ಜಿಲ್ಲೆತುಮಕೂರುರಾಜ್ಯಸುದ್ದಿ

ರಿಯಲ್ ಎಸ್ಟೇಟ್ ಮಾಫಿಯಾದ ಕರಿನೆರಳು ಕುತಂತ್ರಕ್ಕೆ ಬಲಿಯಾಗುವವರೇ ತುಮಕೂರು ಜಿಲ್ಲಾಧಿಕಾರಿ..??

ತುಮಕೂರು : ಜಿಲ್ಲಾಧಿಕಾರಿಯಾಗಿ ಕರ್ತವ್ಯ ವಹಿಸಿಕೊಂಡ ಕೇವಲ 5 ತಿಂಗಳ ಅವಧಿಯಲ್ಲಿ ಜಿಲ್ಲೆಯ ಜನತೆಯ ಜನಮನ್ನಣೆ ಗಳಿಸಿದ್ದ ನಿಷ್ಠಾವಂತ ಅಧಿಕಾರಿಯ ಪ್ರಾಮಾಣಿಕತೆ ಮತ್ತು ನಿಷ್ಠೆಯ ಪ್ರತಿಫಲಕ್ಕೆ ಕುತಂತ್ರದ ಉಡುಗೊರೆಯಾಗಿ ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಗೆ ಎತ್ತಂಗಡಿಯ ಕಂಟಕ ಎದುರಾಗಿದೆ.
ಜಿಲ್ಲೆಯಲ್ಲಿ ನಿತ್ಯ ಸಾರ್ವಜನಿಕರ ಕಷ್ಟಗಳಿಗೆ ಮಿಡಿಯುತ್ತಿದ್ದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನಿರಂತರ ಪರಿಶ್ರಮದ ನಂತರ ಜಿಲ್ಲೆಯಲ್ಲಿ ಬೇರೂರಿರುವ ರಿಯಲ್ ಎಸ್ಟೇಟ್ ಮಾಫಿಯಾಗೆ ಕಡಿವಾಣ ಹಾಕಲು ರೇರಾ (RERA) ಆಕ್ಟ್ ಜಾರಿಗೆ ತರಲು ತೀರ್ಮಾನಿಸಿದ್ದೆ ಇವರ ಕೆಲಸಕ್ಕೆ ಮುಳುವಾಗಿದ್ದು ಎನ್ನಲಾಗುತ್ತಿದ್ದು ಜಿಲ್ಲೆಯಲ್ಲಿ ಬಲಾಢ್ಯರ ಪ್ರಭಾವಕ್ಕೆ ಒಳಗಾಗಿ ನಿಷ್ಠಾವಂತ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಉಳಿಗಾಲವಿಲ್ಲ ಎಂಬುದು ಮತ್ತೊಮ್ಮೆ ರುಜುವಾತಾಗಲಿದೆ.
ಸಾರ್ವಜನಿಕರ ನೆರವಿಗೆ ಧಾವಿಸಿ ಜನಪರ ಕಾಳಜಿ ಮೆರೆದ ಇವರು ಸತತ 4 ತಿಂಗಳ ಅವಧಿಯಲ್ಲಿ ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಆರೋಗ್ಯ ಇಲಾಖೆ,ಹಾಸ್ಟೆಲ್ ಸೇರಿದಂತೆ ಎಲ್ಲಾ ಇಲಾಖೆಗಳ ಕಾರ್ಯ ವೈಖರಿಯ ಬಗ್ಗೆ ತಿಳಿಯಲು ದಿಡೀರ್ ಭೇಟಿ ನೀಡಿ ಅಸಡ್ಡೆ ತೋರುವ ಅಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳಲು ಮುಂದಾದರು. ಜೊತೆಗೆ ಜಿಲ್ಲಾಧಿಕಾರಿಗಳ ಅನುದಾನ ಬಳಸಿ ಜಿಲ್ಲೆಯ ಎಲ್ಲಾ ರೆಕಾರ್ಡ್ ರೂಂ ಗಳನ್ನು ಡಿಜಿಟಲೀಕರಣ ಗೊಳಿಸಿ ಯಶಸ್ವಿ ಹೆಜ್ಜೆ ಇಟ್ಟ ಜಿಲ್ಲಾಧಿಕಾರಿಗಳ ಕಾರ್ಯ ಶ್ಲಾಘನೀಯ.
ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಿ ವಿಳಂಬವಾಗಿದ್ದ ಈ ಕಚೇರಿ ಅನುಷ್ಠಾನ ಮಾಡುವ ಮೂಲಕ ನೌಕರರಿಗೆ ಇಲಾಖೆ ಕೆಲಸಗಳನ್ನು ನಿರ್ವಹಿಸುವಲ್ಲಿ ಚುರುಕು ಮುಟ್ಟಿಸುವ ಕಾರ್ಯವನ್ನು ಮಾಡುತ್ತಾ ಜಿಲ್ಲೆಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ಮುತುವರ್ಜಿ ವಹಿಸಿದ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಗೆ ಪಾತ್ರರಾದರು.
ಹಾಸ್ಟೇಲ್ ಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಮತ್ತು ವಿದ್ಯಾರ್ಥಿಗಳ ಊಟೋಪಚಾರ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಗಮನ ಸೆಳೆದು ವ್ಯವಸ್ಥಿತ ಅನುಕೂಲ ಕಲ್ಪಿಸುವ ಕೆಲಸ ಮಾಡಿದ ಇವರು ಜಿಲ್ಲೆಯಾದ್ಯಂತ ಆಶ್ರಯ ಯೋಜನೆಯ 712 ಪ್ರಕರಣಗಳಲ್ಲಿ 1448 ಎಕರೆ, ಉದ್ಯಾನವನ 131 ಪ್ರಕರಣಗಳಲ್ಲಿ 266 ಎಕರೆ, ಆಟದ ಮೈದಾನ 106 ಪ್ರಕರಣಗಳಲ್ಲಿ 242 ಎಕರೆ ಕಾಯ್ದಿರಿಸಿ ಮೀಸಲಿಟ್ಟು ಸರ್ಕಾರಿ ಭೂಮಿ ಉಳಿಸಿದ ಹೆಗ್ಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಸಲ್ಲಬೇಕಿದೆ.
ತುಟಿಪಿಟುಕ್ ಎನ್ನದ ಸಾರ್ವಜನಿಕರು:– ನಿತ್ಯ ನೂರಾರು ಸಮಸ್ಯೆಯನ್ನು ಹೊತ್ತು ತರುವ ಸಾರ್ವಜನಿಕರು ನಿತ್ಯವೂ ಅಲೆದಾಡಿ ತಮ್ಮ ಅಹವಾಲುಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಮಾತನಾಡುವ ಜನತೆ ಇಂತಹ ನಿಷ್ಠಾವಂತ ಅಧಿಕಾರಿಗಳನ್ನು ಒಮ್ಮೆಯಾದರೂ ಉಳಿಸಿಕೊಳ್ಳಲು ಮುಂದೆ ಬಾರದೇ ಜಾಣ ಮೌನ ವಹಿಸುತ್ತಾರೆ. ಕೆಲಸ ಮಾತ್ರ ಆಗಬೇಕು ಆದರೆ ಒಳ್ಳೆಯ ಅಧಿಕಾರಿಗಳು ಮಾತ್ರ ಬೇಡ ಎಂಬಂತೆ ಸಾರ್ವಜನಿಕ ಮಹಾಶಯರು ನಡೆದುಕೊಳ್ಳುತ್ತಿರುವ ಪರಿ ಶೋಚನೀಯ ಸಂಗತಿಯಾಗಿದೆ.
ಜಿಲ್ಲಾಧಿಕಾರಿಗಳು ಹಾಸ್ಟೆಲ್ ನಿಲಯದ ವಿದ್ಯಾರ್ಥಿಗಳ ಜೊತೆ ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡಿದ್ದಾರೆ ಎಂಬ ವಿಷಯವನ್ನು ದೊಡ್ಡದಾಗಿ ಬಿಂಬಿಸಿದ ಹಿಂದಿನ ಮರ್ಮ ಏನು.? ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಪ್ರಕರಣದ ಹಿಂದೆ ಇಬ್ಬರು ಪ್ರಮುಖ ಐ.ಎ.ಎಸ್.ಅಧಿಕಾರಿಗಳ ಹೆಸರು ಸೇರಿದಂತೆ ಜಿಲ್ಲಾಧಿಕಾರಿಗಳ ಕಛೇರಿಯ ಇಬ್ಬರು ನೌಕರರ ಹೆಸರು ಕೇಳಿಬರುತ್ತಿದ್ದು ಸಾರ್ವಜನಿಕ ವಲಯದಲ್ಲಿ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿರುವ ಅಂಶ ಇಲ್ಲಿ ಮರೆಯುವಂತಿಲ್ಲ.
ವರದಿ:- ದೇವರಾಜು.ಎಂ.ಎಸ್.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker