ಜಿಲ್ಲೆತುಮಕೂರುಪಾವಗಡರಾಜಕೀಯ

ಪಾವಗಡದಲ್ಲಿ ಕಾಂಗ್ರೆಸ್ ಗೆಲ್ಲುವುದು ಶತಸಿದ್ಧ : ನಿಖಿತ್ ರಾಜ್ ಮೌರ್ಯ

ಪಾವಗಡ : ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೆಗೆಲುತ್ತದೆ ಅದೇ ರೀತಿ ಪಾವಗಡದಲ್ಲೂ ಕಾಂಗ್ರೆಸ್ ಗೆಲ್ಲುವುದು ಶತಸಿದ್ಧ ಎಂದು ಕೆಪಿಸಿಸಿ ವಕ್ತರರಾದ ನಿಖಿತ್ ರಾಜ್ ಮೌರ್ಯ ಹೇಳಿದರು.

ಪಟ್ಟಣದ ಎಸ್.ಎಸ್.ಕೆ.ರಂಗಮಂದಿರದಲ್ಲಿ ಭಾನುವಾರ ನಡೆದ ಯುವ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಡಾ ನಂಜುಂಡಪ್ಪ ವರದಿಯಂತೆ ತಾಲ್ಲೂಕು ಬಹಳ ಹಿಂದುಳಿದ ಪ್ರದೇಶವಾಗಿತ್ತು, ಇಂದು ಕೃಷಿ,ರೇಷ್ಮೆ, ತೋಟಗಾರಿಕೆ ಬೆಳೆಗಳನ್ನು ಅತೀ ಹೆಚ್ಚು ಬೆಳೆಯುವ ಜಿಲ್ಲೆಯಲ್ಲೇ ಪ್ರಥಮ ಎಂದು ಅವರು ಡಿ ಕೆ ಶಿವಕುಮಾರ್ ದೂರದೃಷ್ಟಿ ಯಿಂದ ಇಡೀ ಪ್ರಪಂಚವೇ ಪಾವಗಡದತ್ತ ತಿರುಗಿ ನೋಡುವಂತೆ ಸೊಲಾರ್ ಪಾರ್ಕ್ ನಿರ್ಮಾಣ ಮಾಡಿದ್ದಾರೆ. ಅಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 2300 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಹಣ ಮಂಜೂರು ಮಾಡಿದ್ದರ ಪಲವಾಗಿ ಇಂದು‌ ಎತ್ತಿನಹೊಳೆ, ಭದ್ರ ಮೇಲ್ದಂಡೆ ಯೋಜನೆ,ತುಂಗಭದ್ರ ಹಿನ್ನಿರು ಯೋಜನೆಗಳಡಿ ತಾಲ್ಲೂಕಿಗೆ ನೀರಾವರಿ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರ ಕಲ್ಪಸಿದೆ ಎಂದು ಹೇಳಿದರು.

ನಮ್ಮದು ಡಬಲ್ ಇಂಜನ್ ಸರ್ಕಾರ ಎನ್ನುತ್ತಾರೆ ದೇಶದಲ್ಲಿ ಪೆಟ್ರೋಲ್, ಡಿಸೇಲ್, ಸೇರಿದಂತೆ ದಿನ ನಿತ್ಯ ಆಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಸುಳ್ಳಿನ ಭರವಸೆಗಳನ್ನೇ ನೀಡಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಜನ ಈ ಸುಳ್ಳಗಳನ್ನು ಗಮನಿಸುತ್ತಿದ್ದಾರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಈ ಸುಳ್ಳುಗಳೇ ಸೋಲಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ ತಾಲ್ಲೂಕಿನಲ್ಲಿ ಎಲ್ಲರ ಆಶಿರ್ವಾದದಿಂದ ನೂರಾರು ಜನ ಮೆಚ್ಚುವಂತಹ ಶಾಶ್ವತ ಕಾಮಾಗಾರಿಗಳನ್ನು ಮಾಡಿದೇನೆ.ಹಾಸ್ಟೆಲ್ ಕಟ್ಟಡಗಳು, ವಿದ್ಯುತ್ ಉಪಸ್ಥವರಗಳು,ನೀರಾವರಿ ಸೌಲಭ್ಯಗಳು, ವಸತಿ ಸೌಕರ್ಯ ಗಳು, ಸೋಲಾರ್ ಪಾರ್ಕ್,ಸುಸಜ್ಜಿತ ರಸ್ತೆಗಳನ್ನು ನಿರ್ಮಾಣ ಮಾಡಿದ್ದೇವೆ.

ಪಾವಗಡ ಪಟ್ಟಣದಲ್ಲಿನ ಬಡ ಜನರಿಗೆ ವೆಂಕಟರಮಣಪ್ಪ 500 ಮನೆ ನಿರ್ಮಾಣ ಮಾಡಿಕೊಟ್ಟರೆ ಅದಕ್ಕೆ ಕುಮಾರಸ್ವಾಮಿ ಲೇಔಟ್ ಅಂತರೇ ಎಂದು ವ್ಯಂಗ್ಯವಾಡಿದರು.

ನನ್ನ ಮಗ ವೆಂಕಟೇಶ್ ಶಾಸಕರಾದರು ನಾನು ಶಾಸಕ ಸ್ಥಾನದಿಂದ ನಿವೃತ್ತಿ ಆಗಬಹುದು, ಸಕ್ರಿಯ ರಾಜಕಾರಣದಿಂದ ಅಲ್ಲ ಇನ್ನೂ ದೈಹಿಕವಾಗಿ ಸದೃಡವಾಗಿದ್ದೇನೆ ಜನರ ಸೇವೆ ಮಾಡಲು ರಾಜಕಾರಣವು ಅಗತ್ಯವಿಲ್ಲ‌ ಎಂದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲ್ಲಿಕುಂಟೆ ಮಠ್ ಮಾತನಾಡಿ ಪಾವಗಡ ತಾಲ್ಲೂಕಿನಲ್ಲಿ ವೆಂಕಟರಮಣಪ್ಪ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಬೂತ್ ಮಟ್ಟದಲ್ಲಿ ಪ್ರಚಾರ ನಡೆಸಿ ಹೆಚ್ ವಿ ವೆಂಕಟೇಶ್ ಗೆಲ್ಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ನಗರ ಬ್ಲಾಕ್ ಅಧ್ಯಕ್ಷ ಬಾಬು ಮಾತನಾಡಿ ನಲವತ್ತೈದು ಸಾವಿರ ಮತದಾರರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿದ್ದಾರೆ ಒಬ್ಬರು ತಮ್ಮ ಮತದ ಜೊತೆಗೆ ಮತ್ತೊಬ್ಬರ ಮತ ಹಾಕಿಸಿದರೆ ಕಾಂಗ್ರೆಸ್ ತಾಲ್ಲೂಕಿನಲ್ಲಿ ಅಧಿಕಾರ ಬರುತ್ತದೆ ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕೆಂದು ಹೇಳಿದರು.

ಜಿ ಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ‌ಮಾತನಾಡಿ.
ಕೆ ಎಂ ತಿಮ್ಮರಾಯಪ್ಪ ನಾನು ಬಡವ ಬಡವ ಎನ್ನುತಲೆ ದುಂಡುಗಾಗುತ್ತಿದ್ದಾರೆ.ಜೆಡಿಎಸ್ ಕಾರ್ಯಕರ್ತರು,ಹಾಗೂ ಸಾರ್ವಜನಿಕರಿಗೆ ಮಂಕು ಬುದ್ದಿ ಎರಚಿ ರಾಜಕಾರಣ ಮಾಡುತ್ತಿದ್ದಾರೆ.ರಾಜಕಾರಣದಿಂದ ಮಾಡಿದ ಹಣವನ್ನು ಸಹ ಜನರ ಕಷ್ಟಗಳಿಗೆ ಬಳಸುತ್ತಿಲ್ಲ .ಕರೋನ ಕಾಲದಲ್ಲಿ ಮಾಜಿ ಶಾಸಕರು ದೇಣಿಗೆ ಎತ್ತಿ ಸಹಾಯ ಮಾಡುತ್ತಾರೆ ಎಂದರೆ ಜನರ ಬಗ್ಗೆ ಎಷ್ಟು ವಿಶ್ವಾಸ ಇದೇ ಎಂದು ಜನ ಮನವರಿಕೆ ಮಾಡಿಕೋಳ್ಳಿ ಮಗನಿಗೆ ಒಂದು ಕೋಟಿ ಕೊಟ್ಟು ವೈದ್ಯಕೀಯ‌ ಪದವಿಗೆ ಸೇರಿಸುತ್ತಾರೆ ಜನರ ಕಷ್ಟಗಳಿಗೆ ಸಹಾಯ ಮಾಡಲು ಹಣವಿಲ್ಲವೇ ಎಂದು ವಾಗ್ದಳಿ ಮಾಡಿದ ವೆಂಕಟೇಶ್ ಜೆಡಿಎಸ್ ಕಣ್ಣಿರಿಗೆ ಮಾನ್ಯತೆ ನೀಡಬೇಡಿ ಎಂದು ಹೇಳಿದರು.

ತಾಲ್ಲೂಕಿನ ಹಿರಿಯರನ್ನು ಕಡೆಗಣಿಸಲ್ಲ ಪ್ರತಿ ಹಳ್ಳಿಯಲ್ಲೂ ಯುವ ಕಾರ್ಯಕರ್ತರ ನೇತೃತ್ವದಲ್ಲಿ ಈ ಬಾರಿ ಚುನಾವಣೆ ನಡೆಸಲು ತಿರ್ಮಾನಿಸಿದೇವೆ ಎಂದು ಹೇಳಿದ ವೆಂಕಟೇಶ್, ಮುಂದಿನ ದಿನದಲ್ಲಿ ತಾಲ್ಲೂಕಿನಲ್ಲಿ ಹತ್ತು ಸಾವಿರ ಉದ್ಯೋಗ ಸೃಷ್ಟಿಸಲು ಗಾರ್ಮೆಂಟ್ಸ ನಿರ್ಮಿಸವುದಾಗಿ ತಿಳಿಸಿದರು.

ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಾಂಜಿನಪ್ಪ,ಮಾಜಿ‌ಪುರಸಭೆ ಅಧ್ಯಕ್ಷೆ ಸುಮ ಅನಿಲ್ ಕುಮಾರ್,ಐಟಿ ಘಟಕದ ಯುವ ಮುಖಂಡರಾದ ಭರತ್ ಪಾಳೇಗಾರ,ನಜೀರ್ ಮಾತನಾಡಿದರು.

ಕಾರ್ಯಕ್ರಮ ಕ್ಕೂ ಮುನ್ನ ಚಳ್ಳಕೆರೆ ಕ್ರಾಸ್ ನಿಂದ ಎಸ್ ಎಸ್ ಕೆ ಬಯಲು ರಂಗಮಂದಿರದವರೆಗೆ ಬೈಕ್ ರ್ಯಾಲಿ ನಡೆಸಿದರು.

ಕಾರ್ಯಕ್ರಮದಲ್ಲಿ ,ಪುರಸಭಾ ಸದಸ್ಯರಾದ ರಾಜೇಶ್,ರವಿ, ಗ್ರಾಮೀಣ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ಉಷರಾಣಿ ಮಾಜಿ ಪುರಸಭೆ ಸುಮ , ಅನಿಲ್,ವೇಲ್ ರಾಜು , ವೀಣಾ ಅಂಜನಕುಮಾರ್, ಗುತ್ತಿಗೆದಾರ ಶಂಕರ್ ರೆಡ್ಡಿ, ಮುಖಂಡರಾದ ಬತ್ತಿನೇನಿ ನಾನಿ,ಪುರಸಭೆ ಅಧ್ಯಕ್ಷರಾದ ಧನಲಕ್ಮೀ ,ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸುಜೀತ್ ಕುಮಾರ್. ಎಸ್ ಸಿ ಘಟಕದ ಅಧ್ಯಕ್ಷ ಚಿನ್ನಮ್ಮನಹಳ್ಳಿ ಶ್ರೀರಾಮ,ಮದನ್ ರೆಡ್ಡಿ, ತಿಪ್ಪೇಸ್ವಾಮಿ, ಅನಿಲ್ ಕುಮಾರ್ ,ಆರ್ ಕೆ ನಿಸ್ಸಾರ್ ,ಬಿಂದು ಮಾಧವರಾವ್ ಮತ್ತಿತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker