
ಕುಣಿಗಲ್ : ಹಸು ಕರುಗಳು ಕಾಲುಬಾಯಿ ರೋಗಕ್ಕೆ ತುತ್ತಾಗಿ ಸುಮಾರು ಐದಾರು ಹಸುಗಳು ಸಾವನ್ನಪ್ಪಿವೆ ಈ ಸಂಬಂಧ ವೈದ್ಯರನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ರೈತರು ಆರೋಪಿಸಿದ್ದಾರೆ . ತಾಲೂಕಿನ ಹುಲಿಯೂರುದರ‍್ಗ ಹೋಬಳಿ ನಿಡಸಾಲೆ ಗ್ರಾಮದಲ್ಲಿ ರೈತರ ಜೀವನಾಡಿಯಾದ ಹಾಲು ನೀಡುವ ಹಸು ಕರುಗಳಿಗೆ ಕಾಲುಬಾಯಿ ರೋಗ ಹೆಚ್ಚಾಗಿ ಸುಮಾರು ಐದಾರು ರೈತರ ಹಸುಗಳು ಸಾವನ್ನಪ್ಪಿವೆ ಇದರಿಂದ ರೈತರು ಕಂಗಾಲಾಗಿದ್ದಾರೆ.ಈ ಸಂಬಂಧ ನಿಡಸಾಲೆ ಪಶು ವೈದ್ಯರನ್ನು ವಿಚಾರಣೆ ಮಾಡಿದರೆ ಸಿಬ್ಬಂದಿ ಕೊರತೆ ಇದೆ ವ್ಯಾಕ್ಸಿನೇಷನ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಕೈಚೆಲ್ಲುತ್ತಾರೆ ಇದೇ ರೀತಿ ಇವರ ರ‍್ತನೆ ಮುಂದುವರೆದರೆ ಅಕ್ಕಪಕ್ಕದ ಗ್ರಾಮಗಳ ಹಸು ಕರುಗಳಿಗೆ ಕಾಲುಬಾಯಿ ರೋಗ ಹರಡಿ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಆದ್ದರಿಂದ ಪಶು ಇಲಾಖೆಯ ತಾಲ್ಲೂಕ್ ಸಹಾಯಕ ನರ‍್ದೇಶಕರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಹಸು ಕರುಗಳಿಗೆ ವ್ಯಾಕ್ಸಿನೇಷನ್ ಮಾಡಬೇಕೆಂದು ಸರ‍್ವಜನಿಕರು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಕಚೇರಿಯ ಮುಂಭಾಗ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.