ತುಮಕೂರು : ಡಾ. ಬಿ ಆರ್ ಅಂಬೇಡ್ಕರ್ ಅವರ ಆಶಯದೊಂದಿಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷ ದೇಶಾದ್ಯಂತ ತನ್ನ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಸೆಯಂತೆ ಪ್ರಬುದ್ಧ ಭಾರತ ನಿರ್ಮಾಣಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಸದಾ ಸಿದ್ಧರಿರುವುದಾಗಿ ಅರ್ ಪಿ ಐ ಪಕ್ಷದ ರಾಜ್ಯಾಧ್ಯಕ್ಷರಾದ ವೆಂಕಟಸ್ವಾಮಿ ಅವರು ತಿಳಿಸಿದರು. ತುಮಕೂರಿನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಸುವ ಸಲುವಾಗಿ ತುಮಕೂರಿನಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಯಾವುದೇ ಒಂದು ಸಮುದಾಯ ಜಾತಿಗೆ ಸೀಮಿತವಾಗಿಲ್ಲ ನಮ್ಮ ಪಕ್ಷ ಎಲ್ಲಾ ಸಮುದಾಯಗಳಿಗೆ ಆದ್ಯತೆ ನೀಡಿ ಎಲ್ಲರನ್ನು ಸಮಾನತೆಯಿಂದ ನಡೆಸಿಕೊಳ್ಳುವ ಆಶಯ ಪಕ್ಷದಲ್ಲಿದ್ದು ಈಗಾಗಲೇ ಎಲ್ಲಾ ಸಮುದಾಯದ ಮುಖಂಡರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಶೀಘ್ರದಲ್ಲೇ ತುಮಕೂರು ಜಿಲ್ಲೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಉದ್ಘಾಟನೆಯಾಗಲಿದೆ ಮುಂದಿನ ದಿನದಲ್ಲಿ ಎಲ್ಲಾ ಪಕ್ಷಗಳಿಗೂ ಸಮಬಲದ ಪೈಪೋಟಿ ನೀಡಲು ಪಕ್ಷ ಸದಾ ಸಿದ್ದ ವಿದೆ ಎಂದರು..
ಇನ್ನು ಪೂರ್ವಭಾವಿ ಸಭೆಯಲ್ಲಿ ಅರ್ ಪಿ ಐ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಪಿಳ್ಳ ರಾಜು ಬಸಪ್ಪ, ಮುಖಂಡರಾದ ಇಂಡ್ಲವಾಡಿ ಬಸವರಾಜು ,ಜಾಲ ಕಿಟ್ಟಿ, ಆರ ಪಿ ಐ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷರಾದ ಜಿ.ಎಲ್ ನಟರಾಜು, ಗೌರವಾಧ್ಯಕ್ಷರಾದ ರಾಮಯ್ಯ ,ಪ್ರಧಾನ ಕಾರ್ಯದರ್ಶಿ ಕೆಂಚರಾಯ ಕಲಾಕಾರ ಹುಲಿಕುಂಟೆ, ಶಿವಕುಮಾರ್ ,ಗೋಪಾಲ್ ,ಶಿವಣ್ಣ ,ಶಿವರಾಜು ಕೌತಮಾರನಹಳ್ಳಿ, ಮೊಹಮ್ಮದ್ ಸಿರಾಜುದ್ದೀನ್ ,ಮುಕ್ತಿಯರ್ ಅಹಮದ್ ಖಾನ್, ಮಂಜುಳಮ್ಮ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.