ತುಮಕೂರು

ತುಮಕೂರು : ಎಡಗೈ ಸಮುದಾಯಕ್ಕೆ ವಿಧಾನಪರಿಷತ್ ಟಿಕೆಟ್‌ ನೀಡಲು ಎಡಗೈ ಮುಖಂಡರ ಒತ್ತಾಯ

ಸಮುದಾಯಕ್ಕೆ ಪ್ರಾತಿನಿಧ್ಯ ನೀಡದ ಕಾಂಗ್ರೆಸ್: ನರಸೀಯಪ್ಪ

ತುಮಕೂರು: ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್
ಪಕ್ಷದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ
ರಾಜಕೀಯ ಧುರೀಣರಿಗೆ ಯಾವುದೇ ಸ್ಥಾನಮಾನ
ದೊರೆತ್ತಿಲ್ಲ.ಹಾಗಾಗಿ ಮುಂಬರುವ ಸ್ಥಳೀಯ
ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ
ಸ್ಪರ್ಧಿಸಲು ಅವಕಾಶ ನೀಡುವಂತೆ ಜಿಲ್ಲಾ ಕಾಂಗ್ರೆಸ್
ಉಪಾಧ್ಯಕ್ಷ ಸಿ.ನರಸೀಯಪ್ಪ ಒತ್ತಾಯಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿಂದು ನಡೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
1962ರಲ್ಲಿ ಕಾಂಗ್ರೆಸ್ ಪಕ್ಷದಿಂದ ಎಡಗೈ ಸಮು
ದಾಯಕ್ಕೆ ಸೇರಿದ ಚನ್ನಿಗರಾಮಯ್ಯ ಮತ್ತು ಅಂ
ಜನಪ್ಪ ಅವರಿಗೆ ಟಿಕೇಟ್ ನೀಡಿರುವುದನ್ನು ಹೊ
ರತು ಪಡಿಸಿದರೆ, ಆನಂತರದಲ್ಲಿ ಮತ್ಯಾರಿಗೂ ಎಂ.
ಎಲ್.ಎ, ಎಂ.ಎಲ್.ಸಿ, ಸಂಸದರ ಸ್ಥಾನಗಳಿಗೆ
ಸ್ಪರ್ಧಿಸಲು ಟಿಕೇಟ್ ನೀಡಿಲ್ಲ. ಈಗ ಒಂದು ಅವ
ಕಾಶವಿದೆ.ಸಮುದಾಯದಿಂದ ಎಂ.ಎಲ್.ಸಿ.ಗೆ
ಸ್ಪರ್ಧಿಸ ಬಯಸುವ ಜಿಲ್ಲಾ ಪಂಚಾಯಿತಿ ಸದಸ್ಯ
ರಾದ ಕೆಂಚಮಾರಯ್ಯ,ಉದ್ಯಮಿ ಡಿ.ಟಿ.ವೆಂಕಟೇಶ್
ಹಾಗೂ ವಕೀಲರಾದ ಮರಿಚನ್ನಮ್ಮ ಅವರಲ್ಲಿ
ಯಾರಿಗಾದರೂ ಒಬ್ಬರಿಗೆ ಟಿಕೇಟ್ ನೀಡಬೇಕೆಂ
ಬುದು ನಮ್ಮ ಆಗ್ರಹವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿಯ ಎಡಗೈ ಸಮು
ದಾಯವನ್ನು ಕೇವಲ ಮತ ಬ್ಯಾಂಕಾಗಿ ಮಾತ್ರ
ಬಳಕೆ ಮಾಡಿಕೊಳ್ಳು ತ್ತಿದೆ.ಚುನಾವಣೆ ಟಿಕೇಟ್
ನೀಡುವ ಸಂದರ್ಭದಲ್ಲಿ ಕಡೆಗಣಿಸುತ್ತಿದೆ.ಇದು ಸರಿ
ಯಾದ ಕ್ರಮವಲ್ಲ.ಎಡಗೈ ಸಮುದಾಯದವರು
ಕಾಂಗ್ರೆಸ್ ಪಕ್ಷದಲ್ಲಿ ಉಳಿಯಬೇಕೆಂದರೆ,ಈ
ಬಾರಿಯ ವಿಧಾನಪರಿಷತ್ ಚುನಾವಣೆಯ ಸಮು
ದಾಯದ ವ್ಯಕ್ತಿಗೆ ಟೀಕೆಟ್ ನೀಡಬೇಕು.ಹಾಗಾದಲ್ಲಿ
ಇಡೀ ಸಮುದಾಯ ಪಕ್ಷದ ಪರ ನಿಂತು ಕೆಲಸ
ಮಾಡಲಿದೆ ಎಂದು ನರಸೀಯಪ್ಪ ತಿಳಿಸಿದರು.
ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ 5180 ಜನ
ಮತದಾರರಿದ್ದು,ಇದರಲ್ಲಿ 891 ಜನ ಪರಿ
ಶಿಷ್ಟ ಜಾತಿಯ ಎಡಗೈ ಸಮುದಾಯದಕ್ಕೆ
ಸೇರಿದವರಾಗಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ಗ್ರಾಮ
ಪಂಚಾಯತಿಗಳಲ್ಲಿಯೂ ಬಹುಮತ ಬಂದಿದ್ದು
ಸಮುದಾಯಕ್ಕೆ ಟಿಕೆಟ್ ನೀಡಿದರೆ ಹೆಚ್ಚಿನ ಅ
ನುಕೂಲವಾಗಲಿದೆ.ಸಮುದಾಯದ ಗ್ರಾಮ
ಪಂಚಾಯತಿ ಸದಸ್ಯರು ಮತ್ತು ಮಾಜಿ ಸದಸ್ಯ
ರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮು
ದಾಯದ ಟಿಕೆಟ್ ಕೇಳುತ್ತಿರುವುದು ಇದೇ ಮೊ
ದಲು, ಪಕ್ಷಕ್ಕಾಗಿ ಕೆಲಸ ಮಾಡಿರುವ ಬೆಂಬಲ
ನೀಡಿರುವ ಸಮುದಾಯಕ್ಕೆ ಟಿಕೆಟ್ ನೀಡುವ
ಮೂಲಕ ಗೆಲುವಿಗೆ ಪಕ್ಷ ಶ್ರಮಿಸಬೇಕು ಎಂದು
ಒತ್ತಾಯಿಸಿದರು.

 

 

 

ಉದ್ಯಮಿ ಡಿ.ಟಿ.ವೆಂಕಟೇಶ್ ಮಾತನಾಡಿ,75
ವರ್ಷಗಳ ಇತಿಹಾಸದಲ್ಲಿ ಮಾದಿಗ ಜನಾಂಗವನ್ನು
ಎಲ್ಲ ಪಕ್ಷಗಳು ಮತಕ್ಕೆ ಮಾತ್ರ ಬಳಸಿಕೊಂಡಿವೆ.
ಜಿಲ್ಲೆಯಲ್ಲಿ ಸುಮಾರು 4.50 ರಿಂದ 5 ಲಕ್ಷ ಜನ
ಸಂಖ್ಯೆಯನ್ನು ಮಾದಿಗ ಸಮುದಾಯ ಹೊಂ ದಿದೆ.
ಮುಂಬರುವ ಲೋಕಸಭೆ,ವಿಧಾನಸಭೆ ಚುನಾವಣೆ
ಯಲ್ಲಿ ಪಕ್ಷಕ್ಕೆ ಸಮುದಾಯದ ಮತವನ್ನು
ಕೇಂದ್ರೀಕರಿಸಬೇಕಾದರೆ ಮಾದಿಗ ಸಮುದಾಯಕ್ಕೆ
ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷದ ಬೆನ್ನಿಗೆ
ಸಮುದಾಯ ನಿಲ್ಲಲ್ಲಿದ್ದು,ಇದರಿಂದ ಕಾಂಗ್ರೆಸ್
ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ದೇಶದಲ್ಲಿಯೇ ಒಳ ಮೀಸಲಾತಿಯ ಅವಶ್ಯಕತೆ
ಇದೆ.ನ್ಯಾ.ಸದಾಶಿವ ಆಯೋಗದ ವರದಿ ಜಾರಿಗಿಂತ
ಮೊದಲು ವರದಿಯನ್ನು ಸಾರ್ವಜನಿಕ ಚರ್ಚೆಯ
ಜೊತೆಗೆ,ಅಧಿವೇಶನಗಳಲ್ಲಿ ಚರ್ಚಿಸಿದರೆ,ಅದರ
ಸಾಧಕ, ಭಾದಕಗಳೇನು ಎಂಬುದು ಗೊತ್ತಾಗಲಿದೆ.
ಹಾಗಾಗಿ ಮೊದಲು ವರದಿಯನ್ನು ಸಾರ್ವಜನಿಕ
ಚರ್ಚೆಗೆ ಬಿಡಿ, ಇದರಿಂದ ಊಹಾಪೋಹಗಳ
ಮೂಲಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಜಾತಿಗಳ
ನಡುವೆ ವೈಷಮ್ಯ ಹುಟ್ಟಿಕೊಳ್ಳುವುದು ತಪ್ಪುತ್ತದೆ.
ಇಲ್ಲದಿದ್ದ ಪಕ್ಷದಲ್ಲಿ ಒಂದೊಂದು ಸಮುದಾಯಕ್ಕೆ
ತೋಚಿದಂತೆ ಮಾತನಾಡಿ, ದ್ವೇಷ ಬೆಳೆಯಲು
ಕಾರಣವಾಗುತ್ತದೆ ಎಂದು ಡಿ.ಟಿ. ವೆಂಕಟೇಶ್
ತಿಳಿಸಿದರು.
ಡಿ.ಎಸ್.ಎಸ್.ಮುಖಂಡರಾದ ಶಿವಶಂಕರ್ ಮಾತ
ನಾಡಿ,ಸಾಮಾಜಿಕ ನ್ಯಾಯದಿಂದ ಕಾಂಗ್ರೆಸ್ ಪಕ್ಷಕ್ಕೆ
ಮತ ನೀಡುತ್ತಿರುವ ಮಾದಿಗ ಸಮುದಾಯಕ್ಕೆ ಟಿ
ಕೆಟ್ ನೀಡಬೇಕು, ಅಂಬೇಡ್ಕರ್ ಆಶಯದಂತೆ
ಸಮುದಾಯಕ್ಕೆ ನೀಡದಿದ್ದರೆ, ಏನು ಮಾಡುತ್ತವೆ
ಎನ್ನುವುದನ್ನು ತೋರಿಸುತ್ತೇವೆ ಎಂದರು.
ಜಸ್ಟೀಸ್ ಸದಾಶಿವ ಆಯೋಗದ ವರದಿ ಅವೈ
ಜ್ಞಾನಿಕ ಎಂದು ಹೇಳುವುದು ನ್ಯಾಯಾಂಗ
ನಿಂದನೆಯಾಗುತ್ತದೆ.ವರದಿ ಸಾರ್ವಜನಿಕವಾಗಿ
ಬಿಡುಗಡೆಯಾಗಿಲ್ಲ. ಹೀಗಿದ್ದಾಗ ಅದರಲ್ಲಿ ಏನಿದೆ
ಎಂದು ಹೇಳುವುದು ಎಷ್ಟು ಸಮಂಜಸ ಎಂದ
ಅವರು,ಮೊದಲು ಅಸೆಂಬ್ಲಿ ಮತ್ತು ಪಾರ್ಲಿಮೆಂಟ್
ನಲ್ಲಿ ಚರ್ಚೆಯಾಗಲಿ,ಯಾವುದೇ ಸಮುದಾಯ
25 ವರ್ಷ ಹೋರಾಡಿಲ್ಲ,ಬಿಜೆಪಿ ಮತ್ತು ಆರ್,
ಎಸ್,ಎಸ್ ಒಳಮೀಸಲಾತಿ ಮುಂದಿಟ್ಟು ಅಧಿ
ಕಾರಕ್ಕೆ ಬಂದ ನಂತರ,ನಮ್ಮ ನಡುವೆಯೇ ತಂದಿ
ಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆಂಚ ಮಾರಯ್ಯ
ಮಾತನಾಡಿ,ಎರಡು ಬಾರಿ ಜಿ.ಪಂ.ಸದಸ್ಯನಾಗಿ,
ಸ್ಥಳೀಯ ಸಂಸ್ಥೆ ಸಮಸ್ಯೆ ಅರಿತಿದ್ದೇನೆ.ನಿವೃತ್ತ
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶಿಕ್ಷಣರಂಗ ಸಮ
ಸ್ಯೆಯ ಬಗ್ಗೆ ಅರಿವಿದೆ.ಪರಿಷತ್ ಹಿರಿಯರ
ಮನೆಯಾಗಿದ್ದು,ನನಗೆ ಸೂಕ್ತವೆನಿಸುತ್ತದೆ. ಹಾಗಾಗಿ
ನಾನು ವಿಧಾನ ಪರಿಷತ್ತಿನ ಪ್ರಬಲ ಆಕಾಂಕ್ಷಿ
ಯಾಗಿದ್ದೇನೆ.ನಮ್ಮ ಬದಲು ಬೇರೆ ಜಿಲ್ಲೆಯವರಿಗೆ
ಟಿಕೇಟ್ ನೀಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ
ಎಂದು ಮಾಜಿ ಜಿ.ಪಂ.ಸದಸ್ಯ ಕೆಂಚಮಾರಯ್ಯ
ಸ್ಪಷ್ಟಪಡಿಸಿದರು.
ಮುಖಂಡರಾದ ಗೂಳಹರಿವೆ ನಾಗರಾಜು, ವಕೀ
ಲರಾದ ನರಸಿಂಹಮೂರ್ತಿ,ಜಯಮೂರ್ತಿ, ಹನು
ಮಂತರಾಯಪ್ಪ ಸೇರಿದಂತೆ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker