ತರಕಾರಿ ವ್ಯಾಪರಿಗಳೆಂದು ಮನೆ ಬಾಡಿಗೆ ಪಡೆದವರಿಂದಲೇ ಲಕ್ಷಾಂತರ ರೂ ಬೆಲೆ ಬಾಳುವ ಒಡವೆ ಕಳವು ಮಾಡಿ ಪರಾರಿ
ಕುಣಿಗಲ್ : ನಾವು ತರಕಾರಿ ವ್ಯಾಪಾರಿಗಳು ಎಂದು ಹೇಳಿಕೊಂಡು ಮನೆ ಬಾಡಿಗೆ ಪಡೆದಿದ್ದ ಅಪರಿಚಿತ ತಾಯಿ ಮಗ ಸುಮಾರು ನಾಲ್ಕು ಲಕ್ಷ ರೂಗಳ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಒಡವೆ ಕಳೆದುಕೊಂಡ ನತದೃಷ್ಟೆ 75 ವಯೋಮಾನದ ಹುಲಿಯೂರುದುರ್ಗ ಟೌನ್ ವ್ಯಾಪ್ತಿಯ ಹೊಸಪೇಟೆಯ ಜಯಲಕ್ಷ್ಮಮ್ಮ
ವೃದ್ಧೆ ಜಯಲಕ್ಷ್ಮಮ್ಮನವರಿಗೆ ನಾಲ್ಕು ಜನ ಮಕ್ಕಳಿದ್ದು ಇವರಲ್ಲಿ ಇಬ್ಬರು ಗಂಡು ಮಕ್ಕಳು ಮರಣ ಹೊಂದಿದ್ದಾರೆ ಇಬ್ಬರು ಹೆಣ್ಣು ಮಕ್ಕಳು ಇದ್ದು ವಿಮಲ ಎಂಬ ಹೆಣ್ಣು ಮಗಳು ಬೆಂಗಳೂರಿನ ಲ್ಲಿ ಸುಂಕದಕಟ್ಟೆಯಲ್ಲಿ ವಾಸವಿದ್ದಾರೆ ಮತ್ತೊಬ್ಬ ಹೆಣ್ಣು ಮಗಳು ಕಮಲ ಶಿಕ್ಷಕ ವೃತ್ತಿಯನ್ನು ಮಾಡಿಕೊಂಡು ಮೈಸೂರಿನಲ್ಲಿ ವಾಸವಾಗಿದ್ದಾರೆ ಹುಲಿಯೂರುದುರ್ಗದ ಹೊಸಪೇಟೆಯಲ್ಲಿ ಜಯ ಲಕ್ಷ್ಮಮ್ಮ ಒಬ್ಬರೇ ವಾಸವಿದ್ದುದ್ದನ್ನು ಗಮನಿಸಿದ ಕಿರಾತಕರು ಕಳ್ಳತನ ಆಗುವ ಮೂರು ದಿನ ಹಿಂದೆ ಅಪರಿಚಿತ ತಾಯಿ (45) ಮಗ( 25) ಅಜ್ಜಿಯ ಮನೆಗೆ ಹೋಗಿ ನಾವು ಬಡವರು ತರಕಾರಿ ವ್ಯಾಪಾರ ಮಾಡುತ್ತಾ ಬದುಕು ಸಾಗಿಸುತ್ತಿದ್ದೇವೆ ನಿಮ್ಮ ಮನೆಯ ಪಕ್ಕದಲ್ಲಿ ನಿಮ್ಮ ಇನ್ನೊಂದು ಮನೆ ಖಾಲಿ ಇದೆ ಎಂದು ತಿಳಿದುಬಂದಿತು ನಮಗೆ ಮನೆ ಅವಶ್ಯಕತೆ ಇದೆ ಬಾಡಿಗೆಗೆ ನೀಡಿ ಎಂದು ಅಜ್ಜಿಯನ್ನು ನಂಬಿಸಿ ಹತ್ತು ಸಾವಿರ ಅಡ್ವಾನ್ಸ್, ತಿಂಗಳಿಗೆ 2000 ಎಂದು ಬಾಡಿಗೆ ಮಾತನಾಡಿ ಅದರಲ್ಲಿ 3000 ರೂಗಳನ್ನು ಅಡ್ವಾನ್ಸ್ ನೀಡಿ ಬಾಡಿಗೆ ಪಡೆದಿದ್ದಾರೆ ಮೂರು ದಿನಗಳ ಹಿಂದೆ ಬಾಡಿಗೆ ಪಡೆದು ಮನೆಯಲ್ಲಿ ವಾಸವಾಗಿದ್ದ ಅಪರಿಚಿತ ತಾಯಿ ಮಗ ದಿನನಿತ್ಯಲು ಬೆಳಿಗ್ಗೆ ಆಚೆ ಹೋದರೆ ರಾತ್ರಿ ಏಳು ಗಂಟೆಗೆ ಮನೆಗೆ ಬರುತ್ತಿದ್ದರು ಇವರಿಬ್ಬರೂ ಸೋಮವಾರ ರಾತ್ರಿ ಅಜ್ಜಿ ಜೊತೆಯಲ್ಲಿ ಊಟ ಮಾಡಿದ ಬಳಿಕ ಮನೆಯಲ್ಲಿ ಅಜ್ಜಿ ಇದ್ದಕ್ಕಿದ್ದಂತೆ ನಿದ್ರೆಗೆ ಜಾರಿದ್ದಾರೆ ನಂತರ ಖದೀಮರು ಅಜ್ಜಿಯ ಮನೆಯ ಮತ್ತೊಂದು ಬಾಗಿಲ ಮೂಲಕ ಒಳಗೆ ನುಗ್ಗಿದ ಅಪರಿಚಿತರು ಅಜ್ಜಿಯ ಮನೆಯಲ್ಲಿದ್ದ ಸುಮಾರು ನಾಲ್ಕು ಲಕ್ಷ ರೂಗಳ ಬೆಲೆಬಾಳುವ ಬಂಗಾರದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಮಂಗಳವಾರ ಬೆಳಿಗ್ಗೆ ಎಚ್ಚೆತ್ತ ಅಜ್ಜಿ ಜಯಲಕ್ಷ್ಮಮ್ಮ ಮನೆಯಲ್ಲಿ ನೋಡಿದಾಗ ಅಪರಿಚಿತ ತಾಯಿ (ಈಕೆ ಊರುಗೋಲನ್ನು ಹಿಡಿದುಕೊಂಡು ತಿರುಗಾಡುತ್ತಿದ್ದಳು) ಮಗ ಇಬ್ಬರು ಮನೆಯಲ್ಲಿ ಕಾಣದ ಕಾರಣ ಗಾಬರಿಯಾದ ಅಜ್ಜಿ ತನ್ನ ಮನೆ ಒಳಗೆ ಹೋಗಿ ನಾನು ಇಟ್ಟಿದ್ದ ಒಡವೆಗಳನ್ನು ನೋಡಿದಾಗ ಚಿನ್ನದ ಒಡವೆಗಳು ಕಳ್ಳತನವಾಗಿರುವುದು ಕಂಡು ಬಂದಿದೆ ತಕ್ಷಣ ಅಜ್ಜಿ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ತೆರಳಿ ವಿವರವಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರು ಪಟ್ಟಣದಲ್ಲಾಗಲಿ, ಹಳ್ಳಿಗಳಲ್ಲಾಗಲಿ, ಅಪರಿಚಿತರು ಮನೆ ಬಾಡಿಗೆ ಕೇಳಿದಾಗ ಆಧಾರ್ ಕಾರ್ಡ್ ವೋಟರ್ ಐಡಿ ಇನ್ನಿತರ ದಾಖಲೆಗಳನ್ನು ಪರಿಶೀಲಿಸಿ ಮನೆ ಬಾಡಿಗೆ ಕೊಡುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.