ಕೊರಟಗೆರೆ : ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರು ಗುರುವಾರದಂದು ಕೊಳಾಲ, ಚಿನ್ನಹಳ್ಳಿ, ಮಾವತ್ತೂರು ಮತ್ತು ವಜ್ಜನ ಕುಡಿಕೆ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಬಡವರ್ಗದವರಿಗೆ ಅಗತ್ಯವಾದ 10 ಕೆ.ಜಿ. ಪಡಿತರ ಅಹಾರಧಾನ್ಯ ವಿತರಣೆ, ಏರಿಕೆಯಾಗುತ್ತಿರುವ ಗ್ಯಾಸ್ ಬೆಲೆ ಇಳಿಕೆ ಕ್ರಮ, ಅಭಿವೃದ್ಧಿಗೆ ಒತ್ತು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದಕ್ಕಾಗಿ ಆದ್ಯತೆ ನೀಡುವಂತೆ ಮತದಾರರಲ್ಲಿ ಡಾ.ಜಿ.ಪರಮೇಶ್ವರ್ ಅವರು ಮನವಿ ಮಾಡಿದರು. ಕೊಳಾಲ ಮತ್ತು ಚಿನ್ನಹಳ್ಳಿ ಪಂಚಾಯ್ತಿಗಳಲ್ಲಿ ಮತಯಾಚನೆ ಮಾಡುವಾಗ ಹಿರಿಯ ಮಹಿಳೆಯರು ಆರ್ಶೀವದಿಸಿದ್ದು ವಿಶೇಷವಾಗಿತ್ತು. ಪ್ರೀತಿ-ಆದರದಿಂದ ಮನೆಗೆ ಬರಮಾಡಿಕೊಂಡು, ತಮ್ಮದೇಯಾದ ರೀತಿಯಲ್ಲಿ ಫಲಾಫಲಗಳನ್ನು ನೀಡಿ, ಬೆಂಬೆಲ ವ್ಯಕ್ತಪಡಿಸಿದರು.
ಕರೋನದಂತ ಸಂಕಷ್ಟದ ಸಮಯ ಸೇರಿದಂತೆ 5 ವರ್ಷಗಳಲ್ಲಿ ಕ್ಷೇತ್ರದ ಮೂಲಮೂಲೆಯಲ್ಲಿ ಸುತ್ತಾಡಿ,ಜನರ ನೋವಿಗೆ, ಕೂಗಿಗೆ ಸ್ವಂದಿಸಿದ್ದೇನೆ. ನಾನು ಯಾವುದೇ ತಮ್ಮ ವಯಕ್ತಿಕ ಹಿಸಾಸಕ್ತಿಗೆ ಜನರನ್ನು ಬಳಸಿಕೊಳ್ಳದೆ ಕಾಯಕ ಮಾಡಿದ್ದೇನೆ. ಅದಕ್ಕೆ ಕೂಲಿ ರೂಪದಲ್ಲಿ ತಮ್ಮ ಮತಗಳನ್ನು ನೀಡಿ ಎಂದು ಮತದಾರರಲ್ಲಿ ಅವರು ಮನವಿ ಮಾಡಿದರು.
ಜನಪರ ಪ್ರಣಾಳಿಕೆ ಕೊಡಲು ಕೊರಟಗೆರೆಯ ಮತದಾರರೇ ಕಾರಣ:
ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರ ಡಾ.ಜಿ.ಪರಮೇಶ್ವರ್ ಅವರು, ಜನರಲ್ಲಿ ನನ್ನ ಬಗ್ಗೆ ನಂಬಿಕೆ-ವಿಶ್ವಾಸ ಇರುವುದನ್ನು ಕ್ಷೇತ್ರದಲ್ಲಿ ಸಂಚಾರ ಮಾಡಿದಾಗ ಕಂಡುಕೊಂಡಿದ್ದೇನೆ. ಕ್ಷೇತ್ರದ ಜನರ ಸಾಮಾಜಿಕ ಸಮಸ್ಯೆಗಳು, ಅವರ ಕೂಗಿನ ಆಧಾರದ ವೇಳೆ ಉತ್ತಮವಾದ ಪ್ರಣಾಳಿಕೆಯನ್ನು ಸಿದ್ದಗೊಳಿಸಲು ಸಾಧ್ಯವಾಯಿತು. ಇದು ರಾಜ್ಯಕ್ಕೆ ಕೊರಟಗೆರೆಯ ಮತದಾರರು ಕೊಟ್ಟ ಕೊಡುಗೆ. ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರು ಅಂಶಗಳು ರಾಜ್ಯಕ್ಕೆ ಅಲ್ಲದೆ ಕೊರಟಗೆರೆಯ ಧ್ವನಿಗೂ ಆದ್ಯತೆ ನೀಡಿದಂತೆಯೆ ಆಗಿದೆ ಎಂದರು.
