ತಿಪಟೂರು : ಕಮಲದಿಂದ ಕಮಲವೇ ಅರಳುತ್ತದೆ, ಕಮಲ ಅರುಳುವುದು ಬಿಜೆಪಿಗೆ ಮಾತ್ರ ಅವಶ್ಯಕತೆಯಲ್ಲ ಇಡೀ ಕರ್ನಾಟಕ ಪುಣ್ಯ ಭೂಮಿಯ ಜನತೆಗೆ ಹಾಗೂ ಅಭಿವೃದ್ದಿಗೆ ಏಕೈಕ ಮಾರ್ಗವಾಗಿದೆ. ಕಾಂಗ್ರೆಸ್ ಪಕ್ಷ ಎಂದರೆ ವಂಶ ಪಾರಂಪರ್ಯದ ಪಕ್ಷವಾಗಿದ್ದು, ಮೊದಲು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಆಗಿದ್ದು ಬಿಜೆಪಿ ಎಂದರೆ ಕೇವಲ ಅಭಿವೃದ್ಧಿಯೇ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು.
ನಗರದ ಬಂಡಿಹಳ್ಳಿ ಗೇಟ್‌ನಿಂದ ಸಿಂಗ್ರಿ ನಂಜಪ್ಪ ವೃತ್ತದವರಗೆ ಶನಿವಾರ ಬಿಜೆಪಿ ಜನ ಸಂಕಲ್ಪ ರಥ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿಯ ರೋಡ್ ಶೋ ಇಂದು ಜನ ಸಭೆಯಾಗಿ ಪರಿವರ್ತನೆಯಾಗಿದೆ. ಪ್ರಧಾನ ಮಂತ್ರಿಯವರ ಗ್ರಾಮೀಣ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ 4 ಕೋಟಿ ಜನರು ಫಲಾನುಭವಿಗಳಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂ ನಂತೆ ದೇಶದ 11 ಕೋಟಿಗೂ ಹೆಚ್ಚು ರೈತರಿಗೆ ಹಾಗೂ ಕರ್ನಾಟಕದಲ್ಲಿ 57 ಲಕ್ಷ ರೈತರಿಗೆ ಯೋಜನೆಯೂ ಲಾಭಧಾಯಕವಾಗಿದೆ. ಪ್ರಧಾನ ಮಂತ್ರಿ ಸ್ವಸ್ತ ಭಾರತ್ ಅಭಿಯಾನದಲ್ಲಿ 12 ಕೋಟಿಗೂ ಅಧಿಕ ಶೌಚಾಲಯ ನಿರ್ಮಾಣ ಮಾಡಿದ್ದು, ಮಹಿಳೆಯರು ಬಯಲು ಬಹಿರ್ದಸೆಯಿಂದ ಮುಕ್ತವಾಗಿ ಗೌರವಯುತ ಜೀವನ ಮಾಡುವಂತಾಗಿದೆ. ಕರ್ನಾಟಕದಲ್ಲಿ 27 ಲಕ್ಷ ಜನರು ಫಲಾನುಭವಿಗಳಾಗಿದ್ದಾರೆ. ಗ್ರಾಮೀಣ ಭಾಗದ ಬಡವರು, ನಿರ್ಗತಿಕರು, ದಲಿತರು, ಶೋಷಿತರು, ಆದಿವಾಸಿ ಜನರನ್ನು ಒಂದು ಗೂಡಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಕರ್ನಾಟಕದಲ್ಲಿ ಹೈವೆಗಳು, ಎಕ್ಸ್ಪ್ರೆಸ್ ವೇ, ಚತುಷ್ಪಥ ರಸ್ತೆ, ರೈಲ್ವೇ ಹಳಿಗಳು, ಗ್ರಾಮೀಣ ಭಾಗಕ್ಕೆ ಇಂಟರ್ ನೆಟ್ ತಲುಪಿದ್ದು ನರೇಂದ್ರ ಮೋದಿಯೂ ಸಾಮಾನ್ಯ ಜನರನ್ನು ಸದೃಢರನ್ನಾಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರ 70 ವರ್ಷದ ಅವಧಿಯಲ್ಲಿ 79 ಏರ್ ಪೋರ್ಟ್ಗಳು ಮಾತ್ರ ಆಗಿದ್ದು, 9 ವರ್ಷದಲ್ಲಿ 74 ಏರ್ ಪೋರ್ಟ್ಗಳನ್ನು ನಿರ್ಮಾಣ ಮಾಡಿದ್ದು ಕರ್ನಾಟಕದಲ್ಲಿ 11 ಏರ್ ಪೋರ್ಟ್ಗಳು ನಿರ್ಮಾಣವಾಗುತ್ತಿವೆ.
ಕೆಲ ದಿನಗಳ ಹಿಂದೆ ಈಶಾನ್ಯ ಭಾರತದ ನಾಗಾಲ್ಯಾಂಡ್, ತ್ರಿಪುರ, ಮೇಘಾಲಯದಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಅಧಿಕಾರಕ್ಕೆ ಬಂದವು. ಕಾಂಗ್ರೆಸ್‌ಗೆ ಸಂಪೂರ್ಣ ನಿರ್ಣಾಮದ ಹಂತಕ್ಕೆ ಬಂದಿದೆ. ರಾಹುಲ್ ಗಾಂಧಿ ಇಂಗ್ಲೆಂಡ್ ನಲ್ಲಿ ಭಾರತದ ಪ್ರಭಾಪ್ರಭುತ್ವಕ್ಕೆ ಅಪಾಯ ಇದೆ ಎನ್ನುತ್ತಾರೆ. ಚುನಾವಣೆ ಸೋತರೆ ಪ್ರಜಾಪ್ರಭುತ್ವ ಸರಿಯಿಲ್ಲ ಹಾಗೂ ಇವಿಎಂ ಸರಿಯಿಲ್ಲ ಎಂದು ದೂರುತ್ತಾರೆ. ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಇಂಗ್ಲೆಂಡ್ ನಲ್ಲಿ ಅಮೇರಿಕಾ ಮತ್ತು ಯೋರೋಪ್ ರಾಷ್ಟçಗಳ ಸಹಾಯವನ್ನು ಕೇಳುತ್ತಿದ್ದಾರೆ. ಇಂತಹವರನ್ನು ರಾಜಕಾರಣದಲ್ಲಿ ಉಳಿಸಬೇಕಾ ? ಉತ್ತರ ನೀಡಬೇಕು ಅಲ್ಲವೇ ? ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಿ ಮನೆಯಲ್ಲಿ ಕೂರಿಸಿ ಇದೇ ಇವರಿಗೆ ನೀಡುವ ಸರಿಯಾದ ಉತ್ತರವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಅಧಿಕ ಸ್ಥಾನ ಪಡೆದು ಅಧಿಕಾರ ಹಿಡಿಯಲಿದೆ. ರಾಜ್ಯದಲ್ಲಿ ಕೆಲವರು ತಿರುಕನ ಕನಸು ಕಾಣುತ್ತಿದ್ದು ನಾವೇ ಮುಖ್ಯಮಂತ್ರಿ ಆಗಲಿದ್ದೇವೆ ಎಂಬ ಭ್ರಮೆಯಲ್ಲಿ ಇದ್ದಾರೆ. ಬಿಜೆಪಿ ರ್ಯಾಲಿಯಲ್ಲಿ ಸೇರುವ ಜನರನ್ನು ನೋಡಿ ಕಾಂಗ್ರೆಸ್ ಕಂಗಾಲಾಗಿದೆ. ತಿಪಟೂರಿನಲ್ಲಿ ನಾಗೇಶ್ ಜನಪ್ರಿಯತೆಗೆ ರ್ಯಾಲಿ ಸಾಕ್ಷಿಯಾಗಿದ್ದು ಬರುವ ಚುನಾವಣೆಯಲ್ಲಿ ನಾಗೇಶ್ ವಿರುದ್ಧ ಯಾರೂ ಸ್ಫರ್ಧೆ ಮಾಡಲು ಸಾಧ್ಯವಿಲ್ಲದಷ್ಟು ನಂಬಿಕೆ ತೋರಿಸಿದ್ದಾರೆ. ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಪ್ರಮುಖ ಕಾರಣವಾಗಿದೆ. ತುಮಕೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ರಾಜ್ಯದ ಅಧಿಕಾರ ಹಿಡಿಯಲು ತಾವುಗಳು ಕೊಡುಗೆ ನೀಡಬೇಕು. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಧಿಕಾರ ಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಪಿ.ಸಿ.ಮೋಹನ್, ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್,ಮುಖಂಡರಾದ ಎಂ.ಬಿ.ನAದೀಶ್, ಸೊಗಡು ಶಿವಣ್ಣ, ಎಂ.ಡಿ.ಲಕ್ಷ್ಮೀನಾರಾಯಣ್, ಸಚ್ಚಿದಾನಂದ ಮೂರ್ತಿ ಇದ್ದರು.