ತಿಪಟೂರು : ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲು ಅಪ್ರಬುದ್ಧ ಸಾಮಾನ್ಯ ಜ್ಞಾನವಿಲ್ಲದ ಪಕ್ಷದ ಮುಖಂಡ ರಾಹುಲ್ ಗಾಂಧಿ ಕಾರಣ, ದೇಶವನ್ನು ಮುನ್ನಡೆಸಿದ ಪಂಡಿತ್ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ನಾಡಿನ ಹಿರಿಯ ಮುತ್ಸದಿ ದೇವೇಗೌಡ ಪ್ರಪಂಚಕ್ಕೆ ರಾಷ್ಟ್ರ ಹಿರಿಮೆ ತೋರಿಸಿದ್ದರು, ಈಗಿನ ಪ್ರಧಾನಿ ನರೇಂದ್ರ ಮೋದಿಯನ್ನು ಇಂಗ್ಲೆಂಡ್ ನಂತಹ ರಾಷ್ಟ್ರ ಟೀಕಿಸುತ್ತಿರುವುದು ವಿಪರ್ಯಾಸ, ತಿಂಗಳಿಗೊಮ್ಮೆ ರಾಜ್ಯದಲ್ಲಿ ರೋಡ್ ಶೋ ನಡೆಸುವುದು ಹುದ್ದೆಗೆ ಅಪಮಾನ ಅಲ್ಪಸಂಖ್ಯಾತರು, ಯುವಕರು, ಹಾಗೂ ರೈತರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ ಎಂದು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ನಗರದ ಗಾಂಧಿನಗರ ಸರ್ಕಲ್ ಬಳಿ ಅಲ್ಪಸಂಖ್ಯಾತ ಜಾಗೃತ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭ್ರಷ್ಟಾಚಾರದ ಪ್ರತಿರೂಪವೇ ಬಿಜೆಪಿಯಾಗಿದೆ ಬೆಂಗಳೂರಿನ ಕೋರ್ಟಿನಲ್ಲಿ ರೌಡಿಗಳಾದ ಕೊತ್ವಾಲ್ ರಾಮಚಂದ್ರ, ಕೋಳಿ ಫಯಾಜ್ ಹೆಸರು ಕೂಗುತ್ತಿಲ್ಲ ಬದಲಿಗೆ ಯಡಿಯೂರಪ್ಪ, ಕಟ್ಟಾಸುಬ್ರಹ್ಮಣ್ಯ ನಾಯ್ಡು ಹೆಸರು ಕೂಗುತ್ತಾರೆ, ನಮ್ಮ ಜಾತ್ಯಾತೀತ ಜನತಾದಳದ ಕಾರ್ಯಕರ್ತರ ಹೆಸರಿದ್ದರೆ ನಾನು ಕೂಡಲೇ ರಾಜೀನಾಮೆ ನೀಡುತ್ತೇನೆ, ತತ್ವ ಮತ್ತು ಸಿದ್ದಾಂತ ಸಾರುವ ಆರ್ ಎಸ್ ಎಸ್ ಏನು ಮಾಡುತ್ತಿದೆ 12 ಜನ ಎಂ ಎಲ್ ಎ ಗಳು ಮುಂಬೈನಲ್ಲಿ ಮಂಚ ಮುರಿದು ಬಂದಿದ್ದಾರೆ ಇವರೆಲ್ಲರ ಸೀಡಿಗಳಿವೆ ಇಂತಹ ಭ್ರಷ್ಟರನ್ನು ಆಯ್ಕೆ ಮಾಡಬೇಕೆ, ಎರಡು ರಾಷ್ಟ್ರೀಯ ಪಕ್ಷಗಳಿಗೆ ಒಬ್ಬರಿಗೆ ಸಾಬ್ರು ಬೇಡ ಸಾಬ್ರ ವೋಟು ಬೇಡ, ಎಂದರೆ ಮತ್ತೊಬ್ಬರು ವೋಟಿಗಾಗಿ ಅಲ್ಪಸಂಖ್ಯಾತರನ್ನು ಉಪಯೋಗಿಸಿಕೊಂಡು ಅಧಿಕಾರ ಬಂದ ಮೇಲೆ ಕೈಬಿಟ್ಟರು
ಮಾನ್ ಕಿ ಬಾತ್ ಕಾರ್ಯಕ್ರಮ ಹುಡುಗ ಹುಡುಗಿಗೆ ಸಂಬಂಧಪಟ್ಟದ್ದು ಪ್ರಧಾನಿ ನಡೆಸಿಕೊಡುವುದು ಹಾಸ್ಯಸ್ಪದ ಎಂದು ನಗೆ ಚಟಾಕಿ ಆರಿಸಿದರು, ದೇವೇಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ರೈತರ ಪ್ರಗತಿಗಾಗಿ 30% ಟ್ರಾಕ್ಟರ್ ಸಬ್ಸಿಡಿ ಘೋಷಿಸಿದ್ದರು, ಈ ನೆನಪಿಗಾಗಿ ಪಂಜಾಬಿನಲ್ಲಿ ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟಿದ್ದಾರೆ, ಕೊಬ್ಬರಿ ಇಷ್ಟೊಂದು ಕೆಳಮಟ್ಟಕ್ಕೆ ಹೋದಾಗ ಗೌಡರಿದ್ದರೆ 20ಸಾವಿರ ಬೆಳೆಯೊಂದಿಗೆ ಸರ್ಕಾರದಿಂದ ಕೊಂಡುಕೊಳ್ಳುತ್ತಿದ್ದರು, ಎಂದು ಹೇಳಿದರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ನಿಗಮ ಮಂಡಳಿಗಳಿಗೆ ಅಲ್ಪಸಂಖ್ಯಾತರನ್ನು ನೇಮಿಸಿಕೊಳ್ಳುತ್ತೇವೆ ಇಲ್ಲಿ ಶಾಂತಕುಮಾರ್ ಗೆದ್ದರೆ ಇಬ್ರಾಹಿಂ ಗೆದ್ದಂತೆ, ಇಬ್ರಾಹಿಂ ಗೆದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ, ದಯವಿಟ್ಟು ಮತ ನೀಡಿ ಎಂದು ಮತ ಯಾಚಿಸಿದರು.
ಜಾತ್ಯತೀತ ಜನತಾದಳದ ಅಭ್ಯರ್ಥಿ ಶಾಂತಕುಮಾರ್ ಮಾತನಾಡಿ ತಿಪಟೂರಿನಲ್ಲಿ ಪಂಚರತ್ನ ರಥಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದ್ದು 20 ಪಾಯಿಂಟ್ ಗಳಲ್ಲಿ ಪ್ರತಿ ಪಾಯಿಂಟಿನಲ್ಲಿ 4ಸಾವಿರಕ್ಕೂ ಅಧಿಕ ಜನ ಸೇರಿದ್ದು ಗೆಲುವಿನ ಮುನ್ಸೂಚನೆಯಾಗಿದೆ, ರಾಜ್ಯದ ಜನರು ಮತ್ತು ಮಾಧ್ಯಮಗಳು25 ಸೀಟು ಬರುತ್ತವೆ ಎನ್ನುತ್ತಿದ್ದವರು ಈಗ 125 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರ ನಮ್ಮ ಪಕ್ಷದ ಪಾಲಾಗಲಿದೆ ಎನ್ನುತ್ತಿರುವುದು ಸಂತೋಷವಾಗಿದ್ದು, ತಿಪಟೂರು ನಗರಸಭೆಯಲ್ಲಿ ಇ ಖಾತೆ ಸಿಗದೇ ಮಧ್ಯಮ ವರ್ಗದ ಜನರು ವಾಸಿಸುವ ಗಾಂಧಿನಗರದಲ್ಲಿ ಕೊಂಡ ನಿವೇಶನ ವ್ಯವಹರಿಸಲಾಗದೆ ಮತ್ತು ವಸತಿ ನಿರ್ಮಿಸಲಾಗದೆ ಕಷ್ಟ ಪಡುತ್ತಿದ್ದಾರೆ ಇದ್ಯಾವುದೇ ಅರಿವು ಸಚಿವರಿಗೆ ಮುಟ್ಟುತ್ತಿಲ್ಲ ಕಳಪೆ ಯುಜಿಡಿ ಕಾಮಗಾರಿ ಸಾಮಾನ್ಯ ಮಳೆಗೆ ರಸ್ತೆ ತುಂಬೆಲ್ಲ ಹರಿಯುತ್ತಿದೆ. ನಗರಸಭೆಯವರು ಸಕಾಲಕ್ಕೆ ಸರಿಯಾಗಿ ಕಂದಾಯ ಪಾವತಿಸಿಕೊಳ್ಳುತ್ತಿದ್ದಾರೆ ಈ ವಿಚಾರವಾಗಿ ಸಾಕಷ್ಟು ಧರಣಿ ಮತ್ತು ಪ್ರತಿಭಟನೆ ಮಾಡಿದ್ದೇನೆ ಎಂದರು.
ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್ ಮಾತನಾಡಿ ಅಲ್ಪಸಂಖ್ಯಾತರಿಗೆ ಇಜಾಬ್ ಮತ್ತು ಹಲಾಲ್ ತೊಂದರೆಯಾದಾಗ ಕಾಂಗ್ರೆಸ್ ಪಕ್ಷದವರು ಧ್ವನಿಯೆತ್ತಲಿಲ್ಲ ಆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಅಲ್ಪಸಂಖ್ಯಾತರ ಪರ ಮಾತನಾಡಿದರು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಆಂಜನಪ್ಪ, ಮಹಿಳಾ ಅಧ್ಯಕ್ಷೆ ತಾಹಿರಾಬೇಗಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ, ತಿಪಟೂರು ನಗರ ಅಧ್ಯಕ್ಷ ರಾಜು ಕಂಚಾಘಟ್ಟ, ಮಾಜಿ ನಗರಸಭಾ ಸದಸ್ಯ ರೇಖಾ ಅನುಪ್, ತಿಲಕ್ ಗೌಡ, ಹೇಮೇಶ್, ಧನಂಜಯ, ನಟರಾಜು, ಇನ್ನು ಮುಂತಾದವರಿದ್ದರು.