ತುಮಕೂರು : ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಊರಿಗೊಂದು ಪುಸ್ತಕ ಎಂಬ ಇನ್ಟೆçÃನ್‌ಷಿಪ್ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ. ಮಹೇಶ್ ಕುಮಾರ್ ಡಿ ಹೆಚ್ ರವರು ವಿದ್ಯಾರ್ಥಿಗಳನ್ನು ಕುರಿತು ಇತಿಹಾಸವೆಂದರೆ ಕೇವಲ ಯುದ್ಧಗಳ ದಾಖಲೆಯಲ್ಲ ನಮ್ಮ ಸಂಸ್ಕೃತಿಯ ದರ್ಪಣವಿದ್ದಂತೆ, ಪ್ರತಿಗ್ರಾಮಗಳ ಇತಿಹಾಸವನ್ನು ರಚಿಸುವಲ್ಲಿ ಆದಿಮಾನವನ ನೆಲೆಯಿಂದ ಮೊದಲ್ಗೊಂಡು ಇಲ್ಲಿನ ಕಲೆ, ಸಂಸ್ಕೃತಿ, ಆಚರಣೆ, ಕೋಟೆ ಕೊತ್ತಲ, ಶಾಸನ, ಸಾಂಸ್ಕೃತಿಕ ವೀರರ ಐತಿಹ್ಯಗಳ ಹಾಗು ಇಂದಿನ ನಾಗರೀಕ ಮಾನವ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಎಲ್ಲಾ ಆಂಶಗಳನ್ನು ಇತಿಹಾಸವಾಗಿ ನೋಡಬೇಕಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತಾ ಪಿ ರವರು ಮಾತನಾಡಿ ನಮ್ಮ ಗ್ರಾಮಗಳು ಇತಿಹಾಸ ಊರಿಗೊಂದು ಪುಸ್ತಕವಾಗದೆ ಊರಿಗೊಂದು ಗ್ರಂಥವಾಗುವಷ್ಟು ವಿಚಾರಗಳು ಅಡಕವಾಗಿವೆ ಎಂದು ತಿಳಿಸಿದರು. ಊರಿಗೊಂದು ಪುಸ್ತಕ ಕಾರ್ಯಗಾರದ ನೊಡಲ್ ಅಧಿಕಾರಿಗಳು ಹಾಗೂ ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರೊ. ವಿನಯ್‌ಕುಮಾರ್ ಎಂ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಕುರಿತು ಪ್ರಾಸ್ತಾವಿಕ ನುಡಿಯನ್ನಾಡಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು. ರೇಷ್ಮೇಕೃಷಿ ವಿಭಾಗದ ಮುಖ್ಯಸ್ಥರಾದ ಪ್ರೊ. ಹನುಮಂತರಾಯಪ್ಪ ಜಿ, ಸಾಂಸ್ಕೃತಿಕ ವೇಧಿಕೆ ಸಂಚಾಲಕರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ್ ಮಣ್ಣೆ, ಐಕ್ಯೂಎಸಿ ವಿಭಾಗದ ಸಂಚಾಲಕರಾದ ಪ್ರೊ. ಸಯ್ಯದ್ ಬಾಬು ಹೆಚ್ ಬಿ, ಎನ್‌ಸಿಸಿ ಹಾಗೂ ರೋರ‍್ಸ್ ಅಧಿಕಾರಿಗಳಾದ ಪ್ರೊ. ಶ್ರೀನಿವಾಸ್‌ಮೂರ್ತಿಎಲ್ ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶಮಂತ ಎಚ್ ಹಾಗೂ ಬೋಧಕ ಬೋಧಕೇತರವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.