ಯುವಜನಾಂಗ ಬೌದ್ಧಿಕ ಶಕ್ತಿಯ ಜೊತೆಗೆ ದೈವಭಕ್ತಿಯನ್ನು ಪಡೆದುಕೊಳ್ಳಬೇಕು : ಶ್ರೀಸಿದ್ದರಾಮನಂದಪುರಿ ಮಹಾಸ್ವಾಮಿ
ಶ್ರೀದುರ್ಗಾಂಬಿಕಾ ದೇವಿಯ ವಾರ್ಷಿಕೋತ್ಸವ ಸಮಾರಂಭ
ತುಮಕೂರು : ಇತ್ತೀಚಿಗೆ ಯುವ ಜನಾಂಗ ಬೌದ್ಧಿಕ ಶಕ್ತಿಯನ್ನೊಂದು ಒಂದೇ ನಂಬಿ ಪೂರ್ಣ ಸಾಧನೆ ಮಾಡಲು ಅಸಾಮರ್ಥ್ಯರಾಗಿದ್ದಾರೆ ಯೌವನ್ವದಲ್ಲಿ ದೈಹಿಕ ಶಕ್ತಿ ಅತ್ಯಂತ ದೊಡ್ಡ ಪ್ರಮಾಣದಲ್ಲಿರುತ್ತದೆ ಇತಂಹ ದೈಹಿಕ ಶಕ್ತಿಯೆಂದೇ ಸಾಧನೇ ಪ್ರಮುಖ ಸಂಪತ್ತು ಎಂದು ಭಾವಿಸಿದರೆ ತಪ್ಪು ಆಗುತ್ತದೆ. ದೈಹಿಕ ಶಕ್ತಿಯ ಜೊತೆ ದೈವ ಶಕ್ತಿಯೂ ಸಹ ಬೇರೆಯಬೇಕು, ದೈವಶಕ್ತಿಯನ್ನು ಯಾರು ನಂಬಿ ಕೆಲಸ ಮಾಡುತ್ತೋರೋ ಅವರಲ್ಲಿ ಆತ್ಮಶಕ್ತಿ ಜರುಗುರಾಗುತ್ತಾರೆ. ಆತ್ಮಶಕ್ತಿಯ ಪ್ರತಿರೂಪವೇ ಇಚ್ಚಶಕ್ತಿ, ಈ ಇಚ್ಚಶಕ್ತಿಯನ್ನು ಸಾಮರ್ಥ್ಯವಾಗಿ ಬೆಳೆಸಿಕೊಂಡು ಶ್ರೀದೇವಿ ಶಿಕ್ಷಣ ಸಂಸ್ಥೆ ಕಟ್ಟಿದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಇತಿಹಾಸವನ್ನು ನಿರ್ಮಿಸಿದ್ದಾರೆ ಎಂದು ತಿಂಥಣಿಯ ಶ್ರೀ ಕನಕ ಗುರು ಪೀಠದ ಪರಮ ಪೂಜ್ಯ ಶ್ರೀಸಿದ್ದರಾಮನಂದಪುರಿ ಮಹಾಸ್ವಾಮಿರವರು ತಿಳಿಸಿದರು.
ತುಮಕೂರಿನ ಶಿರಾ ರಸ್ತೆಯಲ್ಲಿರುವ ಶ್ರೀದೇವಿ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿರುವ ಶ್ರೀ ಆದಿಶಕ್ತಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಹಾಗೂ ಶ್ರೀ ಶಂಭುಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಫೆ.25 ರಂದು ವಾರ್ಷಿಕೋತ್ಸವ ಸಮಾರಂಭವನ್ನು ಶ್ರೀದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಮಾತನಾಡುತ್ತಾ ಶ್ರೀದುಗಾಂಬಿಕಾದೇವಿಯ ಈ ಸ್ಥಳ ನೂರಾರು ವರ್ಷಗಳಿಂದ ಇಲ್ಲಿನ ದೇವತೆ ಶ್ರೀ ಉಚ್ಚಂಗಮ್ಮನ ತುಳಜಾಭವಾನಿ ಆವಾಸ ಸ್ಥಾನ. ಆಕೆಯ ಸುದೀರ್ಘ ಯೋಗ ನಿದ್ರೆಯಲ್ಲಿ ನೆಲೆಸಿದ್ದಳು. ಭಕ್ತರು ಪ್ರಾರ್ಥನೆಗೊಲಿದು, ಶ್ರೀದುರ್ಗಾಂಬಿಕಾ ದೇವಿಯಾಗಿ ಇದೀಗ ನಮ್ಮಲ್ಲಿ ಪ್ರತಿಷ್ಠಾಪನೆಗೊಂಡಿರುವಳು. ಬ್ರಾಹ್ಮಿ ಮೂಹೂರ್ತದಲ್ಲಿ ಅಭ್ಯಂಜನ ಸ್ನಾನದಿಂದ ಬೆಳಿಗ್ಗೆಯಿಂದ ಗಣಪತಿ ಪೂಜೆ, ಕಲಾ ಹೋಮ, ಆಶ್ಲೇಷ ಬಲಿ ಪೂಜೆಯೊಂದಿಗೆ ಗುಳೂರಿನ ರವಿಶರ್ಮ ತಂಡದವರಿಂದ ಧಾರ್ಮಿಕ ವಿಧಿಗಳು ಕಾರ್ಯಕ್ರಮಗಳು ನಡೆಯಿತು ಎಂದು ತಿಳಿಸಿದರು.
ತುಮಕೂರಿನ ಡಿ.ಎಂ. ಪಾಳ್ಯದ ರೇವಣ್ಣ ಸಿದ್ದೇಶ್ವರ ಶಾಖಾಮಠದ ಬಿಂದುಶೇಖರ್ ಒಡೆಯರ್‌ರವರು ಮಾತನಾಡುತ್ತಾ ಮನುಷ್ಯ ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಧಾರ್ಮಿಕ ನಂಬಿಕೆಯನ್ನು ಬೆಳೆಸಿಕೊಂಡು ಅದರ ಮೂಲಕ ಮಾನವೀಯ ಗುಣಗಳನ್ನು ತನ್ನಲ್ಲಿ ರೂಢಿಸಿಕೊಳ್ಳಬೇಕು ಕಾರುಣಿಯಿಂದ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಡಾ.ಎಂ.ಆರ್. ಹುಲಿನಾಯ್ಕರ್‌ರವರು ಶ್ರೀದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀದುರ್ಗಾಂಬಿಕಾದೇವಿ ಪ್ರತಿಷ್ಠಾಪನೆಯಾದ ಮೇಲೆ ಅನೇಕ ಸಾಕಾತ್ಮಕ ಬೆಳವಣಿಗೆಗಳು ನಡೆಸಿವೆ ವೈದ್ಯಕೀಯ ಶಾಸ್ತ್ರ ದಲ್ಲಿ ಔಷಧದ ಜೊತೆಗೆ ವ್ಯಕ್ತಿಯ ಮಾನಸಿಕ ಸ್ಥಿತಿಕೊಂಡ ರೋಗಗಳ ನಿರ್ವಾಹಣೆಗೆ ಸಹಾಯಕವಾಗುತ್ತದೆ ಅನೇಕ ರೋಗಿಗಳು ದೈವಭಕ್ತಿಯಿಂದ ರೋಗ ಶ್ರಮಣ ಶಕ್ತಿಯನ್ನು ಪಡೆದುಕೊಂಡಿರುತ್ತಾರೆ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಂಬಿಕಾ ಟ್ರಸ್ಟ್ನ ದೇವಿಯ ಮಾನ್ಯೇಜಿಂಗ್ ಟ್ರಸ್ಟಿಯಾದ ಶಾಂತಾದುರ್ಗಾದೇವಿ ರವರು ಮಾತನಾಡುತ್ತಾ ನಂಬಿಕೆ ಮಾನವ ಕುಲವನ್ನು ಇಂದಿಗೂ ಮುನ್ನಡೆಸುತ್ತಿದೆ. ಎಲ್ಲರೂ ಏಕಮನದಿಂದ ಶ್ರೀದೇವಿಯನ್ನು ಪ್ರಾರ್ಥಿಸಿ ಈ ಸಂಕಷ್ಟದಿಂದ ದೂರವಾಗಲಿ ಎಂದು ತಿಳಿಸಿದರು.
ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್. ಹುಲಿನಾಯ್ಕರ್‌ರವರು ಮಾತನಾಡುತ್ತಾ ಆಧಾತ್ಮ ಮತ್ತು ವಿಜ್ಞಾನ ಪರಸ್ಪರ ಪೂರಕವಾಗಿರುತ್ತದೆ. ಆಧ್ಯಾತ್ಮಕ ವ್ಯಕ್ತಿಗಳು ಕೂಡ ಶ್ರೇಷ್ಠ ವಿಜ್ಞಾನಿಗಳೇ ಆಗಿರುತ್ತಾರೆ ಅವರಲ್ಲಿ ವೈಜ್ಞಾನಿಕ ಮನೋಭಾವ ಮೊದಲಿನಿಂದಲೇ ರೂಢಿಯಲ್ಲಿರುತ್ತದೆ. ಉದಾಹರಣೆಗೆ ಸ್ವಾಮಿ ವಿವೇಕಾನಂದರವರು ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನವನ್ನು ಎಲ್ಲಿ ಇರುತ್ತದೆಯೋ ಅಲ್ಲಿ ಸಂಗ್ರಹಿಸುವ ಬುದ್ದಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ಆಸ್ಪತ್ರೆಯ ನೇತ್ರತಜ್ಞರಾದ ಡಾ.ಲಾವಣ್ಯ, ಶ್ರೀದೇವಿ ಚಾರಿಟಬಲ್ ಟ್ರಸ್ಟಿನ ಶ್ರೀಮತಿ ಅಂಬಿಕಾ ಎಂ ಹುಲಿನಾಯ್ಕರ್, ಡಾ.ಎಂ.ಎಚ್.ಮನೋನ್ಮಣಿ, ಡಾ.ಕೆ.ಆರ್.ಕಮಲೇಶ್, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.