ಕುಣಿಗಲ್ಕ್ರೈಂ ನ್ಯೂಸ್ಜಿಲ್ಲೆತುಮಕೂರು
ಜೂಜಾಟ : ಒಂಬತ್ತು ಜನರ ಬಂಧನ
ಕುಣಿಗಲ್ : ತಾಲೂಕಿನ ಹುತ್ರಿದುರ್ಗ ಹೋಬಳಿ ಇಪ್ಪಾಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದ 9 ಮಂದಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯನ್ನು ಆದರಿಸಿ ಸಿಪಿಐ ನವೀನ ಗೌಡರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿ ಇಸ್ಪೀಟ್ ಆಡಲು ಪಣಕಿಟ್ಟಿದ್ದ ಸುಮಾರು 62,150 ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯ ಸಾರ್ವಜನಿಕರು ಹೇಳುವ ಪ್ರಕಾರ ಕೆಲವರು ಇಸ್ಪೀಟ್ ಆಡಿಸುವ ದಂಧೆಯನ್ನು ಮಾಡಿಕೊಂಡು ಹಣ ಮಾಡುತ್ತಿದ್ದಾರೆ ಇದರಿಂದ ಯುವಕರನ್ನ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಸಂಸಾರಗಳು ಹಾಳಾಗುತ್ತಿವೆ ಆದ್ದರಿಂದ ಪೊಲೀಸ್ ಅಧಿಕಾರಿಗಳು ಅಂಥವರನ್ನು ಮೊದಲು ಹಿಡಿದು ಬಂಧಿಸಿ ತಕ್ಕ ಶಾಸ್ತಿ ಮಾಡಬೇಕೆಂದು ಪೊಲೀಸ್ ಅಧಿಕಾರಿಗಳಲ್ಲಿ ಸಾರ್ವಜನಿಕರು ಮನವಿ ಮಾಡಿದ್ದಾರೆ