ಶಿರಾ: ಕಾರ್ಮಿಕರು ತಾವು ಕಷ್ಟಪಟ್ಟು ದುಡಿಯುವ ರೀತಿಯಲ್ಲಿ ತಮ್ಮ ಮಕ್ಕಳ ಬಗ್ಗೆ ಅಷ್ಟೇ ಆಸಕ್ತಿಯಿಂದ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಅವರುಗಳನ್ನು ಸಮಾಜದಲ್ಲಿ ಉನ್ನತ ಪ್ರಜೆಯನ್ನಾಗಿ ಮಾಡಿ ಮುಂದೆ ಅವರ ಭವಿಷ್ಯಗಳು ಉಜ್ವಲವಾಗಿರಲಿ ನಿಮ್ಮಗಳ ಕಷ್ಟ ನಿಮ್ಮ ಮಕ್ಕಳು ಅನುಭವಿಸುವುದು ಬೇಡ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಹೇಳಿದರು.
ಅವರು ನಗರದ ಸೇವಾ ಸದನದಲ್ಲಿ ತಾಲ್ಲೂಕಿನ ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಹಾಗೂ ನಿರಾಶ್ರಿತರಿಗೆ ಸರಕಾರದಿಂದ ನೀಡಿರುವ ಆಹಾರದ ಕಿಟ್‌ಗಳನ್ನು ನೀಡಿ ಮಾತನಾಡಿದರು. ಕಾರ್ಮಿಕರು ಎಲ್ಲ ರಂಗಗಳಲ್ಲಿ ಕೌಶಲ್ಯ, ಕ್ರಿಯಾತ್ಮಕ, ಕಲೆಗಳಲ್ಲಿ ಇಚ್ಛಾಶಕ್ತಿಯಿಂದ ಶ್ರಮಿಕರಾಗಿ ದುಡಿಯುತ್ತಿದ್ದಾರೆ. ತಾವುಗಳು ಕೆಲಸದಲ್ಲಿ ನಿಷ್ಟೆ ಪ್ರಾಮಾಣಿಕತೆಯಿಂದ ದುಡಿಯುತ್ತೀರ ನಿಮ್ಮ ಕಷ್ಟ ನಿಮ್ಮ ಮಕ್ಕಳಿಗೆ ಬರುವುದು ಬೇಡ ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮಕ್ಕಳ ಭವಿಷ್ಯ ನಿಮ್ಮ ನಿಮ್ಮಗಳ ಕೈಯಲ್ಲಿದೆ ಅವರನ್ನು ಒಳ್ಳೆಯ ಮಾರ್ಗದಲ್ಲಿ ನಡೆಯಲು ಪ್ರಚೋದಿಸಿ ಅವರಿಗೆ ಕಷ್ಟ-ಸುಖದ ಅರಿವನ್ನು ಮೂಡಿಸೋಣ ಸರಕಾರದಿಂದ ಬರುವ ಸೌಲಭ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಅಸಂಘಟಿತ ಕಟ್ಟಡ ಕಾರ್ಮಿಕರಿಗೆಂದು ಆಹಾರಧಾನ್ಯಗಳ ಕಿಟ್ ನೀಡಿದೆ. ಈಗಾಗಲೇ ರಾಜ್ಯದಲ್ಲಿ ಸುಮಾರು ಶೇ. 70 ಜನರಿಗೆ ಲಸಿಕೆ ನೀಡಿದೆ ನಿಮ್ಮ ಜೊತೆ ಸರಕಾರ ಯಾವಾಗಲೂ ಇರುತ್ತದೆ. ನಾನು ಸಹ ನಿಮ್ಮಗಳಿಗೆ ಧ್ವನಿಯಾಗುತ್ತೇನೆ. ಸರಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ನಿಮ್ಮ ಬದುಕನ್ನು ಸಾರ್ಥಕಗೊಳಿಸಿ ಎಂದರು.
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿಕ್ಕಣ್ಣ, ಉಗಣೇಕಟ್ಟೆ ಎಂ.ಶಿವಲಿಂಗಯ್ಯ, ಪ್ರೆಸಿಡೆನ್ಸಿ ಲಿಂಗಣ್ಣ, ಗೋಪಾಲಪ್ಪ, ಕಾಂತರಾಜು, ಉದ್ದಪ್ಪ ಸೇರಿದಂತೆ ಹಲವರು ಹಾಜರಿದ್ದರು.