ಆರೋಗ್ಯಜಿಲ್ಲೆತುಮಕೂರುರಾಜ್ಯಸುದ್ದಿ
Trending

ಫಲಾಪೇಕ್ಷೆ ಇಲ್ಲದೆ ಸಮಾಜದ ಋಣ ತೀರಿಸಿ : ಉಪರಾಷ್ಠಪತಿ ಡಾ.ವೆಂಕಯ್ಯನಾಯ್ಡು

ಪಾವಗಡದಲ್ಲಿ ಶ್ರೀಶಾರದ ದೇವಿ ಕಣ್ಣಿನ ಆಸ್ಪತ್ರೆಯ ನೂತನ ಸಂಕೀರ್ಣ ಲೋಕಾರ್ಪಣೆ

ಪಾವಗಡ : ಒಬ್ಬರ ಸಹಾಯವಿಲ್ಲದೆ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯಲು ಸಾದ್ಯವಿಲ್ಲ, ಪ್ರತಿಯೊಬ್ಬರು ಸಮಾಜದ ಹಿತಕ್ಕಾಗಿ ಹೆಚ್ಚು ಒತ್ತು ನೀಡಬೇಕು ಎಂದು ಭಾರತದ ಉಪರಾಷ್ಠಪತಿಗಳಾದ ಡಾ.ವೆಂಕಯ್ಯನಾಯ್ಡುರವರು ತಿಳಿಸಿದರು.
ಪಾವಗಡ ಪಟ್ಟಣದ ಶ್ರೀರಾಮಕೃಷ್ಣ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿನ ನೂತನ ಕಣ್ಣಿನ ಆಸ್ಪತ್ರೆಯ ಸಂಕೀರ್ಣವನ್ನ ಆನ್‌ಲೈನ್ ಮೂಲಕ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ಸೇವೆ ಮಾಡುವುದು ಮನುಷ್ಯನ ಗುಣ, ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಋಣವನ್ನ ತೀರಿಸಬೇಕೆಂದಾ ಅವರು ಪ್ರಾಚೀನ ಭಾರತದ ಗ್ರಂಥಗಳಲ್ಲಿ ದಾನಧರ್ಮದ ಬಗ್ಗೆ ಲಿಖಿತವಾಗಿ ಆದ್ಯಾತ್ಮೀಕ ಮತ್ತು ಧಾರ್ಮಿಕತೆ ಎರಡು ಒಂದೇ ಆದ್ಯಾತ್ಮಿಕತೆ ಅಂದರೆ ಪೂಜೆ ಪುರಸ್ಕಾರ ಒಂದೇ ಅಲ್ಲ, ಮನೋಬಲವನ್ನ ಹೆಚ್ಚಿಸುವ ಒಂದು ದಾರಿ, ಸರಕಾರ ಮತ್ತು ಸಂಘ ಸಂಸ್ಥೆಗಳ ಯಾವುದೇ ವ್ಯಕ್ತಿಯಾಗಲಿ ಸೇವೆ ಮಾಡಬಹುದು ಸ್ವಾಮಿ ವಿವೇಕನಂದರು ಭೋದಿಸಿದಂತೆ ಮಾನವ ಕಲ್ಯಾಣಕ್ಕೆ ಸೇವೆವೊಂದೆ ದಾರಿ ಪಾವಗಡದಲ್ಲಿ ಕುಷ್ಠರೋಗ ಮತ್ತು ಕ್ಷಯರೋಗ, ಕಣ್ಣಿನ ಚಿಕಿತ್ಸೆಗಳನ್ನ ನೀಡಿ ಸಾವಿರಾರು ಮಂದಿಗೆ ಬೆಳಕಾಗಿರುವ ಜಪಾನಂದಾ ಸ್ವಾಮಿಜಿಯ ಕಾರ್ಯ ಅವಿಸ್ಮರಣೀಯ, ಮನುಷ್ಯನ ಮುಖ್ಯವಾದ ಅಂಗ ಕಣ್ಣು, ಕಣ್ಣುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಉಪರಾಷ್ಠಪತಿ ಗಳು 30 ನಿಮಿಷಗಳ ಕಾಲ ತೆಲುಗು, ಹಿಂದಿ,ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದರು.

ತುಮಕೂರಿನ ಸಿದ್ದಗಂಗಾ ಮಠದಾ ಪೀಠಾದ್ಯಕ್ಷರಾದ ಶ್ರೀಸಿದ್ದಗಂಗಾ ಸ್ವಾಮಿಜಿ ಮಾತನಾಡಿ ಗಡಿನಾಡು ಪಾವಗಡ ಒಂದು ಶಾಶ್ವತ ಬರಪೀಡಿತ ಪ್ರದೇಶವಾಗಿತ್ತು, ಆದರೆ ಪಾವಗಡವನ್ನ ಪಾವನ ಮಾಡಿದ್ದು ಶ್ರೀರಾಮಕೃಷ್ಣ ಸೇವಾಶ್ರಮದ ಸೇವಾಕಾರ್ಯಗಳಿಂದ ಜಪಾನಂದಾ ಸ್ವಾಮಿಜಿಯವರು, ಸುಮಾರು 30 ವರ್ಷಗಳ ಹಿಂದೆ ತಾಲೂಕಿಗೆ ಏನಾದರು ಸಹಾಯ ಮಾಡಲು ಬಂದವರು ಇಲ್ಲಿನ ಪರಿಸರಕ್ಕೆ ಆಂಟಿಕೊಂಡು ಸೇವಾಕಾರ್ಯವನ್ನ ಆರಂಭಿಸಿ ಇತಿಹಾಸ ನಿರ್ಮಿಸಿ ತಾಲೂಕಿನ ಜನತೆಯ ಹೃದಯ ಗೆದ್ದವರು, ಕುಷ್ಠ ರೋಗಿಗಳ ಸೇವೆ ಆರಂಭಿಸಿ ಔಷದಿಗಿಂತ ಮೋದಲು ಮಾತೃ ಹೃದಯ ಸೇವೆ ನೀಡಿದ್ದಾರೆ, ಕುಷ್ಠರೋಗಿಗಳನ್ನ ಕ್ಷಯರೋಗಿಗಳನ್ನ ಯಾರು ಮುಟ್ಟಲ್ಲ ಆದರೆ ಆಂತಹವರ ಪಾಲಿನ ದೇವರಾಗಿ ಕಾರ್ಯ ಮಾಡುತ್ತಿರುವುದು ತಾಲೂಕಿನ ಜನತೆಯ ಪಾಲಿಗೆ ಸುದೈವ ಎಂದರು.ಇನ್ಪೋಸ್ಸಿಸ್ ಮುಖ್ಯಸ್ಥೆಯಾದ ಸುಧಾಮೂರ್ತಿಯವರು ಮಾತನಾಡಿ ಗಡಿನಾಡು ಪಾವಗಡ ತಾಲೂಕಿನಲ್ಲಿ ಇನ್ಪೋಸ್ಸಿಸ್ ಸಹಯೋಗದೊಂದಿಗೆ ಶ್ರೀಶಾರದ ದೇವಿಯ ಕಣ್ಣಿನ ಆಸ್ಪತ್ರೆಯ ನೂತನ ಸಂಕೀರ್ಣವನ್ನ ಘನತೆವೆತ್ತ ಉಪರಾಷ್ಠಪತಿಗಳಾದ ವೆಂಕಯ್ಯನಾಯ್ಡುರವರು ಲೋಕಾರ್ಪಣೆ ಮಾಡಿದ್ದು ನಮ್ಮೆಲ್ಲರ ಸುದೈವ ಎಂದ ಅವರು ಗಡಿನಾಡಿನಲ್ಲಿ ಹಲವು ವರ್ಷಗಳಿಂದ ಶ್ರೀರಾಮಕೃಷ್ಣ ಸೇವಾಕಾರ್ಯಗಳಿಗೆ ಇನ್ಪೋಸ್ಸಿಸ್ ಬೆನ್ನೆಲುಬಾಗಿ ನಿಂತು ಆರ್ಥಿಕ ನೆರವನ್ನು ನೀಡಿ ಗಡಿಪ್ರದೇಶದ ಜಾನುವಾರುಗಳಿಗೆ, ಪಕ್ಷಿಗಳಿಗೆ, ಕುಷ್ಠರೋಗ, ಕ್ಷಯರೋಗ ಸೇರಿದಂತೆ ಆನೇಕ ಆರೋಗ್ಯ ಸೇವೆಗಳನ್ನ ನಿರಂತರವಾಗಿ ಮಾಡುತ್ತಿದ್ದು ಮುಂದೆಯೂ ಕೂಡ ಬರದನಾಡು ಪಾವಗಡದ ಜನತೆಯ ಕಷ್ಠಗಳಿಗೆ ಸ್ಪಂದಿಸುವ ಕೆಲಸ ಇನ್ಪೋಸ್ಸಿಸ್ ಮಾಡಲಿದೆ ಎಂದರು. ತೇಜಸ್ವಿನಿ ಅನಂತಕುಮಾರ್‌ ರವರು ಕಾರ್ಯಕ್ರಮದ ಸ್ವಾಗತ ಬಯಸಿ ಶ್ರೀರಾಮಕೃಷ್ಣ ಗ್ರಾಮಾಂತರ ಆರೋಗ್ಯ ಕೇಂದ್ರ ಹಾಗೂ ಶಾರದ ದೇವಿ ಕಣ್ಣಿನ ಆಸ್ಪತ್ರೆಯ ಸೇವಾ ಕಾರ್ಯಕ್ರಮಗಳನ್ನ ಉಪರಾಷ್ಠಪತಿಗಳಿಗೆ ವಿವರಿಸಿದರು. ಅಧ್ಯಕ್ಷತೆವಹಿಸಿದ್ದ ಜಪಾನಂದಾ ಸ್ವಾಮಿಜೀ ಯವರು ಉಪರಾಷ್ಠಪತಿ ಗಳಿಗೆ ಗೌರವ  ನೀಡಿ ಮಾತನಾಡಿ ಕಳೆದಾ 25 ವರ್ಷಗಳಿಂದ ಶ್ರೀರಾಮಕೃಷ್ಣ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದಂತಹ ಸೇವಾಕಾರ್ಯಕ್ರಮಗಳನ್ನ ಸಂಪೂರ್ಣವಾಗಿ  ಉಪರಾಷ್ಠಪತಿಗಳಿಗೆ ವಿವರಿಸಿ ವಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಚಕ್ರವರ್ತಿ ಸೂಲಿಬೆಲೆ, ಹಿರಿಯ ವಕೀಲರಾದ ವಿವೇಕ್‌ರೆಡ್ಡಿ, ಡಾ.ಜಿ.ವೆಂಕಟರಾಮಯ್ಯ, ಇಒ ಶಿವರಾಜಯ್ಯ, ಪುರಸಭಾ ಮುಖ್ಯಾಧಿಕಾರಿ ಆರ್ಚನಾ, ಪುಸಭಾ ಸದಸ್ಯರಾದ ಸುದೇಶ್ ಬಾಬು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker