ರಾಜ್ಯ

205ನೇ ಐತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವ ಸಂಭ್ರಮ ಆಚರಣೆ : ಭೀಮಾ ಕೋರೆಗಾಂವ್ ಕದನ ದಲಿತರ ಸ್ವಾಭಿಮಾನದ ಪ್ರತೀಕ : ಪೋಲಿಸ್ ಕಮಿಷನರ್ ಡಾ.ಮನಂ

ಬೆಂವಿವಿಯಿಂದ: ಭೀಮಾ ಕೋರೆಗಾಂವ್ ವೀರ ಯೋಧರಿಗೆ ನುಡಿ ನಮನ ಸ್ಮರಣೆ

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಬೆಂಗಳೂರು ವಿವಿ ಆಡಳಿತ ಕಚೇರಿಯಿಂದ ಅಧ್ಯಯನ ಕೇಂದ್ರದವರಿಗೆ ಅಂಬೇಡ್ಕರ್ ಫೋಟೋ ಜತೆಜತೆಗೆ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಆಡಳಿತ ವರ್ಗ, ಬೋಧಕ- ಬೋಧಕೇತರ ವರ್ಗ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಾಲಾರ್ಪಣೆ ಮತ್ತು ಪುಷ್ಪನಮನ ಸಲ್ಲಿಸುವ ಮೂಲಕ 205 ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಸಂಭ್ರಮ ಹಾಗೂ ವೀರ ಯೋಧರಿಗೆ ನುಡಿ ನಮನ ಕಾರ್ಯಕ್ರಮವನ್ನು ಇಂದಿಲ್ಲಿ ಆಚರಿಸಲಾಯಿತು.

ಬೆಂವಿವಿಯಿಂದ ಆಯೋಜಿಸಿದ್ದ 205ನೇ ಐತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವ ಸಂಭ್ರಮ ಆಚರಣೆಯನ್ನು ವಿಷಯದ ಕುರಿತಾದ ನಿಮಿತ್ತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಾ. ಜಯಕರ್ ಎಸ್.ಎಂ, ಕುಲ ಸಚಿವರಾದ ಎನ್.ಮಹೇಶ್ ಬಾಬು, ಸಿಂಡಿಕೇಟ್ ಸದಸ್ಯ ಡಾ.ಸುಧಾಕರ್ ಎಚ್, ಅಧ್ಯಯನ ನಿರ್ದೇಶಕರಾದ ಡಾ.ಎನ್.ಸಂಜೀವ್ ರಾಜ್ ಹಾಗೂ ಮತ್ತಿತರರು ಗಣ್ಯರು
ಬಾಬಾಸಾಹೇಬರ ಮೆರವಣಿಗೆಗೆ ಚಾಲಿನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರವರು ವಿಶ್ವದ ಎರಡು ಮಹಾಯುದ್ಧಗಳು ನಡೆದರೆ ಅದಕ್ಕೆ ಇತಿಹಾಸಕಾರರು ದಾಖಲೆ ನಿರ್ಮಿಸಿದಾರೆ, ಆದರೆ ಭೀಮಾ ಕೋರೆಗಾಂವ್ ಕದನ ಬಗ್ಗೆ ಐತಿಹಾಸಿಕ ಮಾಹಿತಿಯನ್ನು ಡಾ.ಬಿ.ಅರ್.ಅಂಬೇಡ್ಕರ್ ರವರು ಮಾತ್ರವೇ ದಾಖಲಿಸಿದ ಕೀರ್ತಿ ಇವರಿಗೆ ಸಲ್ಲಬೇಕಿದೆ ಎಂದರು.

ಕೋರೆಗಾಂವ್ ನಲ್ಲಿ ನಡೆದ ದಲಿತರ ದಿಗ್ವಿಜಯ ವನ್ನು ಅಂಬೇಡ್ಕರ್ ರವರು ಬರುವ ತನಕ ಯಾವ ಇತಿಹಾಸಕಾರರು ಉಲ್ಲೇಖಿಸಿಲು ಸಾಧ್ಯವೇ ಆಗಿರಲಿಲ್ಲ. ಇನ್ನು ಮುಂದಾದರು ಇತಿಹಾಸದತ್ತ ಗಮನ ಹರಿಸುವ ಮೂಲಕ ಹೊಸ ಬೆಳಕು ಚೆಲ್ಲಬೇಕಿದೆ ಇದಕ್ಕೆ ಸಂಶೋಧನಾರ್ಥಿಗಳು ಮುಂದೆ ಬರಬೇಕೆಂದರು.

ನಂತರ ಮಾತನಾಡಿದ ಪೋಲಿಸ್ ಮಹಾ ನಿರ್ದೇಶಕರಾದ ಡಾ. ಎಂ. ನಂಜುಂಡಸ್ವಾಮಿ ರವರು ಬೆಂಗಳೂರು ವಿಶ್ವವಿದ್ಯಾಲಯವು ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿನ ಆಯೋಜಿಸಿದ 205ನೇ ಐತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ಮನಂ ರವರು ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಬಂಧುಗಳಿಗೆ ಶುಭ ಕೋರುತ್ತಾ, ಬ್ರಿಟೀಷರು ಮತ್ತು ಶಿವಾಜಿ ಇತರರು ಸೇರಿದಂತೆ ಹಲವು ರಾಜಮನೆತಗಳಲ್ಲಿ ದಲಿತರು ಸೇನೆ ಹಾಗೂ ಇನ್ನಿತರ ಅಧಿಕಾರಿ ಕಾಯಕದಲ್ಲಿದ್ದರು.

