆಗೆ ಕೊನೆ ಘಳಿಗೆಯಲ್ಲಿ ಜೆಡಿಎಸ್ ಗೆ ಕೊಕ್ ನೀಡಿ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ವದಂತಿಗಳು ಕೇಳಿಬರುತ್ತಿದ್ದು ಇದರ ಬೆನ್ನಲ್ಲೇ ಬಿಜೆಪಿ ಪಕ್ಷದ ಪ್ರಭಾವಿ ನಾಯಕರೊಬ್ಬರು ಇತ್ತೀಚಿನ ದಿನಗಳಲ್ಲಿ ವರಿಷ್ಠರ ಜೊತೆ ಸೇರುತ್ತಿರುವುದು ಮುಂದಿನ ಜೆಡಿಎಸ್ ಪಕ್ಷದ ಅಭ್ಯರ್ಥಿ ಇವರೇ ಎಂದು ಕೇಳಿಬರುತ್ತಿದ್ದು ಜೊತೆಗೆ ಬಹುತೇಕ ಬಿ ಎಸ್ ನಾಗರಾಜು ರವರಿಗೆ ಮುಂದಿನ ಚುನಾವಣೆಯ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಆಗಿದೆ ಎಂಬ ವಿಚಾರಗಳು ಮತ್ತು ಇವರ ಪಕ್ಷ ಸೇರ್ಪಡೆ ಕಾರ್ಯಕ್ರಮ ಎಲ್ಲವನ್ನು ಸೂಕ್ಮವಾಗಿ ಗಮನಿಸಿದರೆ ಗುಬ್ಬಿ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬಿ.ಎಸ್.ನಾಗರಾಜು ರವರು ಎಂಬ ವಿಚಾರ ಬಹುತೇಕ ನಿಜವಾದಂತೆ ಕಾಣುತ್ತಿದೆ.
ಮುಂದಿನ ೨೫ ರಂದು ನಡೆಯಲಿರುವ ಜೆ.ಡಿ.ಎಸ್.ಸಮಾವೇಶ ಮತ್ತು ಬಿ.ಎಸ್.ನಾಗರಾಜು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದ ವಿಚಾರ ಕುರಿತು ಜೆ.ಡಿ.ಎಸ್.ಶಾಸಕ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಯವರಿಗೆ ಯಾವುದೇ ಇಮೇಜ್ ಇಲ್ಲ ಅವರು ಅಸ್ತಿತ್ವ ಉಳಿಸಿಕೊಳ್ಳಲು ಏನೇನೋ ಮಾಡುತ್ತಿದ್ದಾರೆ ಎಂಬ ಸ್ಥಳೀಯ ಹಾಲಿ ಜೆಡಿಎಸ್ ಶಾಸಕರ ಹೇಳಿಕೆಗಳು ವರಿಷ್ಠರ ಕೆಂಗಣ್ಣಿಗೆ ಗುರಿಯಾಗುವಂತಿದ್ದು ಮಾಹಿತಿ ಮತ್ತು ಈ ಕಾರ್ಯಕ್ರಮದ ಬಗೆಗಿನ ಯಾವುದೇ ಸುಳಿವು ನನಗಿಲ್ಲ ಎನ್ನುತ್ತಿರುವ ಶಾಸಕರ ಮಾತು ಒಂದೆಡೆಯಾದರೆ ಹಾಲಿ ಶಾಸಕರಿಗೆ ಯಾವುದೇ ಕರೆ ನೀಡದೆ ಕಾರ್ಯಕ್ರಮ ಆಯೋಜನೆಗೆ ಒಪ್ಪಿದೆ ಸೂಚಿಸಿ ನಾನು ಆಗಮಿಸುವ ಭರವಸೆ ನೀಡಿದ ವರಿಷ್ಠರ ಈ ನಡೆ ತಾಲೂಕಿನ ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕಿಸಿದೆ.