ಮೆಟ್ರೋ ಯೋಜನೆ ಪ್ರಸ್ತಾಪ:
ನಿರಾವರಿ, ಎತ್ತಿಹೊಳೆ ಯೋಜನೆ ನಮ್ಮ ತಾಲ್ಲೂಕಿನ ಮೂಲಕವೆ ಹಾದು ಹೊಗುತ್ತದೆ. ಈ ಯೋಜನೆಯಿಂದ 109 ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗಲಿದೆ. ತಮಕೂರು ನಗರಕ್ಕೆ ಹೊಂದಿಕೊಂಡಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇನ್ನೂ ಪ್ರಗತಿ ತರಲು ಮೆಟ್ರೋ ಸೇವೆಯನ್ನು ಈ ಪ್ರದೇಶಕ್ಕೆ ವಿಸ್ತರಣೆ ಮಾಡುವ ಅಂಶಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ತಂದಿರುವುದು ಕ್ಷೇತ್ರದ ಅಭಿವೃದ್ಧಿಯ ಪುರಕವಲ್ಲವೇ ಎಂದು ವಿರೋಧ ಪಕ್ಷಗಳ ಊಹಾಪೂಹ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಸಿದ್ದು ಮತ್ತು ನನ್ನ ನಡುವೆ ಕಿಡಿಕೇಡಿಗಳ ಕಿಡಿ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಚುನಾವಣೆಗಲು ಬಂದಾಗ ಬಿರುಕು- ಭಿನ್ನಾಬಿಪ್ರಯಗಳನ್ನು ಉಂಟು ಮಾಡುವ ಕೆಲಸ ಮಾಡುತ್ತಾರೆ. ಇಮತಹ ಕಿಡಿಕೆಡಿ ಕೃತ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವತ್ತು ಆ ತರಹದ ಭಾವನೆ ಇಲ್ಲ. ಈ ಬಗ್ಗೆ ಕೊರಟಗೆರೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಸಿದ್ದರಾಮಯ್ಯನವರೇ ಮಾತನಾಡಿದ್ದಾರೆ. ಪರಮೇಶ್ವರ ಗೆದ್ದರೆ ನಾನು ಗೆದ್ದಂತೆ ಎಂದು ದ್ವಿರುಕ್ತಿ ರೀತಿಯಲ್ಲಿ ಒತ್ತಿ ಒತ್ತಿ ಹೇಳಿದ್ದಾರೆ. ಇದೇ ಮಾತನ್ನು ಮಧುಗಿರಿ ಕ್ಷೇತ್ರದ ಅಭ್ಯರ್ಥಿ ರಾಜಣ್ಣ ಕೂಡ ಹೇಳಿದ್ದಾರೆ. ಈ ಬಾರೀ ಅಂತಹ ಗಾಳಿ ಸುದ್ದಿಗಳ ಪ್ರಚಾರಕ್ಕೆ ತೆರೆ ಬಿದ್ದಿದೆ ಎಂದು ಪರಮೇಶ್ವರ ನುಡಿದರು.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 6ಹೋಬಳಿಗಳಲ್ಲಿ ಇಂದು ಪ್ರತ್ಯೇಕ ತಂಡಗಳು ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ ಪರ ಏಕ ಕಾಲಕ್ಕೆ ಚುನಾವಣಾ ಪ್ರಚಾರಕ್ಕೆ ಧುಮಕಿವೆ. ಆಯಾ ಹೋಬಳಿ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಪರ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
ಪಕ್ಷಕ್ಕೆ ಸೇರ್ಪಡೆ:
ಶಾಸಕ ಪರಮೇಶ್ವರ ಅವರ ಕಾರ್ಯವೈಖರಿಯನ್ನು ಮೆಚ್ಚಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿರುವುದು, ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಉಂಟಾಗಿದೆ. ಮಾದವಾರ ಗ್ರಾಮದ ಜೆಡಿಎಸ್ ಪಕ್ಷದ ಯುವಕರು ತಂಡ ಶಾಸಕರಾದ ಡಾ ಜಿ ಪರಮೇಶ್ವರ ರವರ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.
ಬ್ಲಾಕ್ ಕಾಂಗ್ರೆಸ್ ಸಮಿತಿಯ ಪಧಾಧಿಕಾರಿಗಳು, ಹಿರಿಯ ಮುಖಂಡರು, ಪಕ್ಷದ ಚುನಾಯಿತ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು.