ಕೊರಟಗೆರೆ : ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ರವರು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿದ ಎನ್.ಗ್ರೀಷ್ಮಾ ನಾಯಕ್ ವಿದ್ಯಾರ್ಥಿನಿಗೆ ಸಿದ್ದಾರ್ಥ ಸಂಸ್ಥೆಯಿಂದ ಉಚಿತ ವೈದ್ಯಕೀಯ ಸೀಟಿನ ಭರವಸೆ ಮತ್ತು 50 ಸಾವಿರ ನಗದು ನೀಡಿ ಅಭಿನಂದಿಸಿ ಗೌರವಿಸಿದರು.
ಕೆಲವು ತಿಂಗಳ ಹಿಂದೆ ಕರೋನಾ ಹಿನ್ನಲೆಯಲ್ಲಿ ಶಾಲೆಗಳು ಪ್ರಾರಂಭವಾಗದೆ ಇದುದರಿಂದ ಮಾಹಿತಿ ಕೊರತೆ ಉಂಟಾಗಿ ಪಟ್ಟಣದ ಹನುಮಂತಪುರದ ವಾಸಿ ಬಿ.ಆರ್.ನರಸಿಂಹಮೂರ್ತಿ,ಪದ್ಮಾವತಿ ದಂಪತಿ ಮಗಳು ವಿದ್ಯಾರ್ಥಿನಿ ಗ್ರೀಷ್ಮಾಗೆ 2021 ರ ಜುಲೈ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಪ್ರವೇಶಪತ್ರ ಸಿಗದೆ ಇದ್ದಕಾರಣ ಗ್ರೀಷ್ಮಾ ಮನನೋಂದ್ದಿದಳು.ವಿಷಯ ತಿಳಿದ ತಕ್ಷಣ ಶಾಸಕ ಡಾ.ಜಿ.ಪರಮೇಶ್ವರ ಅಂದು ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಆಕೆಗೆ ಆತ್ಮಸೈರ್ಯ ತುಂಬಿ ಪೋಷಕರಿಗೆ ಪರೀಕ್ಷೆ ಬರೆಯುಸುವ ಭರವಸೆ ನೀಡಿದ್ದರು,ಸ್ಥಳದಲ್ಲಿಯೇ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್‌ಕುಮಾರ್ ರವರಿಗೆ ದೂರವಾಣಿ ಮೂಲಕ ಕೆರೆಮಾಡಿ ಅವರಿಂದ ಪರೀಕ್ಷೆ ಬರೆಸುವ ಭರವಸೆ ಪಡೆದು ತಾಲೂಕು ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೋಳ್ಳುವಂತೆ ಆದೇಶಿಸಿದ್ದರು. ಈ ಬಗ್ಗೆ ತೊಂದರೆಯಾದಲ್ಲಿ ಸಂಪರ್ಕಿಸುವಂತೆ ತಿಳಿಸಿದ್ದರು.
ಗ್ರೀಷ್ಮಾನಾಯಕ್ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದರಿಂದ ಶಾಸಕ ಡಾ.ಜಿ.ಪರಮೇಶ್ವರ ಅವರ ಮನೆಗೆ ಬೇಟಿ ನೀಡಿ ಅಭಿನಂದಿಸಿ ಮಾತನಾಡಿ ನನ್ನ ಕ್ಷೇತ್ರದ ವಿದ್ಯಾರ್ಥಿನಿ ರಾಜ್ಯಕ್ಕೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿರುವುದು ಸಂತಸ ತಂದಿದೆ,ಎಲ್ಲಾ ಅಡೆತಡೆಗಳನ್ನು ನೋವುಗಳ ನ್ನು ನೋವುಗಳನ್ನು ಮೀರಿ ಗ್ರೀಷ್ಮಾ ಸಾಧನೆ ಮಾಡಿದ್ದು,ಅವರ ತಂದೆತಾಯಿರವರ ಪ್ರೋತ್ಸಾಹ ಮತ್ತು ಜವಾಬ್ದಾರಿಯನ್ನು ಮೆಚ್ಚಲೇಬೇಕು ಎಂದರು.ವಿದ್ಯಾರ್ಥಿನಿಯು ವೈದ್ಯಳಾಗುವ ಮುಂದಿನ ಗುರಿಹೊಂದಿರುವದ ನ್ನು ತಿಳಿದು ಪಿಯುಸಿ ಮುಗಿದ ಮೇಲೆ ಸಿದ್ದಾರ್ಥಸಂಸ್ಥೆಯಿಂದ ಆಕೆಗೆ ಉಚಿತವಾಗಿ ವೈದ್ಯಕೀಯ ಸೀಟನ್ನು ನೀಡಲಾಗುವುದು,ಪ್ರಸ್ತುತ ಆಕೆಯ ಸಾಧನೆಗೆ ಉತ್ತೇಜನ ನೀಡಲು 50ಸಾವಿರ ನಗದು ಪ್ರೋತ್ಸಾಹವನ್ನು ನೀಡಲಾಗಿದೆ.ಈ ಹಣ ಆಕೆಯ ಶ್ರಮಕ್ಕೆ ಎಂದಲ್ಲಾ ವಿದ್ಯಾರ್ಥಿನಿಯ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಲಿ ಎನ್ನುವ ಸದುದ್ದೇಶವಾಗಿದೆ, ಕೊರಟಗೆರೆ ಕ್ಷೇತ್ರದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಸದಾ ಸಿದ್ದವಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುದಾಕರ್,ಕೆಪಿಸಿಸಿ ಮಾದ್ಯಮ ವಕ್ತಾರ ಮುರುಳಿಧರ ಹಾಲಪ್ಪ,ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ,ಯುವಅದ್ಯಕ್ಷ ವಿನಯ್‌ಕುಮಾರ್, ಪ,ಪಂ ಸದಸ್ಯರಾದ ನಾಗರಾಜು,ನಂದೀಶ್,ಮಾಜಿಉಪಾದ್ಯಕ್ಷ ಕೆ.ವಿ.ಮಂಜುನಾಥ,ಮುಖಂಡರುಗಳಾದ ಹುಲಿಕುಂಟೆಪ್ರಸಾದ್, ಎಮ್‌ಎನ್‌ಜೆ ಮಂಜುನಾಥ್,ಮಹೇಶ್,ಕೆಎಲ್‌ಎಂ ಮಂಜುನಾಥ್,ಅರವಿಂದ್,ಕಿರಣ್,ಮಂಜುನಾಥ್,ಸೇರಿದಂತೆ ಇತರರು ಹಾಜರಿದ್ದರು.