ಗುಬ್ಬಿಜಿಲ್ಲೆತುಮಕೂರುಬ್ರೇಕಿಂಗ್ ಸುದ್ದಿ
ಕ್ಷಣರ್ಧದಲ್ಲೇ ಧಗ ಧಗನೇ ಹೊತ್ತಿ ಉರಿದು ಭಸ್ಮವಾದ ಹೋಂಡಾ ಐಕಾನ್ ಕಾರು
ಗುಬ್ಬಿ: ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಕಾರೊಂದು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಗುರುವಾರ ಸಂಜೆ ತಾಲ್ಲೂಕಿನ ಹೊಸಪಾಳ್ಯ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ನಡೆದಿದೆ.
ಗುಬ್ಬಿಯಿಂದ ತುಮಕೂರು ಕಡೆಗೆ ಹೊರಟಿದ್ದ ಹೋಂಡಾ ಐಕಾನ್ ಕಂಪೆನಿಯ ಕಾರು ಚಲಿಸುತ್ತಲೇ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲಿದ್ದ ಸ್ಥಳೀಯರು ಬೆಂಕಿ ನಂದಿಸುವ ಕೆಲಸ ಮಾಡಿದರು.
ವಿಷಯ ತಿಳಿದ ಅಗ್ನಿಶಾಮಕ ದಳ ಬಂದು ಬೆಂಕಿ ಶಮನಗೊಳಿಸಿದರು. ಆದರೂ ಕಾರು ಬಹುತೇಕ ಭಸ್ಮವಾಗಿದೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.