ಮಹಾರ್ ಸಮುದಾಯದವರನ್ನು ಅತಿಹೆಚ್ಚಿನ ಸಂಖ್ಯೆಯಲ್ಲಿ ಶಿವಾಜಿಯ ಸಾಮ್ರಾಜ್ಯದಲ್ಲಿದ್ದರು. ದುರಾದೃಷ್ಟವಶಾತ್ 1680ರಲ್ಲಿ ಶಿವಾಜಿ ಮಹಾರಾಜರು ಮಡಿದ ನಂತರ ಪೇಶ್ವೆಗಳು ಅಧಿಕಾರಕ್ಕೆ ಬಂದರು. ಪೇಶ್ವೆಗಳು ಮೂಲತಃ ಎಲ್ಲಕ್ಕಿಂತ ಮಿಗಿಲಾಗಿ ವ್ಯವಸ್ಥೆ ಪಾರಿಪಾಲಕರು, ಇದರ ಬಗ್ಗೆ ವಿಸ್ತಾರವಾಗಿ ಪೋಲಿಸ್ ಮಹಾ ನಿರ್ದೇಶಕರಾದ ಡಾ. ಎಂ. ನಂಜುಂಡ ಸ್ವಾಮಿವರು ಭೀಮಾ ಕೋರೆಗಾಂವ್ ಕದನ ಬಗ್ಗೆ ಐತಿಹಾಸಿಕವಾಗಿ ಹಾಗೂ ವಿಸ್ತಾರವಾದ ಮಾಹಿತಿ ನೀಡಿದರು.

ನಂತರದಲ್ಲಿ ಪ್ರೊ.ಬಿ.ಸಿ.ಮೈಲಾರಪ್ಪ, ಡಾ.ಎಂ.ವೆಂಕಟ ಸ್ವಾಮಿ ಹಾಗೂ ಮತ್ತಿತರರು ಗಣ್ಯರು ಇದೇ ಸಂದರ್ಭದಲ್ಲಿ ಕೋರೆಗಾಂವ್ ಕದನ ಬಗ್ಗೆ ಮಾತನಾಡಿದರು.

ಕೊನೆಯಲ್ಲಿ ಭೀಮಾ ಕೋರೆಗಾಂವ್ ವಿಜಯ ಸ್ತಂಭಕ್ಕೆ ಗಣ್ಯರು, ಮತ್ತಿತರರು ಕ್ಯಾಂಡಲ್ ಹಂಚುವ ಮೂಲಕ ಭೀಮಾ ಕೋರೆಗಾಂವ್ ಕದನದಲ್ಲಿ ಮಡಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು, ಹಾಗೆಯೇ ಭೀಮಾ ಕೋರೆಗಾಂವ್ ಕದನ ಬಗ್ಗೆ, ಕ್ರಾಂತಿ ಗೀತೆಗಳು, ಜನಪರ ಗೀತೆಗಳು, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಎನ್. ಸಂಜೀವ್ ರಾಜ್, ಸಿಂಡಿಕೇಟ್ ಸದಸ್ಯರಾದ ಡಾ. ಎಚ್. ಸುಧಾಕರ್, ನಿವೃತ್ತ ಜಿಲ್ಲಾ ಸತ್ರ ನ್ಯಾಯದೀಶರಾದ ಜಿ.ಎಂ.ಶೀನಪ್ಪ, ಡಾ.ಅಪ್ಪಗೆರೆ ತಿಮ್ಮರಾಜು, ಪ್ರೊ.ಜೆ.ಟಿ.ದೇವರಾಜು, ಅಜೀತ್ ಕುಮಾರ್ ಹೆಗಡೆ, ಪ್ರೊ.ಬಿ.ಕೆ. ರವಿ, ಪ್ರೊ.ಟಿ.ಎಚ್.ಮೂರ್ತಿ, ಬಿ.ಗಂಗಾಧರ, ಪ್ರೊ.ಎಂ.ಹನುಮಂತಪ್ಪ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ನಿರ್ದೇಶಕ ಅಶೋಕ ಎನ್. ಛಲವಾದಿ, ಪ್ರಾಧ್ಯಾಪಕರಾದ ಪ್ರೊ.ಬಿ.ಸಿ.ಮೈಲಾರಪ್ಪ, ಡಾ.ಹೊನ್ನು ಸಿದ್ದಾರ್ಥ, ಡಾ.ಪಿ.ಸಿ. ಕೃಷ್ಣಸ್ವಾಮಿ, ಡಾ. ಕೆ. ಕೃಷ್ಣಮೂರ್ತಿ, ಡಾ.ಸಿ.ಡಿ.ವೆಂಕಟೇಶ್, ಡಾ.ಕೆ.ಜಿ. ಜಯರಾಮ ನಾಯ್ಕ್, ಡಾ. ಸಿ. ಸೋಮಶೇಖರ್, ವಿಶ್ವವಿದ್ಯಾಲಯದ ಅಭಿಯಂತರರಾದ ಬಿ.ಟಿ.ಚಂದ್ರಶೇಖರ್, ವಿಶ್ವವಿದ್ಯಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಶಿವಪ್ಪ, ವಿವಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಬಿ. ದಿನೇಶ್, ಇತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker