ಪಾವಗಡ : 2023 ವಿಧಾನ ಸಭಾ ಚುನಾವಣೆಯಲ್ಲಿ ಪಾವಗಡ ಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ನೇರಳಕು೦ಟೆ ನಾಗೇಂದ್ರಕುಮಾರ್ ಅವರನ್ನು ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನರೆಡ್ಡಿ ಘೋಷಣೆ ಮಾಡಿದ್ದಾರೆ.
ಪಾವಗಡ ಪಟ್ಠಣದಲ್ಲಿ ಗುರುಭವನ ಪಕ್ಕದ ಮೈಧಾನದಲ್ಲಿ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಜನಾರ್ದನರೆಡ್ದಿ ರವರು ಪಾವಗಡ ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಒಬ್ಬರ ನಂತರ ಒಬ್ಬರು ಅಧಿಕಾರದಲ್ಲಿದ್ದ ರಾಯಪ್ಪ (ತಿಮ್ಮರಾಯಪ್ಪ) ರಮಣಪ್ಪ(ವೆಂಕಟರಮಣಪ್ಪ) ರವರಿಂದ ಯಾವುದೆ ಅಬಿವೃದ್ದಿ ಇಲ್ಲದೆ ಜನರು ಬೇಸತ್ತು ನಮ್ಮ ಪಕ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಪಕ್ಷದ ಆಭ್ಯರ್ಥಿ ಯಾದ ನಾಗೇಂದ್ರಕುಮಾರ್ ರವರನ್ನು ಗೆಲ್ಲಿಸಿದರೆ ಎಲ್.ಕೆ.ಜಿ.ಯಿಂದ ಪಿ.ಜಿ.ರವರೆಗು ತಮ್ಮ ಮಕ್ಕಳ ವಿಧ್ಯಾಬ್ಯಾಸದ ಖರ್ಚುನ್ನು ಅವರ ತಾಯಂದಿರ ಖಾತೆಗೆ ಹಾಕುತ್ತೇವೆ ಎಂದರು.
ಹಾಗೂ ಪ್ರತಿಯೊಬ್ಬರ ರೈತರ ಖಾತೆಗೆ 15000 ರುಪಾಯಿಗಳನ್ನು ಹಾಕಲಾಗುತ್ತದೆ.ಮತ್ತು ಪ್ರತಿಯೊಬ್ಬ ರೈತರಿಗೊ ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದರು.
ಪ್ರತಿಯೊಬ್ಬ ನಿರುಧ್ಯೋಗಿಗಳಿಗೆ ತಿಂಗಳಿಗೆ 2500 ರುಪಾಯಿಗಳನ್ನು ಅವರ ಖಾತೆಗೆ ಹಾಕುತ್ತೇವೆ.ಮುಂದಿನ ಚುನಾವಣೆಯಲ್ಲಿ ವೆಂಕಟರಮಣಪ್ಪ ಮತ್ತು ತಿಮ್ಮರಾಯಪ್ಪ ಸೋಲುವುದು ಖಚಿತ. ಸೋತು ಮನೆಯಲ್ಲಿ ಮಲಗುವ ಪರಿಸ್ತಿತಿಬರುತ್ತದೆ ಎಂದರು.
ಕೆ.ಆರ್.ಪಿ.ಪಕ್ಷದ ಅಭ್ಯರ್ಥಿ ನಾಗೇಂದ್ರಕುಮಾರ್ ಮಾತನಾಡಿ ಪಾವಗಡ ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಒಂದಾಗಿ ರಾಜಕೀಯ ಮಾಡುತ್ತಿದ್ದು ಪಾವಗಡ ತಾಲ್ಲೂಕಿನಲ್ಲಿ ಕೆಲವು ಸರ್ಕಾರಿ ಪಾಠಶಾಲೆಗಳಲ್ಲಿ ಮರದ ಕೆಳಗಡೆ ಕುಳಿತುಕೂಂಡು ಪಾಠ ಕೇಳುವ ಪರಿಸ್ಥಿತಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 6000 ಜನರು ಸೇರಿದ್ದರು.ಕೆ.ಆರ್.ಪಿ.ಪಕ್ಷದ ಮುಖಂಡರಾದ ಚನ್ನಕೇಶವರೆಡ್ದಿ.ಕರಿಯಣ್ಣ.ಜೈಶಂಕರರೆಡ್ಡಿ.ಹೇಮಲತ.ನಲಿಗನಹಳ್ಲಿಮಂಜುನಾಥ.ಕಿರಣ್.ಶಂಕರ ರೆಡ್ಡಿ ಇನ್ನು ಮುಂತಾದವರು ಭಾಗವಹಿಸಿದ್ದರು