ಕೊರಟಗೆರೆಜಿಲ್ಲೆತುಮಕೂರುರಾಜಕೀಯರಾಜ್ಯ

ಕೊರಟಗೆರೆ ಕ್ಷೇತ್ರದ‌ ಸಮಗ್ರ ಅಭಿವೃದ್ದಿಗೆ 2573.68 ಕೋಟಿ ಅನುದಾನ ಬಳಕೆ : ಐದು ವರ್ಷದ ಸಾಧನೆಯ ಹೆಜ್ಜೆ ಗುರುತು ಪುಸ್ತಕ ಬಿಡುಗಡೆ : ಡಾ.ಜಿ.ಪರಮೇಶ್ವರ್

ತುಮಕೂರು : ಕಳೆದ ಐದು ವರ್ಷಗಳಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಕುಡಿಯುವ ನೀರು, ರಸ್ತೆ,ಆರೋಗ್ಯ,ವಸತಿ ನಿರ್ಮಾಣ ಹಾಗೂ ಎತ್ತಿನ ಹೊಳೆ ಯೊಜನೆಯೂ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ 2573.67 ಕೋಟಿ ರೂಗಳ ಅನುದಾನದ ತಂದು 4080 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ
ಇಂದು ತಮ್ಮ ಐದು ವರ್ಷಗಳ ಸಾಧನೆಯ ದಾಖಲೆಗಳನ್ನು ಒಳಗೊಂಡ ಹೆಜ್ಜೆ ಗುರುತು ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು,ಇದರಲ್ಲಿ ವಸತಿ ಯೋಜನೆಗಾಗಿ 95.75 ಕೋಟಿ,ಗಂಗಾ ಕಲ್ಯಾಣಕ್ಕೆ 1.53 ಕೋಟಿ, ಸಾಲ ಸೌಲಭ್ಯಕ್ಕೆ 5.76 ಕೋಟಿ,ಇತರೆ ಇಲಾಖೆಗಳಿಂದ 95.21 ಕೋಟಿ ನೀಡಲಾಗಿದೆ.ಇದುವರೆಗೂ 19501 ಜನರಿಗೆ ಸರಕಾರದ ಸೌಲಭ್ಯಗಳು ದೊರೆತಿವೆ.ಎತ್ತಿನ ಹೊಳೆ ಯೋಜನೆಯಡಿ 7 ಕಾಮಗಾರಿಗಳನ್ನು ಕೈಗೊಂಡು 1279.31 ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ.ಪ್ರತಿ ಗ್ರಾಮಪಂಚಾಯಿತಿ,ಪ್ರತಿ ಗ್ರಾಮಕ್ಕೂ ಒಂದಿಲೊAದು ಯೋಜನೆಯ ಮೂಲಕ ಅಭಿವೃದ್ದಿ ಕಾರ್ಯ ಗಳನ್ನು ಕೈಗೊಳ್ಳಲಾಗಿದೆ. ಈ ಸಾಧನೆಯ ಪುಸ್ತಕವನ್ನು ಪ್ರತಿ ಮನೆಗೆ ತಲುಪಿಸುವ ಕೆಲಸವನ್ನು ಮಾಡಲಿದ್ದೇನೆ ಎಂದರು.
2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಹಿನ್ನೇಲೆಯಲ್ಲಿ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರಕಾರ ರಚಿಸಲಾಯಿತು. ಕೊರಟಗೆರೆ ಜನರ ಆಶೀರ್ವಾದದಿಂದ ಸದರಿ ಸರಕಾರದಲ್ಲಿ ಉಪಮುಖ್ಯಮಂತ್ರಿಯAತಹ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವಂತಹ ಸೌಭಾಗ್ಯವನ್ನು ಕೊರಟಗೆರೆ ಕ್ಷೇತ್ರದ ಜನತೆ ಒದಗಿಸಿಕೊಟ್ಟರು. ಅದಕ್ಕಾಗಿ ಕೊರಟಗೆರೆ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸಾಧ್ಯವಾದಷ್ಟು ಮಟ್ಟಿಗೆ ಜನರ ನಿರೀಕ್ಷೆಗೆ ಅನುಗುಣವಾಗಿ ಸರಕಾರದಿಂದ ಅನುದಾನ ತಂದು, ಜನರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಸರಕಾರದ ಸವಲತ್ತು ಒದಗಿಸಲು ಶಕ್ತಿ ಮೀರಿ ಶ್ರಮಿಸಿರುವುದಾಗಿ ಡಾ.ಜಿ.ಪರಮೇಶ್ವರ್ ನುಡಿದರು.
ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಏಕಲವ್ಯ ಶಾಲೆ, ಮುರಾರ್ಜಿ ದೇಸಾಯಿ, ಇಂದಿರಾಗಾAಧಿ ವಸತಿಶಾಲೆ,ಅಂಬೇಡ್ಕರ್ ವಸತಿ ಶಾಲೆಯ ಮೂಲಕ ಸಾವಿರಾರು ಜನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದೇನೆ.ನಮ್ಮ ತಾಲೂಕಿನ ಏಕಲವ್ಯ ಶಾಲೆಯಲ್ಲಿ ಕಲಿತ ನಾಲ್ವರು ಮಕ್ಕಳು ಐಐಟಿಗೆ ವ್ಯಾಸಾಂಗ ಮಾಡಲು ಆಯ್ಕೆಯಾಗಿರುವುದು ಸಂತೋಷದ ವಿಚಾರವಾಗಿದೆ.ಜನರಿಗೆ ಮನೆ ಬಾಗಿಲಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸಲು ಸುಮಾರು 12.50 ಕೋಟಿ ವೆಚ್ಚದಲ್ಲಿ ತೋವಿನಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಲಾಗಿದೆ.ಇದರ ಜೊತೆಗೆ ಪಟ್ಟಣದಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ತೆರೆಯಲು ಪ್ರಸ್ಥಾವನೆ ಸಲ್ಲಿಸಿದ್ದು,ಮಂಜೂರಾತಿಯ ಹಂತದಲ್ಲಿದೆ.ಶುದ್ದ ಕುಡಿಯುವ ನೀರು ಒದಗಿಸಲು ಜಲಜೀವನ್ ಮೀಷನ್ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ಇದಕ್ಕೆ ಕುಡಿಯುವ ನೀರಿನ ಲಭ್ಯತೆಗಾಗಿ ಎತ್ತಿನಹೊಳೆ ಯೋಜನೆಯ ಮೂಲಕ ಕ್ಷೇತ್ರದ ಸುಮಾರು 190 ಕೆರೆಗಳನ್ನು ತುಂಬಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಎಲ್ಲರಿಗೂ ಸೂರು ಒದಗಿಸುವ ಉದ್ದೇಶದಿಂದ ವಸತಿ ಸಚಿವರೊಂದಿಗೆ ಮಾತನಾಡಿ ಸುಮಾರು 10 ಸಾವಿರ ಮನೆಗಳನ್ನು ಈ ಹಿಂದೆಯೇ ಮಂಜೂರು ಮಾಡಿಸಲಾಗಿತ್ತು. ಮತ್ತೆ ಹೆಚ್ಚುವರಿಯಾಗಿ 5000 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ.ಹೆಚ್ಚುವರಿ ಮನೆಗಳನ್ನು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಂಡಿ ದ್ದೇನೆ.ನಾನು ಹೈ.ಫೈ,ವೈಟ್ ಕಾಲರ್ ರಾಜಕಾರಣಿ ಎಂಬ ವಿರೋಧಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ತಲೆ ಕಡೆಸಿಕೊಳ್ಳದೆ, ವಿದ್ಯಾವಂತನಾಗಿ,ಜನರೊಂದಿಗೆ ಸದಾಕಾಲ ಬೆರತು ಕೆಲಸ ಮಾಡುತ್ತಾ ಬಂದಿದ್ದು,ನನ್ನ ಐದು ವರ್ಷಗಳ ರಿಪೊರ್ಟ್ ಕಾರ್ಡನ್ನು ಇಂದು ಜನರ ಮುಂದಿಟ್ಟಿದ್ದೇನೆ.ಪ್ರತಿ ಗ್ರಾ.ಪ.ವಾರು ಹೆಜ್ಜೆಯ ಗುರುತು ಕಿರು ಹೊತ್ತಿಗೆ ತಯಾರಾಗಿದ್ದು, ಪ್ರತಿ ಮನೆಗೂ ತಲುಪಿಸುವ ಕೆಲಸವನ್ನು ಮಾಡಲಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟ ಪಡಿಸಿದರು.
ನನ್ನ ಇದುವರೆಗಿನ ಕಾರ್ಯಕ್ರಮಗಳಲ್ಲದೆ ಮುಂದೆಯೂ ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಚಿಂತನೆ ನಡೆಸಿದ್ದು,ಕಲಾವಿದರೇ ಹೆಚ್ಚಾಗಿರುವ ಈ ಊರಿನಲ್ಲಿ ಒಂದು ಸಾಂಸ್ಕೃತಿಕ ಭವನ ನಿರ್ಮಾಣದ ಗುರಿ ಇದೆ.ಅಲ್ಲದೆ ತೋಟಗಾರಿಕಾ ಕ್ಷೇತ್ರದಲ್ಲಿ ತೋಟಗಾರಿಕಾ ಪಿತಾಮಹ ಡಾ.ಎಂ.ಹೆಚ್.ಮರಿಗೌಡರ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಯ ಗುರಿ ಹೊಂದಲಾಗಿದೆ.ಸಾಂಸ್ಕೃತಿಕ ಭವನಕ್ಕೆ ನಾನು ಡಿ.ಸಿ.ಎಂ. ಆಗಿದ್ದಾಗ ಸುಮಾರು 16 ಕೋಟಿ ರೂ ವೆಚ್ಚದ ಯೋಜನೆ ಸಿದ್ದಪಡಿಸಿ, ಜಾಗವನ್ನು ಗುರುತಿಸಲಾಗಿತ್ತು.ಸರಕಾರದ ಬದಲಾವಣೆಯಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅದು ಕೈಗೂಡಲಿದೆ ಎಂಬ ವಿಶ್ವಾಸವನ್ನು ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿದರು.
ರಾಜ್ಯಸರಕಾರದ ಇತ್ತೀಚಿನ ನಡವಳಿಕೆಯನ್ನು ಗಮನಿಸಿದರೆ ಆರ್ಥಿಕವಾಗಿ ದಿವಾಳಿಯಾಗಿರುವ ಸೂಚನೆಗಳು ಕಂಡು ಬರುತ್ತಿದೆ.ಶಾಲಾ ಮಕ್ಕಳಿಗೆ ಶೂ, ಸಮವಸ್ತç, ಪುಸ್ತಕಗಳನ್ನು ನೀಡಿಲ್ಲ. ಹೈಕೋರ್ಟ್ ಸಹ ಇವರ ನಡವಳಿಕೆಗೆ ಛೀಮಾರಿ ಹಾಕಿದೆ.ಹಾಗೇಯೆ ತುಮಕೂರು ವಿವಿಗೆ ಅನುದಾನ ನೀಡಿಲ್ಲ. ಎಸ್ಸಿಪಿ ಮತ್ತು ಟಿ.ಎಸ್ಪಿ ಅನುದಾನದಲ್ಲಿ ಹಾಸ್ಟಲ್ ಕಟ್ಟಡ ನಿರ್ಮಿಸಿರುವುದನ್ನು ಬಿಟ್ಟರೆ, ಬೇರೆ ಕಟ್ಟಡ ಇದುವರೆಗೂ ತಲೆ ಎತ್ತಿಲ್ಲ.ತುಮಕೂರು ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿವೆ. ಇದಕ್ಕೆ ಹಣಕಾಸಿನ ಕೊರತೆಯೇ ಕಾರಣ. ಸರಕಾರ ಈ ಸಾಲಿನ ಬಜೆಟ್‌ನಲ್ಲಿ ಈ ಎಲ್ಲಾ ಯೋಜನೆಗಳಿಗೆ ಹೆಚ್ಚುವರಿ ಹಣ ಮಂಜೂರು ಮಾಡಬೇಕು, ಹಾಗೆಯೇ ಸರಕಾರದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಜನರಿಗೆ ತಿಳಿಸಬೇಕೆಂದು ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker