ಜಿಲ್ಲೆತುಮಕೂರುಪಾವಗಡ

ಕಾಂಗ್ರೆಸ್ ಪಕ್ಷದಿಂದ ಜನಪರ ಅಭಿವೃದ್ದಿ ಕಾರ್ಯಗಳಾಗಿವೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಪಾವಗಡ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಜನಪರ ಅಭಿವೃದ್ದಿ ಕೆಲಸಗಳು ಆಗಿವೆ, ಸೋಲಾರ್ ನಿರ್ಮಾಣದಿಂದ ಪಾವಗಡ ತಾಲೂಕು ಇಡೀ ವಿಶ್ವಕ್ಕೆ ಪರಿಚಯವಾಗಿ ಅಭಿವೃದ್ದಿ ಆಗುತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೆಶ್ವರ್ ಪ್ರಶಂಶೆ ವ್ಯಕ್ತಪಡಿಸಿದರು.
ಪಾವಗಡ ಪಟ್ಟಣ ಹಾಗೂ ತಾಲೂಕಿನ ನಾಗಲಮಡಿಕೆ, ತಿರುಮಣಿ ಮತ್ತು ವಳ್ಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ 147 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜನಸಾಮಾನ್ಯರ ಅಭಿವೃದ್ದಿ ಸಹಿಸದ ಬಿಜೆಪಿಗರು ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಕುರಿತು ಟೀಕೆ ಮಾಡುತ್ತಿದ್ದರು, ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನೂರು ದಿನಗಳಾಗಿವೆ ಅಷ್ಟರಲ್ಲೇ ತಾಲ್ಲೂಕಿನಲ್ಲಿ 147 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಉದ್ಘಾಟಿಸುತ್ತಿರುವುದನ್ನು ಜನತೆ ತಿಳಿಯ ಬೇಕು, ರಾಜ್ಯದ 135 ಕ್ಷೇತ್ರದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಬಿಜೆಪಿಗರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಪರ ಆಡಳಿತ ಪ್ರಾರಂಬಿಸಿದ್ದೇವೆ ಎಂದರು.
ಸುಮಾರು 6.5ಕೋಟಿ ವೆಚ್ಚದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, 58.43 ಕೋಟಿ ವೆಚ್ಚದ ಎನ್‌ಆರ್‌ಇಜಿ ಕಾಮಗಾರಿಗಳು, 4.86ಕೋಟಿ ವೆಚ್ಚದ ಪ್ರಧಾನ ಮಂತ್ರ ಆವಾಜ್ ಯೋಜನೆ, 19.36 ಕೋಟಿ ವೆಚ್ಚದ ಜೆಜೆಎಂ ಯೋಜನೆ, 6 ಕೋಟಿ ವೆಚ್ಚದಲ್ಲಿ 2 ಪೋಲಿಸ್ ಠಾಣೆ ನಿರ್ಮಾಣ, ಸೋಲಾರ್ ಸಿಎಸ್‌ಆರ್ ನಿಧಿಯಿಂದ 45 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಸರ್ಕಾರದಿಂದ ಕ್ಷೇತ್ರದ ಅಭಿವೃದ್ದಿಗೆ ಸಂಪೂರ್ಣ ಬದ್ದ ಎಂಬ ಭರವಸೆ ನೀಡಿದರು.

 

 

ಮಾಜಿ ಶಾಸಕ ವೆಂಕಟರಮಣಪ್ಪ ಅವರ ಕನಸಿನ ಕೂಸಾದ ಭದ್ರಾಮೇಲ್ದಂಡೆ ಯೋಜನೆ ಮತ್ತು ರೈಲ್ವೇ ಯೋಜನೆಗಳು ಪ್ರಗತಿಯಲ್ಲಿದ್ದು ಶಿಘ್ರದಲ್ಲೇ ಜನರ ಉಪಯೋಗಕ್ಕೆ ಬರಲಿವೆ ಎಂದರು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿದ್ದಾಗ ಎತ್ತಿನಹೊಳೆ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಹಣ ನೀಡದ ಕಾರಣ ಇಂದು ಯೋಜನೆಗಳ ಮೊತ್ತ 28 ಸಾವಿರ ಕೋಟಿ ಹೆಚ್ಚಾಗಿ ಎಂದರು.
ತಾಲೂಕಿಗೆ ರಿಂಗ್ ರೊಡ್, ವಸತಿ ಶಾಲೆಗಳು, ಎರಡು ಸಾವಿರ ಮನೆಗಳನ್ನು ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನಿಡಿದರು.

 

ಶಾಸಕ ವೆಂಕಟೇಶ್ ಮಾತನಾಡಿ ಪಾವಗಡಕ್ಕೆ ಅವಶ್ಯಕವಾದ ರಸ್ತೆ, ರಿಂಗ್ ರೋಡ್, ಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ, ಕೊಳಗೇರಿ ನಿವಾಸಿಗಳಿಗೆ ಮನೆ ಮತ್ತು ನಿವೇಶನಗಳನ್ನು ನೀಡಲು ಸಕಾರದೊಂದಿಗೆ ಮಾತುಕತೆ ನಡೆಸಿದ್ದೇನೆ, ಭದ್ರಾ ಮೇಲ್ದಂಡೆ ಯೋಜನೆ ನೀರು ಶೀರ್ಘವಾಗಿ ತಾಲೂಕಿಕೆ ಬರಲಿದೆ ಎಂದರು.
ಮಾಜಿ ಶಾಸಕ ವೆಂಕಟರಮಣಪ್ಪ, ಜಿಲ್ಲಾಧಿಕಾರಿ ಶ್ರೀನಿವಾಸ್, ಎಸ್‌ಪಿ ಕೆ.ವಿ.ಅಶೋಕ್, ಸೋಲಾರ್ ಸಿಇಒ ಅಮರನಾಥ್, ತಹಶೀಲ್ದಾರ್ ವರದರಾಜು, ಕಾಂಗ್ರೆಸ್ ಜಿಲ್ಲಾದ್ಯಕ್ಷ ಚಂದ್ರಶೇಖರಗೌಡ, ವಕ್ತಾರ ನಿಖಿತ್ ರಾಜ್ ಮೌರ್ಯ, ಮುಖಂಡರಾದ ರಾಜೇಶ್, ರವಿ, ಬತ್ತಿನೇನಿ ನಾನಿ, ಚನ್ನಕೇಶವ, ಮಾನಂ ವೆಂಕಟಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಖಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker