ಜನಪರ ಆಡಳಿತದಿಂದ ಬಿಜೆಪಿಗೆ ಶ್ರೀರಕ್ಷೆ : ಪ್ರೇಮ ನಾಗಯ್ಯ
ಒಬಿಸಿ ಮೋರ್ಚಾ ತುಮಕೂರು ಗ್ರಾಮಾಂತರ ಮಂಡಲದ ಕಾರ್ಯಕಾರಿಣಿ ಸಭೆ
ತುಮಕೂರು : ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸಿರುವ ಬಿಜೆಪಿ, ಎಲ್ಲರ ಕಲ್ಯಾಣ, ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮತ್ತು ತುಮಕೂರು ಜಿಲ್ಲಾ ಒಬಿಸಿ ಮೋರ್ಚಾ ಪ್ರಭಾರಿ ಪ್ರೇಮ ನಾಗಯ್ಯ ಅಭಿಪ್ರಾಯ ವ್ಯಕ್ತಪಡಿಸಿ, ಬಿಜೆಪಿ ಜನಪರ ಕಾರ್ಯಕ್ರಮಗಳಿಗೆ ಜನತೆಯ ಶ್ರೀರಕ್ಷೆ ಇದೆ ಎಂದರು.
ಇವರು ಬಿಜೆಪಿ ಶಕ್ತಿ ಸೌಧದಲ್ಲಿ ನಡೆದ ಒಬಿಸಿ ಮೋರ್ಚಾದ ತುಮಕೂರು ಗ್ರಾಮಾಂತರ ಮಂಡಲದ ಕಾರ್ಯಕಾರಿಣಿ ಸಭೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ, ತುಮಕೂರು ಗ್ರಾಮಾಂತರದಲ್ಲಿ ಶಾಸಕರಾಗಿದ್ದ ಬಿ.ಸುರೇಶ್‌ಗೌಡರು ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗೆ 2000ಕೋಟಿ ರೂ.ಗಳ ದಾಖಲೆಯ ಅನುದಾನ ತಂದಿದ್ದರು. ಇದೊಂದು ಸರ್ಕಾರದಿಂದ ಬಾರೀ ಅನುದಾನ ಪಡೆದ ಸರ್ವಕಾಲಿಕ ದಾಖಲೆಯಾಗಿತ್ತು. ಅಭಿವೃದ್ಧಿಯ ಹರಿಕಾರ ಬಿ.ಸುರೇಶ್‌ಗೌಡ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು. ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವಲ್ಲಿ ಕಾರ್ಯಕರ್ತರು ವಿಫಲರಾಗಿದ್ದರಿಂದ ಬಿ.ಸುರೇಶ್‌ಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ತುಮಕೂರು ಗ್ರಾಮಾಂತರ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕೆಂದರು.
ಅಭಿವೃದ್ಧಿ ಚಟುವಟಿಕೆ ಮನೆ-ಮನಗಳಿಗೆ ತಲುಪಿಸಿ : ಬನಶಂಕರಿ ಬಾಬು
ಸಭೆಯಲ್ಲಿ ಮಾತನಾಡಿದ ಒಬಿಸಿ ತುಮಕೂರು ಜಿಲ್ಲಾ ಉಪಾಧ್ಯಕ್ಷ ಬನಶಂಕರಿ ಬಾಬು ಮಾತನಾಡುತ್ತಾ, ಹಿಂದಿನ ಬಾರಿ ಶಾಸಕರಾಗಿದ್ದ ಬಿ.ಸುರೇಶ್‌ಗೌಡ ಬಾರೀ ಅನುದಾನಗಳ ಮೂಲಕ ಜನಮನ್ನಣೆ ಪಡೆದಿದ್ದರು. ಆದರೆ ಚುನಾವಣೆಯಲ್ಲಿ ಸೋತಿದ್ದು ವಿಶಾದನೀಯವಾಗಿದೆ. ಮುಂದಿನ ವಿಧಾನಸಭಾ ಮಹಾಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಒಬಿಸಿ ಜನಾಂಗ ಅಶೀರ್ವಾದಿಸಲಿ ಎಂದರು.
ಜನರ ಸ್ಪಂದನೆಗೆ ಶಕ್ತಿ ಸೌಧ ಆರಂಭ : ಕೆ.ವೇದಮೂರ್ತಿ
ಇದೇ ಸಂರ್ಧದಲ್ಲಿ ಮಾತನಾಡಿದ ಒಬಿಸಿ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವೇದಮೂರ್ತಿ, ತುಮಕೂರು ಗ್ರಾಮಾಂತರದಲ್ಲಿ ಜನರ ನೈಜ, ಸಮಸ್ಯೆಗಳನ್ನು ಅರಿತು ಜನ ಸ್ಪಂದನೆ ಮಾಡುವ ದೃಷ್ಠಿಯಿಂದ ಬಿಜೆಪಿಯು “ಶಕ್ತಿ ಸೌಧ” ನಿರ್ಮಿಸಿ, ಜನಸ್ಪಂದನೆಯ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಮಾಧ್ಯಮ, ಸಾಮಾಜಿಕ ಜಾಲತಾಣ ಬಳಸಿ : ನಾಗೇಶ್ ವಿ.ಬಿ
ಬಿಜೆಪಿ ಕೇಂದ್ರ, ರಾಜ್ಯ ಡಬ್ಬಲ್ ಇಂಜಿನ್ ಸರ್ಕಾರಗಳು ನೀಡಿರುವ ಯೋಜನೆ, ಅನುದಾನ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಿಜೆಪಿ ಕಾರ್ಯಕರ್ತರು ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಜನತೆ ತಲುಪಿಸಲು ಮುಂದಾಗುವAತೆ ಒಬಿಸಿ ಮೋರ್ಚಾ ಜಿಲ್ಲಾ ಮಾಧ್ಯಮ ಸಂಚಾಲಕ ನಾಗೇಶ್.ವಿ.ಬಿ ಕರೆ ನೀಡಿದರು.
ಮತ್ತೊಮ್ಮೆ ಬಿ.ಸುರೇಶ್‌ಗೌಡ ಗೆಲುವು : ಶಿವಕುಮಾರ್ ವಿಶ್ವಾಸ
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಮಂಡಲದ ಒಬಿಸಿ ಅಧ್ಯಕ್ಷ ಶಿವಕುಮಾರ್, ಭರಪೂರ ಅಭಿವೃದ್ಧಿ ಕಾರ್ಯಕ್ರಮಗಳು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ನಡೆದಿತ್ತು. ಕಾರ್ಯಕರ್ತರು ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಲು ಒಬಿಸಿ ಮೋರ್ಚಾ ಜಾಗೃತವಾಗಿ ಬಿ.ಸುರೇಶ್‌ಗೌಡ ಕನಿಷ್ಠ 20 ಸಾವಿರ ಮತಗಳ ಅಂತರದಿAದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಹನುಮಂತರಾಜು ಸೇರಿದಂತೆ ಮಂಡಲದ ವಿವಿಧ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಸಭೆಯಲ್ಲಿ ಒಬಿಸಿ ಮೋರ್ಚಾ ತುಮಕೂರು ಗ್ರಾಮಾಂತರ ಪ್ರಧಾನಕಾರ್ಯದರ್ಶಿ ಪ್ರಕಾಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿಣಿ ಸದಸ್ಯ ಈರೇಗೌಡ ವಂದಿಸಿದರು.