ಈಗಾಗಲೇ ಬಿ.ಎಸ್.ನಾಗರಾಜು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಜೆಡಿಎಸ್ ಅಭ್ಯರ್ಥಿ ಇವರೇ ಎಂದು ಪರಸ್ಪರ ಹಂಚಿಕೊಳ್ಳುತ್ತಿದ್ದು ಹಾಲಿ ಶಾಸಕರು ಜೆ.ಡಿ.ಎಸ್.ಪಕ್ಷದಲ್ಲಿ ಇರುವಾಗಲೇ ಮತ್ತೋರ್ವ ಮುಂದಿನ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್.ನ ಅಭ್ಯರ್ಥಿ ಎಂದು ಹೇಳಾಲಾಗುತ್ತಿದ್ದು ಜೊತೆಗೆ ನಾಗರಾಜು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮ ಎಲ್ಲವೂ ನಿಗೂಢವಾಗಿದೆ.

ಜೆ.ಡಿ.ಎಸ್.ಪಕ್ಷದ ಸಿದ್ಧಾಂತಗಳು ನನಗೆ ಇಷ್ಟವಾದ ಹಿನ್ನೆಲೆಯಲ್ಲಿ ಪಕ್ಷ ಸೇರ್ಪಡೆ ಆಗುತ್ತಿದ್ದೇನೆ ಸದ್ಯದಲ್ಲಿ ತಾಲೋಕಿನಾದ್ಯಂತ ಪಕ್ಷ ಬಲವರ್ಧನೆಗೆ ಮುಂದಾಗಿ ಮುಂದಿನ 2023 ರಲ್ಲಿ ಕುಮಾರಣ್ಣ ನವರನ್ನು ಮುಂದಿನ ಸಿ.ಎಂ.ಮಾಡುವ ಹಂಬಲದಲ್ಲಿ ಪಕ್ಷದಲ್ಲಿ ದುಡಿಯುತ್ತೇನೆ.ಜೊತೆಗೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್.ಪಕ್ಷದ ಆಕಾಂಕ್ಷಿಯೂ ಕೂಡ ಆಗಿದ್ದು ವರಿಷ್ಠರಿಂದ ಅವಕಾಶ ಸಿಕ್ಕರೆ ನಾನು ಕೂಡ ನೂರಕ್ಕೆ ನೂರು ಪರ್ಸೆಂಟ್ ಅಭ್ಯರ್ಥಿಯಾಗಲು ಸಿದ್ಧನಿದ್ದೇನೆ. -ಬಿ.ಎಸ್.ನಾಗರಾಜು.ಯುವ ಮುಖಂಡರು
ಇಬ್ಬರ ಜಗಳ ಮೂರನೇಯವರಿಗೆ ಲಾಭ:-
ಕಳೆದ ಎಲ್ಲಾ ವಿಧಾನ ಸಭಾ ಚುನಾವಣೆಗಳಲ್ಲಿ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ ಬಿಜೆಪಿ ಪಕ್ಷದ ಬೆಟ್ಟಸ್ವಾಮಿ ಮತ್ತು ದಿಲೀಪ್ ಕುಮಾರ್ ರವರ ನಡುವಿನ ಮುಸುಕಿನ ಗುದ್ದಾಟದಲ್ಲಿ ಜೆ.ಡಿ.ಎಸ್.ಪಕ್ಷದ ಶಾಸಕ ಎಸ್.ಆರ್.ಶ್ರೀನಿವಾಸ್ ಕೂದಲೆಳೆ ಅಂತರದಲ್ಲಿ ಗೆಲುವು ಸಾದಿಸುತ್ತಿದ್ದು ಆದರೆ ಇಂದಿನ ಜೆಡಿಎಸ್ ಪಕ್ಷದಲ್ಲಿನ ಹೊಸ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಮದ್ಯೆ ಇಬ್ಬರ ಜಗಳದಿಂದ ಯಾರಿಗೆ ಲಾಭ ಎಂಬುದನ್ನು ಗಮನಿಸಬೇಕಿದೆ.
ಇದಕ್ಕೆಲ್ಲ ಉತ್ತರ ಮುಂದೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್.ಪಕ್ಷದ ವರಿಷ್ಠರ ಆಗಮನದಲ್ಲಿ ಗುಬ್ಬಿ ವಿಧಾನ ಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಘೋಷಣೆಯೋ ಇಲ್ಲ ಪಕ್ಷ ಸೇರ್ಪಡೆಯೋ ಎಂಬುದನ್ನು ಕಾದುನೋಡಬೇಕಿದೆ.
ವರದಿ: ದೇವರಾಜು ಎಂ.ಎಸ್. ಗುಬ್ಬಿ