ಶಿರಾ

ಮುದ್ದರಂಗನಹಳ್ಳಿಗೇಟ್‌ನಿಂದ ಹನುಮನಹಳ್ಳಿ ಸಂಪರ್ಕ ರಸ್ತೆಗೆ ಡಾಂಬರೀಕರಣ ಮಾಡಲು ಗ್ರಾಮಸ್ಥರ ಒತ್ತಾಯ

ಶಿರಾ :ಮದ್ದರಂಗನಹಳ್ಳಿ (ಉಗಣೆಕಟ್ಟೆ) ಗೇಟ್ ನಿಂದ ಹನುಮನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಾಂಬರೀಕರಣಕ್ಕೆ ಮಾಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಮೇಲ್ಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದ್ದರಂಗನಹಳ್ಳಿ ಗೇಟ್ ನಿಂದ ಹನುಮನಹಳ್ಳಿ ಗ್ರಾಮಕ್ಕೆ ಹೋಗುವ 2 ಕಿಮೀ ರಸ್ತೆ ಕಳೆದ 10 ವರ್ಷಗಳಿಂದ ದುರಸ್ತಿ ಕಾಣದೆ ನಿತ್ಯ ಈ ರಸ್ತೆಯ ಮಾರ್ಗವಾಗಿ ಹೋಗುವಂತ ಶಾಲಾ ವಿದ್ಯಾರ್ಥಿಗಳಿಗೆ, ರೈತರಿಗೆ ಕಷ್ಟ ಸಾಧ್ಯವಾಗಿದೆ. ಶಿರಾ– ಅಮರಾಪುರ ರಸ್ತೆಗೆ ಸಂಪರ್ಕ ಪಡೆಯಲು ಈ ರಸ್ತೆಯ ಅವಶ್ಯಕತೆ ಹೆಚ್ಚಾಗಿದೆ ಮಳೆ ಬಂದರೆ ಗುಂಡಿಗಳಲ್ಲಿ ಒಡಾಡುವುದು ಕಷ್ಟ, ದ್ವಿಚಕ್ರ ಸವಾರರು ಬಿದ್ದು ಬರುವಂತ ಸ್ಥಿತಿ ಇದ್ದು ರಸ್ತೆಯ ಡಾಂಬರೀಕರಣ ಅಗತ್ಯವಾಗಿ ಬೇಕಿದೆ. ಶಾಸಕರು ಇತ್ತ ಗಮನ ಹರಿಸಿ ರಸ್ತೆಗೆ ಡಾಂಬರೀಕರಣ ಮಾಡಿಸುವಂತೆ ಗ್ರಾಪಂ ಸದಸ್ಯ ಹೆಚ್.ಆರ್.ನರಸಿಂಹ ಮೂರ್ತಿ ಒತ್ತಾಯಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಿಮಂತರಾಜು, ಹೆಚ್.ಎಲ್.ಮೂರ್ತಿ, ಹೆಚ್.ಬಿ.ರಂಗನಾಥ್, ಕುಮಾರ್,ಜಗದೀಶ್, ಗುಂಡಣ್ಣ, ಶಿವಕುಮಾರ್ ರವಿ ಸೇರಿದಂತೆ ಹಲವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker