ತುಮಕೂರುಸುದ್ದಿ
Trending

ಪಾರ್ಕುಗಳಲ್ಲಿ ಅನೈತಿಕ ಚಟುವಟಿಕೆಗಳ ಕಡಿವಾಣಕ್ಕೆ ಸಿಸಿಟಿವಿ ಕ್ಯಾಮರ ಅಳವಡಿಸಿ : ಗಿರಿಜಾ ಧನಿಯ ಕುಮಾರ್

ತುಮಕೂರು: ಹದಿನೈದನೇ ವಾರ್ಡಿನ ಎನ್.ಇ.ಪಿ.ಎಸ್.ಪೊಲೀಸ್ ಠಾಣೆ ಹಿಂಭಾಗದ ಪಾರ್ಕು,ಸರಕಾರಿ ಜೂನಿಯರ್ ಕಾಲೇಜಿನ ಆಲದಮರದ ಪಾರ್ಕು ಸೇರಿದಂತೆ ನಗರದಲ್ಲಿರುವ ಪಾರ್ಕುಗಳು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸುವಂತೆ ವಾರ್ಡಿನ ಸದಸ್ಯೆ ಶ್ರೀಮತಿ ಗಿರಿಜಾ ಧನಿಯ ಕುಮಾರ್ ಪಾಲಿಕೆಯ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ನಗರಪಾಲಿಕೆ ಆವರಣದಲ್ಲಿರುವ ಸಂವೃದ್ದಿ ಹಾಲ್‌ನಲ್ಲಿ 15ನೇ ವಾರ್ಡಿನ ಕುಂದುಕೊರತೆಗಳ ಕುರಿತು ಚರ್ಚಿಸಲು ಆಯುಕ್ತರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಂಬAಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದ ಹೃದಯಭಾಗದಲ್ಲಿರುವ ಪಾರ್ಕುಗಳಲ್ಲಿ ರಾತ್ರಿ ವೇಳೆ,ವಿದ್ಯುತ್ ಸಂಪರ್ಕ ಸ್ಥಗೀತಗೊಂಡ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದು,ಸಾರ್ವಜನಿಕರು ಪ್ರಶ್ನಿಸಿದರೆ ಧಮಕಿ ಹಾಕುವ ಪ್ರವೃತ್ತಿ ಬೆಳೆಸಿ ಕೊಂಡಿದ್ದಾರೆ.ಇದರ ಜೊತೆಗೆ ಪಾರ್ಕುಗಳ ನಿರ್ವಹಣೆ ಸಹ ಸರಿಯಾಗಿ ಆಗುತ್ತಿಲ್ಲ.ಜೂನಿಯರ್ ಕಾಲೇಜಿನ ಆಲದಮರದ ಪಾರ್ಕುನ್ನು ಯಾರು ನಿರ್ವಹಣೆ ಮಾಡಬೇಕು ಎಂಬ ಗೊಂದಲ ಕಾಡುತ್ತಿದೆ.ಮರದ ಎಲೆಗಳು ದಿನನಿತ್ಯ ಬೀಳುವುದರಿಂದ ಒಂದು ದಿನ ಕಸ ತೆಗೆಯದಿದ್ದರೂ ಗಲೀಜಾಗಿ ಕಾಣಲಿದೆ.ಹಾಗಾಗಿ ಸಂಬAದಪಟ್ಟ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದರು.
ಮೆಗಾ ಗ್ಯಾಸ್ ಸಂಸ್ಥೆಯವರು ಗಾಂಧಿನಗರದ ಕೆಲ ಮನೆಗಳಿಗೆ ಇಂದಿಗೂ ಸಂಪರ್ಕ ಕಲ್ಪಿಸಿಲ್ಲ.ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ.ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ವಾರ್ಡಿನಲ್ಲಿ ಸ್ವಚ್ಚತೆ ಹಾಗೂ ನೀರಿನ ಸಮರ್ಪಕ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.ವಾರ್ಡಿನಿಂದ ಕಸ ಸರಿಯಾಗಿ ಹೊರ ಹೋಗದ ಕಾರಣ,ಅಲ್ಲಲ್ಲಿ ಕಸದ ರಾಶಿ ಕಾಣುತ್ತಿದ್ದು,ಕಸವನ್ನು ಹೊರ ಸಾಗಿಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಶ್ರೀಮತಿ ಗಿರಿಜಾ ಧನಿಯಕುಮಾರ್ ಆಯುಕ್ತರಲ್ಲಿ ಮನವಿ ಮಾಡಿದರು.
ಪಾಲಿಕೆಯ ಸದಸ್ಯರ ಮನವಿಗೆ ಉತ್ತರಿಸಿದ ಆಯುಕ್ತರಾದ ಶ್ರೀಮತಿ ರೇಣುಕಾ ರವರು,ನಗರದಿಂದ ಕಸವನ್ನು ಹೊರಗೆ ಸಾಗಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.15 ನೇ ವಾರ್ಡಿಗೆ ಪತ್ಯೇಕವಾಗಿ ಒಂದು ಟ್ಯಾಕ್ಟರ್ ನೀಡಲಾಗಿದೆ.ಮನೆಗಳಿಂದ ಕಸ ತರಲು 4 ಆಟೋಗಳನ್ನು ನಿಯೋಜಿಸಲಾಗಿದೆ.ಅದರೆ ಒಣ ಮತ್ತು ಹಸಿ ಕಸ ಬೇರ್ಪಡಿಸದ ಹಿನ್ನೆಲೆಯಲ್ಲಿ ಕೊಂಚ ವಿಳಂಭವಾಗುತ್ತಿದೆ ಎಂದು ವಾರ್ಡಿನ ಹೆಲ್ತ್ ಇನ್ಸ್ಪೆಕ್ಟರ್,ದಫೇದಾರ್ ಮತ್ತು ಸೂಪರ್‌ವೈಸರ್ ಸಬೂಬು ಹೇಳುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ.ಇಂದೇ ಅವರಿಗೆ ಕಟ್ಟು ನಿಟ್ಟಿನ ಆದೇಶ ಮಾಡುತ್ತಿದ್ದು,ಅಂದಿನ ಕಸ, ಅಂದೇ ಪ್ರತ್ಯೇಕಗೊಂಡು, ಅಜ್ಜಗೊಂಡನಹಳ್ಳಿ ಕಸವಿಲೇವಾರಿ ಘಟಕಕ್ಕೆ ಹೋಗಬೇಕು.ಇಲ್ಲದಿದ್ದಲ್ಲಿ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.                                                                                                                                       ಪಾರ್ಕುಗಳಿಗೆ ಸಿಸಿ ಟಿವಿ ಕ್ಯಾಮರ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ಆಲದಮರದ ಪಾರ್ಕುನ್ನು ಮುಂದಿನ ಐದು ವರ್ಷಗಳ ಕಾಲ ಗುತ್ತಿಗೆದಾರನೇ ನಿರ್ವಹಣೆ ಮಾಡಬೇಕಾಗಿದೆ.ಸ್ಮಾರ್ಟ್ಸಿಟಿಯ ಪ್ರತಿಯೊಂದು ಯೋಜನೆಗೂ ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆದಾರನಿಗೆ ವಹಿಸಲಾಗಿದೆ.ಕೆಲವು ಸರಕಾರಿ ಕಚೇರಿಗಳು,ಶಾಲಾ ಕಾಲೇಜುಗಳಿಂದ ಆವರಣದಲ್ಲಿರುವ ಗಿಡಗೆಂಟೆಗಳನ್ನು ತೆಗೆದುಕೊಂಡುವAತೆ ಪಾಲಿಕೆಗೆ ಒತ್ತಡ ತರುತ್ತಿದ್ದಾರೆ.ಇದು ಪಾಲಿಕೆಯ ಕೆಲಸವಲ್ಲ. ಶಾಲಾ,ಕಾಲೇಜುಗಳು,ಸರಕಾರಿ ಕಚೇರಿಗಳ ಸ್ವಚ್ಚತೆಯನ್ನು ಇಲಾಖೆಯವರೆ ಮಾಡಿಸಿಕೊಳ್ಳಬೇಕು. ಇದು ಪಾಲಿಕೆ ಜವಾಬ್ದಾರಿ ಯಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಗೌರಿ, ಗಣೇಶ ಹಬ್ಬದ ಆಚರಣೆ,ಗಣೇಶ ಪ್ರತಿಷ್ಠಾಪನೆ ಕುರಿತಂತೆ ಇನ್ನೂ ಪಾಲಿಕೆಗೆ ಸರಕಾರದ ಮಾರ್ಗಸೂಚಿ ಬಂದಿಲ್ಲ. ಅದು ಬಂದ ತಕ್ಷಣವೇ ಪ್ರಚುರ ಪಡಿಸುವ ಕೆಲಸ ಮಾಡಲಾಗುವುದು.ಮನೆಗಳಲ್ಲಿ ಕೂರಿಸುವ ಗಣೇಶನ ವಿಸರ್ಜನೆಗೆ ಈ ಹಿಂದಿನ ವರ್ಷಗಳಂತೆ ಹಬ್ಬ ಮತ್ತು ಮುಂದಿನ ಎರಡು ದಿನಗಳ ಕಾಲ,ಪ್ರತಿವಾರ್ಡಿನ ಸರ್ಕಲ್‌ಗಳಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗುವುದು,ಅದರಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸ ಬಹುದಾಗಿದೆ.ಹಬ್ಬಕ್ಕೆ ನೀರಿನ ತೊಂದರೆಯಿಲ್ಲದAತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಆಯುಕ್ತರು ನೀಡಿದರು.
ಬೀದಿ ದೀಪಗಳ ನಿರ್ವಹಣೆ ಕುರಿತಂತೆ ಈಗಾಗಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ.ಸಮಸ್ಯೆ ಗಮನಕ್ಕೆ ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಪರಿಹರಿಸುವಂತೆ ಸೂಚನೆ ನೀಡಲಾಗಿದೆ.ಗಾಂಧಿನಗರ ಭಾಗದಲ್ಲಿ ಸುಮಾರು 30 ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವುದು ಬಾಕಿ ಇದೆ. ಸೋಮವಾರದೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡಿ ದ್ದಾರೆ.ಕೆಲವರು ಪೈಪ್ ಲೈನ್ ಮೂಲಕ ಗ್ಯಾಸ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ಸಮಸ್ಯೆಯಾಗಿದೆ.ಸಾರ್ವಜನಿಕರು ಯಾವುದೇ ಅಂಜಿಕೆಯಿಲ್ಲದೆ ತಮ್ಮ ಮನೆಗಳಿಗೆ ಗ್ಯಾಸ್ ಸಂಪರ್ಕ ಪಡೆಯುವಂತೆ ಆಯುಕ್ತರು ಮನವಿ ಮಾಡಿದರು.
ಈ ವೇಳೆ ವಾರ್ಡಿನ ಇಂಜಿನಿಯರ್, ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರ ಮುಖ್ಯಸ್ಥರು, ನೀರುಗಂಟಿ ಸೇರಿದಂತೆ ಹಲವು ಅಧಿಕಾರಿ, ನೌಕರರು ಉಪಸ್ಥಿತರಿದ್ದರು.

 

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker