ಕೊರಟಗೆರೆಜಿಲ್ಲೆತುಮಕೂರುರಾಜಕೀಯರಾಜ್ಯ

ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ…ಸಿ.ಎಂ ಮತ್ತು ಕಂದಾಯ ಸಚಿವರಿಂದ ರೋಡ್ ಶೋ

ಕಾಂಗ್ರೆಸ್ ಪಕ್ಷವು ಮುಳುಗುವ ಹಡಗು: ಬಸವರಾಜು ಬೊಮ್ಮಾಯಿ

ಕೊರಟಗೆರೆ : ಸಂಸತ್ ಭವನದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡಿದ್ರೇ ರಾಹುಲ್‌ಗಾಂಧಿ ಹೊರಗೇ ಓಡಿಹೋಗ್ತಾರೇ.. ಇಂಗ್ಲೇಡ್ ಮತ್ತು ಇಟಲಿಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡ್ತಾರೇ.. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು.. ಮಹಾರಾಷ್ಟç, ಗುಜರಾತ್, ಹರಿಯಾಣ ಸೇರಿದಂತೆ ಉತ್ತರ ಭಾರತದಲ್ಲಿ ಕಾಂಗ್ರೆಸ್ ಈಗಾಗಲೇ ಮುಳುಗಿದೆ ಎಂದು ಸಿಎಂ ಬಸವರಾಜು ಬೊಮ್ಮಾಯಿ ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಗುರುವಾರ ಏರ್ಪಡಿಸಲಾಗಿದ್ದ ವಿಜಯ ಸಂಕಲ್ಪ ರಥಯಾತ್ರೆಯ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಜಿ ಡಿಸಿಎಂ ಪರಮೇಶ್ವರನ್ನಾ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊರಟಗೆರೆಗೆ ಬಂದು ಸೋಲಿಸ್ತಾರೇ.. ಅದರ ಬಗ್ಗೆ ನಮಗೇ ಚಿಂತೆಯೇ ಬೇಡ. ಕಾಂಗ್ರೆಸ್ ಪಕ್ಷದ ನಾಯಕರು ನೀಡುತ್ತಿರೋದು ಗ್ಯಾರಂಟಿ ಕಾರ್ಡ್ ಅಲ್ಲ ಅದು ಬರೀ ವಿಸಿಟಿಂಗ್ ಕಾರ್ಡು ಮಾತ್ರ. ಅವರೇ ಇನ್ನೂ ಗ್ಯಾರಂಟಿ ಇಲ್ಲ ಇನ್ನೂ ಕಾರ್ಡಿಗೆ ಬೆಲೆ ಇದೀಯಾ. ಕಾಂಗ್ರೆಸ್ ನಾಯಕರ ಸುಳ್ಳು ಭರವಸೆಗೆ ಮರುಳಾಗಬೇಡಿ ಎಂದು ತಿಳಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ಸಿದ್ದರಾಮಯ್ಯ ಸಿಎಂ ಆಗಿದ್ರು ಆವಾಗ ಪ್ರತಿಮನೆಗೆ 2ಸಾವಿರ ಕೋಡ್ಲಿಲ್ಲ. ಡಿ.ಕೆ.ಶಿವಕುಮಾರ್ ಇಂಧನ ಸಚಿವ ಆಗಿದ್ದಾಗ 200ಯುನಿಟ್ ವಿದ್ಯುತ್ ಕೋಡ್ಲಿಲ್ಲ ಈಗ ಸುಳ್ಳು ಭರವಸೆ ನೀಡ್ತಿದ್ದಾರೆ. 60ವರ್ಷದಿಂದ ಕಾಂಗ್ರೆಸ್ ಪಕ್ಷ ಮಾಡದಿರುವ ಅಭಿವೃದ್ದಿಯನ್ನ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾಡಿದೆ. ಮನೆಹಾಳು ಮಾಡೋ ಕಾಂಗ್ರೆಸ್ ಪಾರ್ಟಿಯ ಮಾತು ನಂಬಬೇಡಿ ಎಂದು ಹೇಳಿದರು.

ಕೊರಟಗೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ:-
ವಿಜಯ ಸಂಕಲ್ಪ ರಥಯಾತ್ರೆಗೂ ಮೊದಲು ಕನಕದಾಸ ಪ್ರತಿಮೆಗೆ ಸಿಎಂ ಬಸವರಾಜು ಬೊಮ್ಮಾಯಿ ಪೂಜೆ ಸಲ್ಲಿಸಿದರು. ಸಿಎಂಗೆ ನೂರಾರು ಜನ ಮಹಿಳೆಯರು ಪೂರ್ಣಕುಂಬ ಕಳಸದ ಸ್ವಾಗತ ಕೂರಿದರು. ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದಿಂದ ತೆರೆದ ವಾಹನದಲ್ಲಿ ಸಿಎಂ, ಕಂದಾಯ ಸಚಿವ, ಶಿಕ್ಷಣ ಸಚಿವ ಸಾವಿರಾರು ಜನ ಕಾರ್ಯಕರ್ತರ ಜೊತೆ ರೂಡ್ ಶೋ ನಡೆಸಿದರು. ಕೊರಟಗೆರೆ ಪಟ್ಟಣದುದ್ದಕ್ಕೂ ಬಿಜೆಪಿ ಭಾವುಟ, ಪ್ಲೇಕ್ಸ್ ಹಿಡಿದು ಬಿಜೆಪಿ ಪಕ್ಷದ ಪರವಾಗಿ ಜಯಘೋಷ ಕೂಗುವ ಮೂಲಕ ಕೊರಟಗೆರೆ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಶಕ್ತಿ ಪ್ರದರ್ಶನ ನಡೆಯಿತು.

ಬ್ಯಾನರ್ ಕಟ್ಟಲು ಆಕಾಂಕ್ಷಿಗಳ ಪೈಪೋಟಿ:-
ವಿಜಯ ಸಂಕಲ್ಪ ರಥಯಾತ್ರೆಯ ಸ್ವಾಗತಕ್ಕಾಗಿ ಬ್ಯಾರನ್ ಕಟ್ಟುವ ವಿಚಾರಕ್ಕೆ ಇಬ್ಬರು ಆಕಾಂಕ್ಷಿತ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆದಿದೆ. ಸಿಎಂ ಬೇಟಿಗೂ ಮುನ್ನವೇ ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಗಳಾದ ಬಿ.ಹೆಚ್.ಅನಿಲ್‌ಕುಮಾರ್ ಮತ್ತು ಡಾ.ಲಕ್ಷ್ಮೀಕಾಂತ್ ಹಾಗೂ ಬೆಂಬಲಿಗರ ನಡುವೆ ಬ್ಯಾನರ್ ಕಟ್ಟುವ ಜಾಗದ ವಿಷಯಕ್ಕೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.

ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಶಿಕ್ಷಣ ಸಚಿವ ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಮಂಜುನಾಥ, ಕೊರಟಗೆರೆ ಉಸ್ತುವಾರಿ ಅಶ್ವತ್ಥನಾರಾಯಣ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಪವನಕುಮಾರ್, ಯುವಧ್ಯಕ್ಷ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಗುರುಧತ್, ಮುಖಂಡರಾದ ವೆಂಕಟಾಚಲಯ್ಯ, ಹನುಮಂತರಾಜು, ಸಂಜೀವರಾಜು, ವಿಶ್ವನಾಥ್, ಗಿರೀಶ್, ದಾಸಾಲುಕುಂಟೆ ರಘು, ದಯಾನಂದ್, ಚೇತನ್, ನಟರಾಜು ಸೇರಿದಂತೆ ಇತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker