ಕೊಬ್ಬರಿ ಖರೀದಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಭೇಟಿ ಪರಿಶೀಲನೆ
ತುಮಕೂರು : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಖರೀದಿಸುವ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶ್ರೀನಿವಾಸ ಕೆ ಭೇಟಿ ಇಂದು ನೀಡಿ ಪರಿಶೀಲನೆ ನಡೆಸಿದರು..
ಚಿಕ್ಕನಾಯಕನಹಳ್ಳ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೊಬ್ಬರಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು
ರೈತರೊಂದಿಗೆ ಚರ್ಚಿಸಿದರು,ರೈತರಿಗೆ ಅನುಕೂಲಕ್ಕಾಗಿ ತೆರೆದ ನ್ಯಾಫೆಡ್ ಕೇಂದ್ರದಲ್ಲಿ ಕೊಬ್ಬರಿ ಖರೀದಿಗೆ ಮೊದಲು ಅದರ
ಗುಣಮಟ್ಟ ಪರೀಕ್ಷಿಸಿ ಗ್ರೇಡ್ ನೀಡಲಾಗುತ್ತದೆ . ಆದರಿಂದ ರೈತರು ಗುಣಮಟ್ಟದ ಕೊಬ್ಬರಿ ತರಬೇಕು ಎಂದು ಮನವಿ ಮಾಡಿದರು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅವ್ಯವಹಾರವಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕಲ್ಪಶ್ರೀ, ತಹಸೀಲ್ದಾರ್ ಅರ್ಚನಾ ಭಟ್, ಕ..ರಾ.ಸ.ಮಾ.ಮ.ಮ ನಿಯಮಿತದ ಶಾಖಾ ವ್ಯವಸ್ಥಾಪಕರಾದ ಕಾರ್ತೀಕ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಚೈತ್ರ, ಮತ್ತಿತರರು ಹಾಜರಿದ್ದರು