ಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಧ್ವನಿಯಾಗುವೆ : ಶಾಸಕ ಮಸಾಲಜಯರಾಮ್
ತುರುವೇಕೆರೆ : ಶಾಸಕನಾಗುವ ಮುನ್ನ ಜನತೆಗೆ ನೀಡಿದ್ದ ಭರವಸೆಯನ್ನು ಒಂದಷ್ಟು ಈಡೇರಿಸಿದ ತೃಪ್ತಿ ನನಗಿದೆ ಎಂದು ಶಾಸಕ ಮಸಾಲಜಯರಾಮ್ ಹೇಳಿದರು.
ತಾಲೂಕಿನ ದೊಡ್ಡೇರಿ ಗ್ರಾಮದ ಅಧಿದೇವತೆ ಶ್ರೀ ಕೆಂಪಮ್ಮ ದೇವಿ ದೇಗುಲದ ಮಹಾದ್ವಾರ ಉದ್ಘಾಟಿಸಿ ಮಾತನಾಡಿದ ಅವರು ನಾನು ಶಾಸಕನಾಗುವುದಕ್ಕೂ ಮೊದಲು ಕ್ಷೇತ್ರ ಪ್ರವಾಸ ಮಾಡುವ ವೇಳೆ ಜನತೆ ಕೆರೆಕಟ್ಟೆಗಳಿಗೆ ಹೇಮೆಯ ನೀರು, ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಮಸ್ಯೆಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಅಂಧು ಶಾಸಕನಾದ ನಂತರ ಸಮಸ್ಯೆಗಳನ್ನು ಬಗೆಹರಿಸುವ ವಚನ ನೀಡಿದ್ದೆ. ಅದರಂತೆ ನಾನು ಶಾಸಕನಾದ ನಂತರ ಕ್ಷೇತ್ರದ ಗಡಿ ಭಾಗದ ಹಳ್ಳಿಗಳ ಅಭಿವೃದ್ದಿಯೂ ಸೇರಿದಂತೆ ಅಗತ್ಯವಿರುವ ಗ್ರಾಮಗಳಿಗೆ ಆದ್ಯತಾನುಸಾರ ಮೂಲಸೌಕರ್ಯಗಳನ್ನು ನೀಡಿದ್ದೇನೆ ಎಂದರು.
ಮಾಯಸಂದ್ರ ಹೋಬಳಿಯ ತೂಯಲಹಳ್ಳಿ, ಮಲ್ಲೂರು ಸೇರಿದಂತೆ ಅನೇಕ ಕೆರೆಗಳಿಗೆ ಏತ ನೀರಾವರಿ ಯೋಜನೆಯನ್ನು ಅಳವಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಶೀಘ್ರದಲ್ಲೇ ಹೇಮಾವತಿ ನಾಲೆ ಅಗಲೀಕರಣ ಕಾರ್ಯ ಆಗಲಿದೆ ಇದರಿಂದಾಗಿ ನಾಲೆಗಳಲ್ಲಿ ನೀರಿನಹರಿವಿನ ಪ್ರಮಾಣ ಹೆಚ್ಚಾಗಲಿದೆ. ಕ್ಷೇತ್ರದ ಕಟ್ಟ ಕಡೆಯ ಕೆರೆಗಳಿಗೆ ತ್ವರಿತವಾಗಿ ನೀರು ಕೊಂಡೊಯ್ಯಲು ಸಾದ್ಯವಾಗಲಿದ್ದು ಎಲ್ಲಾ ಕೆರೆಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸಲಾಗುವುದು. ಶೆಟ್ಟಿಗೊಂಡನಹಳ್ಳಿಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸಬೇಕೆಂಬ ರೈತರ ಬಹುದಿನಗಳ ಆಸೆಯನ್ನು ಶೀಗ್ರದಲ್ಲಿ ಶಂಕುಸ್ಥಾಪನೆ ಮಾಡುವುದರೊಂದಿಗೆ ಈಡೇರಿಸುತ್ತೇನೆ. ಕ್ಷೇತ್ರದ ರೈತರ ಎಲ್ಲಾ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಮತದಾರರ ಮನೆ ಮಗನಾಗಿ ದುಡಿಯುತ್ತೇನೆ ಎಂದರು.
ಮಹಾದ್ವಾರದ ದಾನಿಗಳೊಲ್ಲಬ್ಬರಾದ ಚಿಕ್ಕಣ್ಣಯ್ಯವನರು ಪ್ರಾಸ್ತಾವಿಕವಾಗಿ ಮಾತನಾಡಿ ಸರಳ ಸಜ್ಜನಿಕೆಯ ಗುಣವುಳ್ಳ ಶಾಸಕರು ಗಡಿಭಾಗದ ಗ್ರಾಮಗಳ ಅಭಿವೃದ್ದಿಗೆ ಒತ್ತು ನೀಡುತ್ತಿದ್ದಾರೆ. ಕ್ಷೇತ್ರದ ಕಟ್ಟಕಡೆಯ ಪ್ರಜೆಯ ಅಹವಾಲನ್ನು ಆಲಿಸಿ ಸಮಸ್ಯೆ ಬಗೆಹರಿಸುತ್ತಿರುವ ಜನಾನುರಾಗಿಯಾದ ಮಸಾಲಜಯರಾಮ್ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಶ್ರೀ ಕೆಂಪಮ್ಮಸೇವಿ ದೇಗುಲದ ಮಹಾದ್ವಾರ ಉದ್ಘಾಟಿಸಿದ ಶಾಸಕ ಮಸಾಲಜಯರಾಮ್ ರವರನ್ನು ವೇದಿಕೆವರೆಗೂ ಮೆರವಣಿಗೆಯಲ್ಲಿ ಕರೆತರಲಾಯಿತು. ವೇದಿಕೆಯಲ್ಲಿ ದಾನಿಗಳಾದ ಸುಮಿತ್ರಾಚಿಕ್ಕಣ್ಣ, ಸೇರಿದಂತೆ ಅನೇಕ ದಾನಿಗಳನ್ನು ಹಾಗೂ ಮಹಾದ್ವರಾದ ಶಿಲ್ಪಿಗಳನನು ಸ್ಮರಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ, ಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ದೊಡ್ಡೇರಿ ರಾಜಣ್ಣ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಎನ್.ಆರ್.ಜಯರಾಮ್, ಶ್ರೀನಿವಾಸ್,ಪಿ.ಎ.ಸಿ.ಎಸ್. ಅಧ್ಯಕ್ಷ ದೊಡ್ಡೇರಿರಾಜಣ್ಣ,ಗ್ರಾ.ಪಂ. ಅಧ್ಯಕ್ಷ ಕೆಂಪರಾಜ್, ಉಪಾದ್ಯಕ್ಷರಾದ ಸುಮಿತ್ರಾಚಿಕ್ಕಣ್ಣಯ್ಯ, ರಾಮಣ್ಣ, ಜನ್ನೇನಹಳ್ಳಿಲಕ್ಕಣ್ಣ, ಶೆಟ್ಟಿಗೊಂಡನಹಳ್ಳಿ ಗ್ರಾ.ಪಂ. ಸದಸ್ಯರು ಹಾಗೂ ದೊಡ್ಡೇರಿ ಆಸುಪಾಸಿನ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.