ಶಿರಾ : ಶ್ರೀರಾಮನನ್ನು ಸಾವಿರಾರು ವರ್ಷಗಳು ಘಟಿಸಿದರು ಭಕ್ತರು ನೆನೆದು ಆರಾಧಿಸುತ್ತಾರೆ ಎಂದರೆ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಉತ್ತಮ ಆಡಳಿತ ನೀಡಿದ್ದೆ ಕಾರಣ ಅಯೋಧ್ಯೆ ಜಗತ್ತಿಗೆ ಮಾದರಿಯಾಗಲಿ ಎಂದು ಎಂದು ಶ್ರೀ ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ಹೇಳಿದರು.
ಅವರು ತಾಲ್ಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಅಂಗವಾಗಿ ಮನೆಮನೆಗೆ ಮಂತ್ರಾಕ್ಷತೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆರ್ಶೀವಚನ ನೀಡಿದರು. ತನ್ನ ವ್ಯಕ್ತಿತ್ವದ ಮೂಲಕ ಪ್ರೀತಿ ಹಂಚುವ ಮರ್ಯಾದ ಪುರುಷೋತ್ತಮ ಶ್ರೀ ರಾಮನ ಆದರ್ಶ ಇಂದಿನ ಸಮಾಜಕ್ಕೆ ಮಾದರಿ ಎಂದರು.
ಮನೆ ಮನೆಗು ತೆರಳಿ ಮಂತ್ರಾಕ್ಷತೆ ವಿತರಣೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬ ಸಂಕಲ್ಪ ಕೇಂದ್ರ ಸರಕಾರ ಮಾಡಿದಾಗ 900 ಕೋಟಿ ರೂಪಾಯಿ ಕ್ರಿಯಾಯೋಜನೆ ಸಿದ್ಧವಾಗಿತ್ತು. ಶ್ರೀರಾಮ ಮುಂದಿನ ಕಟ್ಟಲೇಬೇಕೆಂಬ ಭಕ್ತರ ಸಂಕಲ್ಪ ಪ್ರತಿಯೊಬ್ಬರೂ ಭಕ್ತಿ ಸಮರ್ಪಿಸುವ ಮೂಲಕ 3600 ಕೋಟಿ ಭಕ್ತರಿಂದಲೇ ಬಂದದ್ದು, ದೇಶದ ಜನರು ಶ್ರೀರಾಮ ಮೇಲಿಟ್ಟಿರುವ ಭಕ್ತಿಯನ್ನು ಸಾಕ್ಷಿಕರಿಸಿತ್ತು. ಅಯೋಧ್ಯೆಯ ಪುಣ್ಯಕ್ಷೇತ್ರಕ್ಕೆ ಎನ್ನ ಭಕ್ತರು ಒಮ್ಮೆ ನೋಡುವಂತಹ ಸೌಭಾಗ್ಯ ದೇವರು ಕಲ್ಪಿಸಲಿ ಎಂದರು.
ಈ ಸಂದರ್ಭದಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಸಂಘಟನಾ ಕಾರ್ಯದರ್ಶಿ ದೇವರಾಜ್, ಯುವ ಮುಖಂಡ ವೇದಮೂರ್ತಿ, ಸಂತೆಪೇಟೆ ನಟರಾಜ್, ಎಂ ಶಿವಲಿಂಗಯ್ಯ, ಸಿದ್ದಲಿಂಗಪ್ಪ, ಕುಮಾರ್ ಮೇಷ್ಟುç, ಹೆಚ್.ಜಿ ರಾಮಕೃಷ್ಣಪ್ಪ, ಹೊಸಹಳ್ಳಿ ರಾಮಚಂದ್ರಪ್ಪ, ಕುಮಾರ್, ಚಿಕ್ಕನಕೋಟೆ ಕರಿಯಣ್ಣ, ಬರಗೂರು ಯುವರಾಜ್, ವೆಂಕಟೇಶ್, ರಂಗನಾಥ್, ಗೋಪಿಕುಂಟೆ ಪ್ರಸನ್ನ, ನಾಗರಾಜ್ ಗೌಡ, ಮಾರುತಿ, ದೇವರಾಜ್, ಕೃಷ್ಣಪ್ಪ, ರವಿಕುಮಾರ್, ಭಾಸ್ಕರ್, ಶಶಿ ಕುಮಾರ್, ಮಂಜುನಾಥ್ ಸ್ವಾಮಿ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.