ತುಮಕೂರು : ವಿಶ್ವಸಂಸ್ಥೆಯ ಮಾರ್ಗಸೂಚಿಯಂತೆ ಅ.1ರಂದು ವಿಶ್ವ ಸ್ತನ ರೋಗ ದಿನ ಆರಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅ.31 ರವರೆಗೆ ಉಚಿತ ಸ್ತನ ರೋಗ ಚಿಕಿತ್ಸೆ ಹಾಗೂ ಜಾಗೃತಿ ಮಾಸಾಚಾರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯ ಉಪ ಪ್ರಾಂಶುಪಾಲರಾದ ಡಾ.ಜಿ.ಎನ್.ಪ್ರಭಾಕರ್ ಅವರು ತಿಳಿಸಿದರು.
ಅ.18 ರಂದು ತುಮಕೂರಿನಲ್ಲಿ ಪಿಂಕ್ ಡೇ :-
ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸ್ತನ ರೋಗ ಕ್ಯಾನ್ಸರ್ ಜಾಗೃತಿ ಮಾಸಾಚಾರಣೆ, ಮತ್ತು ಉಚಿತ ಚಿಕಿತ್ಸೆ ಹಾಗೂ ಅರಿವು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ಅವರು, ಇತ್ತೀಚೆಗೆ ಸ್ತನ ರೋಗಿಗಳ ಸಂಖ್ಯೆ ಹೆಚ್ಚಾಳವಾಗುತ್ತಿದ್ದು, ಜನರಿಗೆ ಅರಿವು ಮೂಡಿಸಲು ಶ್ರೀ ಸಿದ್ದಾರ್ಥ ಆಸ್ಪತ್ರೆ ವತಿಯಿಂದ ಹಲವು ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತಿದೆ. ನಾಗರಿಕರಿಗೆ ಜಾಗೃತಿ ಮೂಡಿಸಲು ಅ. 18 ರಂದು ತುಮಕೂರಿನಲ್ಲಿ ಪಿಂಕ್ ಡೇ ಅರಿವು ಜಾಥಾ ಹಮ್ಮಿಕೊಂಡಿದ್ದು, ನಗರದ ಎಂ.ಜಿ.ರಸ್ತೆ, ಅಶೋಕ ರಸ್ತೆ ಸೇರಿದಂತೆ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಜಾತ ಸಂಚರಿಸಲಿದೆ ಎಂದರು.
ಅ.21 ರಂದು ವಿಶೇಷ ಉಪನ್ಯಾಸ ಕಾರ್ಯಗಾರ :-
ಅ.21 ರಂದು ತಜ್ಞ ವೈದ್ಯರುಗಳಿಂದ ಸ್ತನ ರೋಗದ ಇತ್ತೀಚಿಗ ವಿದ್ಯಮಾನ, ಬದಲಾವಣೆ, ಪರಿಣಾಮ ಕುರಿತಂತೆ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ವೈದ್ಯರು ಹಾಗೂ ವಿದ್ಯಾರ್ಥಿಗಳಿಗಾಗಿ ಸ್ತನ ರೋಗ ಕುರಿತ ವಿಶೇಷ ಉಪನ್ಯಾಸ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪಾಶ್ಚತ್ಯ ದೇಶಗಳಲ್ಲಿ ಕಂಡು ಬರುತ್ತಿದ್ದ ಸ್ತನ ರೋಗ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶಲ್ಲಿಯೂ ಹೆಚ್ಚಾಗಿ ಕಾಣಿಕೊಳ್ಳುತ್ತಿದೆ. ಹಲವು ಮಹಿಳೆಯರು ತಮ್ಮ ಖಾಸಗಿ ಭಾಗವನ್ನು ವೈದ್ಯರ ಬಳಿ ಪರೀಕ್ಷೆಗೆ ಒಳಪಡಿಸಲು ಹಿಂಜರಿಯುತ್ತಿರುವುದರಿಂದ ಈ ಕಾಯಿಲೆ ಪತ್ತೆ ಹಚ್ಚಲು ತೊಡಕಾಗಿದೆ. ಕೆಲ ಲಕ್ಷಣಗಳು ಕಂಡು ಬಂದ ಕೂಡಲೇ ಹಿಂಜರಿಕೆ ಬಿಟ್ಟು ವೈದ್ಯರಲ್ಲಿ ತಪಾಸಾಣೆಗೆ ಮುಂದಾಗುವಂತೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆತ್ಯಾಧುನಿಕ ಚಿಕಿತ್ಸಾ ವಿಧಾನಗಳಿಂದ ಸ್ತನ ರೋಗವನ್ನು ಗುಣಪಡಿಸಲು ಸಾಧ್ಯವಿದ್ದು, ಕಾಯಿಲೆಗೆ ಹೆಚ್ಚು ಹಣ ಖರ್ಚ್ಚಾಗುತ್ತದೆ ಎನ್ನವು ತಪ್ಪು ಕಲ್ಪನೆಯಿಂದ ರೋಗಿಗಳು ಹೊರಬರಬೇಕು. ಗ್ರಾಮೀಣ ಭಾಗದ ಜನರಿಗೆ ದೇಶದ ಹಲವು ವೈದ್ಯಕೀಯ ಆಸ್ಪತ್ರೆಗಳಲ್ಲಿ ಉಚಿತ ಸ್ತನ ಕ್ಯಾನ್ಸರ್ ಪರೀಕ್ಷೆ ಹಾಗೂ ಚಿಕಿತ್ಸೆ ನೀಡುತ್ತಿದ್ದು, ಗ್ರಾಮೀಣ ಭಾಗದ ಜನರು ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ ಸೇರಿದಂತೆ ವಿವಿಧ ಸರ್ಕಾರಿ ಆರೋಗ್ಯ ಯೋಜನೆಗಳ ಅಡಿಯಲ್ಲಿ ಸ್ತನ ಕ್ಯಾನ್ಸರ್ ರೋಗಕ್ಕೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.