ಜಿಲ್ಲೆತುಮಕೂರುತುಮಕೂರು ಗ್ರಾಮಾಂತರ
ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮೂರು ಗ್ರಾ.ಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ
ತುಮಕೂರು : ತುಮಕೂರು ತಾಲೂಕಿನ ವಿವಿಧ ಗ್ರಾಮಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳಿಗೆ ಚುನಾವಣೆ ನಡೆದಿದ್ದು, ಹೊಳಕಲ್ಲು,ದೊಡ್ಡ ನಾರವಂಗಲ ಗ್ರಾಮಗಳಿಗೆ ಅವಿರೋಧ ಆಯ್ಕೆ ನಡೆದರೆ, ಕೆಸರುಮಡು ಗ್ರಾಮಪಂಚಾಯಿತಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ದೊಡ್ಡ ನಾರವಂಗಲ, ಕೆಸರುಮಡು, ಹೊಳಕಲ್ಲು ಗ್ರಾಮಪಂಚಾಯಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಇಂದು ದಿನಾಂಕ ನಿಗಧಿ ಪಡಿಸಿದ್ದು, ದೊಡ್ಡನಾರವಂಗಲ ಗ್ರಾಮಪಂಚಾಯತಿ ಅಧ್ಯಕ್ಷ ಹುದ್ದೆ ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಾದರೆ,ಉಪಾಧ್ಯಕ್ಷರ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.ಹೊಳಕಲ್ಲು ಗ್ರಾ.ಪಂ.ನ ಅಧ್ಯಕ್ಷಸ್ಥಾನ ಎಸ್.ಸಿ.ಸಾಮಾನ್ಯಕ್ಕೆ ಮೀಸಲಾದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಕೆಸರು ಮಡು ಗ್ರಾ.ಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದರೆ, ಸಾಮಾನ್ಯ (ಮಹಿಳೆ)ಗೆ ಮೀಸಲಾಗಿತ್ತು.
ಹೊಳಕಲ್ಲು ಗ್ರಾಮಪಂಚಾಯಿತಿಯಲ್ಲಿ 21 ಜನ ಸದಸ್ಯರಿದ್ದು, ಇವರಲ್ಲಿ ಬಿಜೆಪಿ ಬೆಂಬಲಿತ 12 ಜನ ಸದಸ್ಯರಿದ್ದರೆ, ಜೆಡಿಎಸ್ ಬೆಂಬಲಿತ 9 ಜನ ಸದಸ್ಯರಿದ್ದರು.ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ಹೊಳಕಲ್ಲು ಕ್ಷೇತ್ರ ಹೆಚ್.ಎ.ಆಂಜನಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಎ.ಕೆ.ಕಾವಲ್ ವಡ್ಡರಹಳ್ಳಿ ಕ್ಷೇತ್‌ರದ ಶ್ರೀ ಸುಮಿತ್ರ.ಟಿ.ಸಿ ನಾಮಪತ್ರ ಸಲ್ಲಿಸಿದ್ದರು. ಉಳಿದಂತೆ ಯಾರು ನಾಮಪತ್ರ ಸಲ್ಲಿಸದ ಹಿನ್ನೇಲೆಯಲ್ಲಿ ಚುನಾವಣಾಧಿಕಾರಿಗಳಾಗಿದ್ದ ರವೀಂದ್ರ ಪ್ರಭು ಎಇಇ ಹೇಮಾವತಿ ವಿಭಾಗ ಇವರು ಘೋಷಿಸಿದ್ದಾರೆ.
ದೊಡ್ಡನಾರವಂಗಲ ಒಟ್ಟು 16 ಜನ ಸದಸ್ಯರು ಇದ್ದು ಬಿಜೆಪಿ11 ಮತ್ತು ಇತರೆ 06 ಸ್ಥಾನ ಇದ್ದು, ಗ್ರಾ.ಪಂ.ನ ಅಧ್ಯಕ್ಷ ಸ್ಥಾನಕ್ಕೆ ಪುಷ್ಟಲತ ಕೋಂ ನಟರಾಜು,ಉಪಾಧ್ಯಕ್ಷರಾಗಿ ಬಾಣಾವಾರ ಕ್ಷೇತ್ರದ 16 ಜನ ಸದಸ್ಯರುಗಳ ಸಂಪೂರ್ಣ ಬೆಂಬಲದೊಂದಿಗೆ ಬಿಜೆಪಿ ಬೆಂಬಲಿತ ಶಶಿಧರ್ ಬಿ.ಅವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ.ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇಬ್ಬರು ಅಭ್ಯರ್ಥಿಗಳು ಅವಿರೋಧ ವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ತಹಶೀಲ್ದಾರ್ ಸಿದ್ದೇಶ್ ಘೋಷಣೆ ಮಾಡಿದ್ದಾರೆ.
19 ಗ್ರಾ.ಪಂ.ಸದಸ್ಯರನ್ನು ಹೊಂದಿರುವ ಕೆಸರುಮಡು ಗ್ರಾಮಪಂಚಾಯಿತಿಯ ಅಧ್ಯಕ್ಷಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮಾಚನಹಳ್ಳಿ ಕ್ಷೇತ್ರದ ಶ್ರೀಮತಿ ಸಾವಿತ್ರಮ್ಮ ರಂಗಸಾಮಯ್ಯ ಮತ್ತು ಉಮೇಶ್ ಅವರುಗಳು ಇಬ್ಬರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಶ್ರೀಮತಿ ಸಾವಿತ್ರಮ್ಮ ರಂಗಸ್ವಾಮಯ್ಯ 10 ಮತಗಳನ್ನು ಪಡೆದರೆ, ಉಮೇಶ್ ಅವರು 09 ಮತಗಳನ್ನು ಪಡೆದರು.ಸಾವಿತ್ರಮ್ಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಶ್ರೀಮತಿ ಸೈಯದ್ ರಾಭಿಯಾಬಿ ಅವರು ಸ್ಪರ್ದಿಸಿ ಆಯ್ಕೆಯಾಗಿದ್ದಾರೆ.ಚುನಾವಣಾಧಿಕಾರಿ ಯಾಗಿ ಎಇಇ ಶ್ರೀನಿವಾಸ್ ಕಾರ್ಯನಿರ್ವಹಿಸಿದ್ದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾ.ಪಂ., ತಾ.ಪಂ, ಮತ್ತು ಜಿ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚು ಇದ್ದು, ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು,ತಾಲೂಕು ಪಂಚಾಯಿತಿಯಲ್ಲಿಯೂ ಸಹ ಹಿಂದೆ ತನ್ನ ಪ್ರಾಭಲ್ಯ ಮೆರೆದಿದ್ದರು. ಹಾಗಾಗಿ ಗ್ರಾಮಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ. ಇಂದು ನಡೆದ ಮೂರು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ದೊಡ್ಡನಾರವಂಗಲ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗದವರು ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಯಾರು ಇಲ್ಲದಿರುವುದರಿಂದ ಏಕ ವ್ಯಕ್ತಿ ಯಾಗಿ ಆಯ್ಕೆ ಹೊರತು ಪಡಿಸಿದರೆ,ಉಪಾಧ್ಯಕ್ಷಸ್ಥಾನ ಬಿಜೆಪಿ ಬೆಂಬಲಿತರಾಗಿದ್ದಾರೆ.ಹೊಳಕಲ್ಲು ಮತ್ತು ಕೆಸರುಮಡು ಗ್ರಾ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ತಮ್ಮ ಪಕ್ಷದ ಬೆಂಬಲಿತ ಸದಸ್ಯರನ್ನು ಗೆಲ್ಲಿಸಿಕೊಳ್ಳುವಲ್ಲಿ ಶಾಸಕ ಬಿ.ಸುರೇಶಗೌಡರು ಯಶಶ್ವಿಯಾಗಿದ್ಧಾರೆ.