ಗುಬ್ಬಿ : ಕೃಷಿ ಚಟುವಟಿಕೆ ನಿರತ ವೇಳೆ ವಿದ್ಯುತ್ ಸ್ಪರ್ಶಿಸಿ ಯುವ ರೈತನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ತೋಟ ಒಂದರಲ್ಲಿ ನಡೆದಿದೆ.
ಎಚ್.ಜಿ.ಲೋಕೇಶ್ (28) ವರ್ಷದ ಯುವಕ ಮೃತಪಟ್ಟ ದುರ್ದೈವಿ. ಮೂಲತಃ ಹಿಂಡಿಸಿಗೆರೆ ಗ್ರಾಮದ ನಿವಾಸಿ ಗುರುರಾಜ್ ವಿಜಯಮ್ಮ ಎಂಬ ದಂಪತಿಯ ಮಗನಾಗಿದ್ದ ಮೃತ ವ್ಯಕ್ತಿ ಕಸಬ ಹೋಬಳಿಯ ಜಿ.ಹೊಸಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದನು.
ತನ್ನ ಸೋದರ ಮಾವ ಪ್ರಕಾಶ್ ಮನೆಯಲ್ಲಿ ಚಿಕ್ಕ ವಯಸ್ಸಿನಿಂದಲೂ ನೆಲೆಸಿದ್ದ ಲೋಕೇಶ್ ತನ್ನ ಮಾವನ ತೆಂಗಿನ ತೋಟದಲ್ಲಿ ಕಾಯಿ ಕೀಳಲು ಹೋಗಿ ತೋಟದಲ್ಲಿ ಹಾಯ್ದು ಹೋಗಿದ್ದ ವಿದ್ಯುತ್ ತಂತಿಗೆ ಕುಡುಗೋಲು ಸ್ಪರ್ಶಿಸಿ ಲೋಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಬ್ಬಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಮೃತನ ಅಂತಿಮ ದರ್ಶನ ಪಡೆದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಕುಟುಂಬಸ್ಥರನ್ನು ಸಂತೈಸಿದರು.ಗುಬ್ಬಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.